handbags from orange peels : ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಾಯ್ತು ಹ್ಯಾಂಡ್​ಬ್ಯಾಗ್​

handbags from orange peels : ಫ್ಯಾಷನ್​ ಜಗತ್ತಿನಲ್ಲಿ ಏನೆಲ್ಲ ಹೊಸ ಆವಿಷ್ಕಾರಗಳು ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಟ್ರೆಂಡ್​ಗೆ ತಕ್ಕಂತೆ ನಾನಾ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ . ಕಡಿಮೆ ದರದಿಂದ ಹಿಡಿದು ಚಿನ್ನದ ಬೆಲೆಯವರೆಗೂ ನಿಮಗೆ ಫ್ಯಾಷನ್​ ವಸ್ತುಗಳು ಸಿಗುತ್ತವೆ. ಅದರಲ್ಲೂ ಹ್ಯಾಂಡ್​ ಬ್ಯಾಗ್​ಗಳು ಎಂದಿಗೂ ಫ್ಯಾಷನ್​ ಟ್ರೆಂಡ್​ನಿಂದ ಹೊರಗೆ ಹೋಗುವುದೇ ಇಲ್ಲ. ಹ್ಯಾಂಡ್​ ಬ್ಯಾಗ್​ಗಳಲ್ಲಿ ಅನೇಕ ಮಾದರಿಗಳು ಇವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಎಂಬಂತೆ ಫುಡ್​ ಕಲಾವಿದರೊಬ್ಬರು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಹ್ಯಾಂಡ್​ ಬ್ಯಾಗ್​ವೊಂದನ್ನು ತಯಾರಿಸಿದ್ದು ಇದನ್ನು ನೋಡಿದ ಫ್ಯಾಷನ್​ ಪ್ರಿಯರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.


ಖ್ಯಾತ ಆಹಾರ ಕಲಾವಿದ ಹಾಗೂ ಮಾಲಿಕ್ಯೂಲಾರ್​ ಗ್ಯಾಸ್ಟ್ರೊನಿಮಿಸ್ಟ್​ ಓಮರ್​ ಸರ್ತವಿ ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ಹ್ಯಾಂಡ್ ಬ್ಯಾಹ್​ ತಯಾರಿಸ್ದಾರೆ. ಡಿಜಿಟಲ್​ ಫ್ಯಾಬ್ರಿಕೇಷನ್​ ಎಂದು ಕರೆಯಲ್ಪಡುವ ಒಂದು ತಂತ್ರವನ್ನು ಬಳಕೆ ಮಾಡಿಕೊಂಡು ಲೇಸರ್​ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಇಂತಹದ್ದೊಂದು ಐಷಾರಾಮಿ ಬ್ಯಾಗ್​ನ್ನು ತಯಾರಿಸಿದ್ದಾರೆ. ಈ ಹ್ಯಾಂಡ್​ ಬ್ಯಾಗ್​ ತಯಾರು ಮಾಡಲು ಸುಮಾರು 2 ವಾರಗಳ ಸಮಯವನ್ನು ತೆಗೆದುಕೊಳ್ಳಲಾಗಿದೆ.


ಹ್ಯಾಂಡ್ ಬ್ಯಾಗ್​ ತಯಾರಿಸುವ ಹಂತಗಳನ್ನು ವಿಡಿಯೋ ಮೂಲಕ ತೋರಿಸಿದ್ದು ಇದನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡುವ ಓಮರ್​, ನಾನು ಹಣ್ಣುಗಳು ಹಾಗೂ ತರಕಾರಿ ಸಿಪ್ಪೆಗಳನ್ನು ಹೊಸ ರೀತಿಯಲ್ಲಿ ಬಳಕೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ಪರಿಸರ ಸ್ನೇಹಿ ವಸ್ತುಗಳನ್ನು ಐಷಾರಾಮಿ ವಸ್ತುಗಳನ್ನಾಗಿ ಪರಿವರ್ತನೆ ಮಾಡುವುದು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ನಾನು ಪರಿಸರ ಸ್ನೇಹಿ ತಂತ್ರಜ್ಞಾನಗಳ ಮೂಲಕ ಫ್ಯಾಷನ್​ ವಸ್ತುಗಳು, ಉತ್ತಮ ಗುಣಮಟ್ಟದ ಬ್ಯಾಗ್​ಗಳು ಹಾಗೂ ವಸ್ತುಗಳನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ.


ಅಂದಹಾಗೆ ಓಮರ್ ಹಣ್ಣು ಅಥವಾ ತರಕಾರಿ ಸಿಪ್ಪೆಗಳನ್ನು ಬಳಕೆ ಮಾಡಿ ಫ್ಯಾಶನ್​ ವಸ್ತುಗಳನ್ನು ತಯಾರಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಬದನೆ ಕಾಯಿ ಸಿಪ್ಪೆಗಳನ್ನು ಬಳಕೆ ಮಾಡಿ ಮಾಸ್ಕ್​ ತಯಾರಿಸಿದ್ದರು. ಫ್ಯಾಷನ್​ ಲೋಕದ ಟ್ರೆಂಡ್​ ಪಾಲಿಸುವ ದೃಷ್ಟಿಯಿಂದ ಪರಿಸರಕ್ಕೆ ಹಾನಿ ಮಾಡುವ ವಸ್ತುಗಳನ್ನು ತಯಾರಿಸುವ ಬದಲು ಸಾವಯವ ವಸ್ತುಗಳಿಂದ ಫ್ಯಾಷನ್​​ ವಸ್ತುಗಳನ್ನು ತಯಾರಿಸರೆ ಪ್ರಕೃತಿಗೂ ಯಾವುದೇ ಹಾನಿ ಇಲ್ಲ ಎಂಬುದು ಓಮರ್​ ವಾದವಾಗಿದೆ.

Designer creates luxury handbags from orange peels

ಇದನ್ನು ಓದಿ : Woman marries pink colour : ಗುಲಾಬಿ ಬಣ್ಣದ ಜೊತೆ ವಿವಾಹವಾದ ಮಹಿಳೆ

ಇದನ್ನೂ ಓದಿ : Shilpa Shetty: ಟ್ರೆಂಡಿ ಫ್ಯಾಷನ್‌ನಲ್ಲಿ ಕಂಗೊಳಿಸುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

Comments are closed.