Bangalore Banashankari Temple : ಬನಶಂಕರಿಯಮ್ಮ ಪೂಜೆಗೂ ಆನ್ ಲೈನ್ ಟೋಕನ್: ಗಂಟೆಗಟ್ಟಲೇ ಕ್ಯೂ ನಿಲ್ಲೋದಿಕ್ಕೆ ಬಿತ್ತು ಬ್ರೇಕ್

Bangalore Banashankari Temple : ಇತ್ತೀಚಿಗೆ ದೇವಾಲಯಗಳಲ್ಲಿ ಭಕ್ತರೋ ಭಕ್ತರು. ಹೀಗಾಗಿ ನೀವು ಯಾವ ದೇವಾಲಯಕ್ಕೆ ಹೋದರೂ ಪೂಜೆ,ಪ್ರಾರ್ಥನೆ ಹಾಗೂ ವಿಶೇಷ ಅರ್ಚನೆಗಾಗಿ ಕ್ಯೂ ನಿಲ್ಲಲೇ ಬೇಕು.

Bangalore Banashankari Temple : ಇತ್ತೀಚಿಗೆ ದೇವಾಲಯಗಳಲ್ಲಿ ಭಕ್ತರೋ ಭಕ್ತರು. ಹೀಗಾಗಿ ನೀವು ಯಾವ ದೇವಾಲಯಕ್ಕೆ ಹೋದರೂ ಪೂಜೆ,ಪ್ರಾರ್ಥನೆ ಹಾಗೂ ವಿಶೇಷ ಅರ್ಚನೆಗಾಗಿ ಕ್ಯೂ ನಿಲ್ಲಲೇ ಬೇಕು. ಪೂಜೆಯ ರಸೀತಿ ಪಡೆಯೋದಿಕ್ಕೆ ತಾಸುಗಟ್ಟಲೇ ಕ್ಯೂ ನಿಲ್ಲೋ ಪರಿಸ್ಥಿತಿ ಇದೆ. ಆದರೆ ಭಕ್ತರಿಗಾಗಿ ತಮ್ಮ ವ್ಯಾಪ್ತಿಯ ದೇವಾಲಯಗಳನ್ನು ಹೈಟೆಕ್ ಮಾಡ್ತಿರೋ ಮುಜರಾಯಿ ಇಲಾಖೆ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಾಲಯ (Bangalore Banashankari Temple)ಕ್ಕೆ ಡಿಜಿಟಲ್ ಟಚ್ ಕೊಡಲು ಮುಂದಾಗಿದೆ.

Bangalore Banashankari Temple Online token for Pooja Queue for hours breaks
Image Credit to Original Source

ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇಗುಲಗಳ ಅಭಿವೃದ್ಧಿಗೆ ಮುಂದಾಗಿದೆ ಅಲ್ಲದೇ ದೇವಾಲಯಕ್ಕೆ ಡಿಜಿಟಲ್ ಟಚ್‌ ಕೂಡಾ ನೀಡ್ತಿದೆ.‌ ಇತ್ತೀಚಗಷ್ಟೆ ಮುಜರಾಯಿ ಇಲಾಖೆ ಆನ್‌ಲೈನ್ ಸೇವೆ ಆರಂಭಿಸಿತ್ತು. ಈ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ನಗರದ ಶ್ರೀಮಂತ ದೇಗುಲದಲ್ಲಿ ಅರ್ಚನೆ, ಅಭಿಷೇಕ, ಹಾಗೂ ಇತರೆ ಸೇವೆಗಳಿಗೆ ಭಕ್ತರೇ ಸೆಲ್ಫ್ ಟೋಕನ್ ಪಡೆಯುವ ವ್ಯವಸ್ಥೆ ಆರಂಭಿಸಲು ಮುಂದಾಗಿದೆ. ಇಂತಹದೊಂದು ಪೈಲೆಟ್ ಪ್ರಾಜೆಕ್ಟ್‌ನ್ನು ಮೊದಲ ಬಾರಿಗೆ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಅಳವಡಿಸಲಾಗ್ತಿದೆ.

ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ದಿನನಿತ್ಯ ನೂರಾರು ಭಕ್ತರು ಭೇಟಿ ನೀಡ್ತಾರೆ. ಬಂದವರು ದೇಗುಲದ ಆವರಣದಲ್ಲಿ ಅರ್ಚನೆ, ಅಭಿಷೇಕ ಅಥವಾ ಬೇರೆ ಸೇವೆಗಳಿಗೆ ಟೋಕನ್ ಪಡೆಯಲು ಭಕ್ತರು ಕ್ಯೂ ನಿಲ್ಲೋ ಪರಿಸ್ಥಿತಿ ಇತ್ತು. ಗಂಟೆಗಟ್ಟಲೆ ಕೇವಲ ಟೋಕನ್ ಪಡೆಯೋದಕ್ಕೆ ಕಾಯಬೇಕಿತ್ತು. ಇದನ್ನ ತಪ್ಪಿಸುವ ಸಲುವಾಗಿ, ದೇಗುಲದಲ್ಲಿ ಸೆಲ್ಫ್ ಕಿಯೋ ಮಿಷನ್ ಅಳವಡಿಸಲಾಗಿದೆ.‌ ಇದು ಸೇಮ್ ಟು ಸೇಮ್ ಹೋಟೆಲ್‌ಗಳಲ್ಲಿ ನಮಗೆ ಏನು ಊಟ ತಿಂಡಿಗೆ ಬೇಕೋ ಸೆಲೆಕ್ಟ್ ಮಾಡಿ, ಹಣವನ್ನ ಪೇಮೆಂಟ್ ಮಾಡಿ ಸೆಲ್ಫ್ ಟೋಕನ್ ಪಡೆಯೋ ರೀತಿಯೇ ಇದೆ.

ಇದನ್ನೂ ಓದಿ : ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ ಕಚ್ಚಲ್ಲ ಹಾವು

ಈ ಮಿಷನ್‌ ಮೇಲಿನ ಡಿಸ್‌ಪ್ಲೇಯಲ್ಲಿ ದೇಗುಲಕ್ಕೆ ಸಂಬಂಧಪಟ್ಟ ಅರ್ಚನೆ, ಅಭಿಷೇಕ, ಅನ್ನದಾನ ಸೇವೆ, ಹಾಗೂ ಎಲ್ಲಾ ಬಗೆಯ ಸೇವೆಗಳ ಆಪ್ಷನ್ ನೀಡಲಾಗಿರುತ್ತೆ. ಇದ್ರಲ್ಲಿ ಯಾವ ಸೇವೆ ಟೋಕನ್ ಬೇಕೋ ಅದನ್ನ ಸೆಲೆಕ್ಟ್ ಮಾಡಿ, ಹಣವನ್ನ ಫೋನ್ ಪೇ ಮಾಡಿದ್ರೆ ಸಾಕು ನಿಮ್ಮ ಸೇವೆಯ ಟೋಕನ್ ಬರುತ್ತೆ.

Bangalore Banashankari Temple Online token for Pooja Queue for hours breaks
Image Credit to Original Source

ಇನ್ನು ಇದೇ ಮೊದಲ ಬಾರಿಗೆ ಈ ರೀತಿಯ ಸಿಸ್ಟಮ್ ಪರಿಚಯ ಮಾಡಲಾಗ್ತಿದೆ. ಮೊದಲ ಹಂತದಲ್ಲಿ ಎರಡು ಮೆಷನ್‌‌ಗಳನ್ನ ಅಳವಡಿಸಲಾಗ್ತಿದೆ. ಇದ್ರಿಂದ ಬೇಗ ಟೋಕನ್ ಪಡೆಯುಬೇಕಾದವರು ನೇರವಾಗಿ ಚೀಟಿ ಪಡೆಯಬಹುದು. ಈಗಾಗಲೇ ದೇಗುದಲ್ಲಿ ಮೆಷನ್ ಅಳವಡಿಸಿ, ಸಾಫ್ಟ್‌ವೇರ್ ಕೂಡಾ ಅಪ್‌ಡೇಟ್ ಮಾಡಲಾಗಿದೆ.‌ ಶುಕ್ರವಾರದಿಂದ ಇದನ್ನ ಭಕ್ತರ ಸೇವೆಗೆ ನೀಡಲು ಸಿದ್ಧತೆ ಮಾಡಲಾಗ್ತಿದೆ. ಇದ್ರಿಂದ ಬರುವ ಭಕ್ತರು ಈ ಸೇವೆಯಿಂದ ನಮಗೆ ಅನುಕೂಲವಾಗುತ್ತೆ ಅಂತ ಸಂತಸ ವ್ಯಕ್ತಪಡಿಸ್ತಿದ್ದಾರೆ.

