Omicron Experts issue Warning : ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳ ಬಗ್ಗೆ ಆತಂಕ ಹೊರಹಾಕಿದ ತಜ್ಞರು

Omicron  :ದೇಶದಲ್ಲಿ ಕೊರೊನಾ ಮೂರನೇ ಅಲೆಯ ಪ್ರಾರಂಭವಾಗಿದ್ದು ಪ್ರತಿ ದಿನ ವರದಿಯಾಗುತ್ತಿರುವ ಕೇಸುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಕೊರೊನಾ ಪ್ರಕರಣದಲ್ಲಿ ಈ ರೀತಿಯ ಅತಿಯಾದ ಏರಿಕೆಗೆ ಹೊಸದಾಗಿ ಕಂಡುಬರುತ್ತಿರುವ ಓಮಿಕ್ರಾನ್​ ರೂಪಾಂತರಿಯೇ ಕಾರಣವಾಗಿದೆ. ಆದರೆ ಇಲ್ಲಿಯವರೆಗೆ ಓಮಿಕ್ರಾನ್​ ಸಮುದಾಯಕ್ಕೆ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಡೆಲ್ಟಾ ರೂಪಾಂತರಿಯು ಎರಡನೇ ಅಲೆಗೆ ಕಾರಣವಾಗಿತ್ತು. ಇದೀಗ ಓಮಿಕ್ರಾನ್​ ರೂಪಾಂತರಿಯು ಮೂರನೇ ಅಲೆಯನ್ನು ಸೃಷ್ಟಿಸುತ್ತದೆ ಎಂದು ತಜ್ಞರು (Omicron Experts issue Warning) ಹೇಳಿದ್ದಾರೆ. ಇದಕ್ಕೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್​ ಪ್ರಕರಣಗಳ ಸಂಖ್ಯೆಯೇ ನೈಜ ಉದಾಹರಣೆಯಾಗಿದೆ.

ಡೆಲ್ಟಾ ರೂಪಾಂತರಿಗೆ ಹೋಲಿಕೆ ಮಾಡಿದರೆ ಓಮಿಕ್ರಾನ್​ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿದೆ. ಆದ್ದರಿಂದ ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ ಕೆಲವು ದಿನಗಳಿಂದ ಟಿಪಿಆರ್​ ಹಾಗೂ ದೈನದಿಂದ ಕೋವಿಡ್​ ಸಂಖ್ಯೆಯು ಮಿತಿಮೀರಿದೆ. ಹೀಗಾಗಿ ಓಮಿಕ್ರಾನ್​ ರೂಪಾಂತರಿಯು ಸಮುದಾಯಕ್ಕೆ ಹರಡಿದೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಆದರೆ ಜನರಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗಿಲ್ಲ ಎಂದು ಆರೋಗ್ಯ ತಜ್ಞ ಡಾ. ಪದ್ಮನಾಭ ಶೆಣೈ ಹೇಳಿದ್ದಾರೆ.

ಓಮಿಕ್ರಾನ್​ ಸೋಂಕಿನ ಲಕ್ಷಣಗಳು ನಿಮಗೆ ಸಾಮಾನ್ಯ ಜ್ವರದಂತೆ ಕಂಡುಬಂದರೂ ಸಹ ಇದನ್ನು ಸಾಮಾನ್ಯವೆಂದು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ದಿನಗಳಲ್ಲಿ ಸಾಮಾನ್ಯ ಜ್ವರಗಳಿಂದಾಗಿ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಲ್ಲಿ ಎಲ್ಲರೂ ಕೋವಿಡ್​ ಪರೀಕ್ಷೆಗೆ ಒಳಗಾಗುತ್ತಿಲ್ಲ. ಹೀಗಾಗಿ ಇವರಲ್ಲಿ ಎಷ್ಟು ಜನರಿಗೆ ಓಮಿಕ್ರಾನ್​ ರೂಪಾಂತರಿ ಇದೆ ಎಂಬುದರ ಅರಿವಾಗೋದಿಲ್ಲ. ನಾವು ಈಗ ಕೊರೊನಾ ಮೂರನೇ ಅಲೆಯ ಪ್ರಾರಂಭಿಕ ಹಂತದಲ್ಲಿ ಇರುವ ಹಿನ್ನೆಲೆಯಲ್ಲಿ ಕೋವಿಡ್​ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಡಾ. ಶೆಣೈ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : Covid-19 danger list : ಕರಾವಳಿಗರು ಮೈ ಮರೆತ್ರೆ ಅಪಾಯ ಫಿಕ್ಸ್‌ : ದ.ಕ., ಉಡುಪಿಗೆ ಕೊರೊನಾ ಜೊತೆ ಓಮಿಕ್ರಾನ್‌ ಕಂಟಕ

ಇದನ್ನೂ ಓದಿ : Fresh COVID-19 Case : ದೇಶದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 1.17 ಲಕ್ಷ ಪ್ರಕರಣ ವರದಿ

Delta-Omicron combo could fuel third Covid wave in Kerala: Experts issue warning

Comments are closed.