ಇದನ್ನೂ ಓದಿ :ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

ಒಟ್ನಲ್ಲಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸೇವೆ ಟೋಕನ್ ಪಡೆಯಲು ಭಕ್ತರು ಕ್ಯೂನಲ್ಲಿ‌ ಕಾಯುವ ಪರಿಸ್ಥಿತಿ ಎದುರಾಗ್ತಿತ್ತು. ಆದ್ರೆ ಇನ್ಮುಂದೆ ಬನಶಂಕರಿ ದೇಗುಲದಲ್ಲಿ ಕ್ಯೂ‌ನಿಲ್ಲೋ ಅವಶ್ಯಕತೆ ಇಲ್ಲ. ಮೊದಲ ಹಂತದಲ್ಲಿ ಒಂದು ದೇಗುಲದಲ್ಲಿ‌ ಸೆಲ್ಫ್ ಕಿಯೋ ಮಿಷನ್ ಪರಿಷಚಯ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸೇವೆ ವಿಸ್ತರಿಸೋ ಪ್ಲಾನ್ ಮಾಡಲಾಗ್ತಿದೆ.

Bangalore Banashankari Temple Online token for Pooja Queue for hours breaks
Image Credit to Original Source

ಇದರಿಂದ ಹಣಕಾಸಿನ ಅವ್ಯವಹಾರವನ್ನು ತಡೆಯಬಹುದು. ಅಲ್ಲದೇ ಮ್ಯಾನುವಲ್ ಸೇವೆಯಿಂದ ವಿಳಂಬವಾಗೋ ಟೆನ್ಸನ್ ಕೂಡ ಇಲ್ಲ. ಅಲ್ಲದೇ ಪೂಜಾ ಸೇವೆ ಹಾಗೂ ಅದಕ್ಕೆ ನೀಡಬೇಕಾಗಿರೋ ಹಣದ ಬಗ್ಗೆಯೂ ಸ್ಪಷ್ಟ ಮಾಹಿತಿ ಸಿಗೋದರಿಂದ ಭಕ್ತರಿಗೆ ತಮಗೆ ಬೇಕಾದ ಪೂಜೆಯನ್ನು ಆಯ್ಕೆ ಮಾಡೋ ಅವಕಾಶವೂ ಸಿಕ್ಕಂತಾಗಲಿದೆ. ಬನಶಂಕರಿ ದೇವಾಲಯದಲ್ಲಿ ಶುಕ್ರವಾರ, ಮಂಗಳವಾರದಂದು ಭಾರಿ ಜನಸಂದಣಿ ಉಂಟಾಗುತ್ತಿತ್ತು. ಈಗ ಈ. ವ್ಯವಸ್ಥೆಯಿಂದ ಭಕ್ತರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ : ಕುಕ್ಕೆಯಿಂದ ಕಾಳಿಂಗನಾಗಿ ಬಂದು ಖುದ್ದು ಸುಬ್ರಹ್ಮಣ್ಯ ನೇ ನೆಲೆ ನಿಂತ ಕ್ಷೇತ್ರ – ಇಲ್ಲಿ ಬಂದ್ರೆ ನಾಗದೋಷ ಪರಿಹಾರ

Bangalore Banashankari Temple Online token for Pooja Queue for hours breaks

Comments are closed.