Goat with the face of a human :ಆಡಿನ ಮರಿಗಳು ನೋಡೋಕೆ ಹೇಗಿರುತ್ತವೆ ಅನ್ನೋದನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ. ಆದರೆ ಆಸ್ಸಾಂನ ಗ್ರಾಮವೊಂದರಲ್ಲಿ ಜನಿಸಿದ ಆಡಿನ ಮರಿಯೊಂದು ಇಡೀ ಪ್ರಾಣಿ ಲೋಕದಲ್ಲೇ ಒಂದು ಅಚ್ಚರಿಯನ್ನು ಸೃಷ್ಟಿಸಿದೆ. ಹೌದು…! ಇಲ್ಲಿನ ಆಡೊಂದು ಥೇಟ್ ಮನುಷ್ಯನ ಮುಖವನ್ನೇ ಹೋಲುವಂತಹ ಮರಿಯೊಂದಕ್ಕೆ ಜನ್ಮ ನೀಡಿದೆ. ಈ ಮರಿಯನ್ನು ಕಂಡ ಗ್ರಾಮಸ್ಥರೆಲ್ಲ ಇದು ದೇವರಿಂದ ಬಂದ ಎಚ್ಚರಿಕೆ ಎಂದು ಹೇಳ್ತಿದ್ದಾರೆ .
ಈಶಾನ್ಯ ಭಾರತದ ಆಸ್ಸಾಂ ರಾಜ್ಯದ ಗಂಗಾಪುರ ಗ್ರಾಮದ ರೈತರಾದ ಶಂಕರ್ ದಾಸ್ ಎಂಬವರಿಗೆ ಸೇರಿದ ಮೇಕೆಯು ಈ ರೀತಿಯ ವಿಚಿತ್ರ ಮರಿಗೆ ಜನ್ಮ ನೀಡುವ ಮೂಲಕ ಭಾರಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿದೆ. ಮೇಕೆಯು ಜನ್ಮ ನೀಡಿದ ಎರಡನೇ ಮರಿ ಇದಾಗಿದೆ. ಇದು ಯಾವುದೆ ರೀತಿಯ ಕೂದಲನ್ನು ಹೊಂದಿರದ ಬಿಳಿ ಬಣ್ಣದ ಮನುಷ್ಯ ಮುಖದ ಆಕೃತಿಯ ವಿಚಿತ್ರವಾದ ಆಡೊಂದಕ್ಕೆ ಜನ್ಮ ನೀಡಿದೆ. ಈ ವಿಚಾರ ಗ್ರಾಮದ ತುಂಬೆಲ್ಲ ಮಿಂಚಿನ ವೇಗದಲ್ಲಿ ಸಂಚರಿಸಿದ್ದು ದೂರದ ಊರಿನಿಂದ ಶಂಕರ್ ದಾಸ್ ನಿವಾಸಕ್ಕೆ ಆಗಮಿಸಿದವರೆಲ್ಲ ವಿಚಿತ್ರ ಆಡನ್ನು ನೋಡಿ ಆಶ್ಚರ್ಯಚಕಿತರಾದರು.

ಇನ್ನು ಈ ವಿಚಾರವಾಗಿ ಮಾತನಾಡಿದ ಶಂಕರ್, ಇಷ್ಟೊಂದು ವಿರೂಪವಾಗಿದ್ದರೂ ಸಹ ಆಡು ಜೀವಂತವಾಗಿಯೇ ಜನಿಸಿದೆ. ಮುಖವು ವಿಚಿತ್ರವಾಗಿದ್ದದ್ದು ಮಾತ್ರವಲ್ಲದೇ ಮುಂಗಾಲುಗಳು ಊನವಾಗಿದ್ದರೆ ಹಿಂಗಾಲುಗಳು ಇನ್ನೂ ಬೆಳವಣಿಗೆ ಆಗಿರಲಿಲ್ಲ. ಜನಿಸಿದ ಕೆಲವೇ ನಿಮಿಷಗಳಲ್ಲೇ ಆಡು ಸತ್ತು ಹೋಯಿತು ಎಂದು ಹೇಳಿದರು.
ಆಸ್ಸಾಂನ ವಿವಿಧೆಡೆ ಈ ರೀತಿ ವಿಕಾರವಾದ ಪ್ರಾಣಿಗಳು ಜನಿಸಿದರೆ ಅದನ್ನು ದುರಾದೃಷ್ಟ ಎಂದು ಪರಿಗಣಿಸಲಾಗುತ್ತಂತೆ. ನೆರೆಹೊರೆಯವರೆಲ್ಲ ವಿಷಯ ತಿಳಿಯುತ್ತಿದ್ದಂತೆಯೇ ನಮ್ಮ ಮನೆಗೆ ಧಾವಿಸಿ ಬಂದರು. ಆಡಿನ ವಿಕಾರವಾದ ಮುಖ ಕಂಡು ಅವರೆಲ್ಲ ದಿಗ್ಭ್ರಾಂತರಾದರು ಎಂದು ಶಂಕರ್ ಹೇಳಿದ್ದಾರೆ.
ಇತ್ತ ನೆರೆಮನೆಯ ರಾಕೇಶ್ ಕುಮಾರ್ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದು ಅನೇಕ ಕಡೆಗಳಲ್ಲಿ ಈ ರೀತಿಯ ವಿಕಾರವಾದ ಪ್ರಾಣಿಗಳು ಜನಿಸಿದರೆ ಅದನ್ನು ದೇವರ ಎಚ್ಚರಿಕೆ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಇದನ್ನು ಓದಿ : iPhone 13 Pro Max : 1 ಲಕ್ಷ ರೂ. ಮೌಲ್ಯದ ಫೋನ್ ಖರೀದಿಸಿದವನಿಗೆ ದೋಖಾ..!ಬಾಕ್ಸ್ ತೆರೆದು ನೋಡಿದ ಗ್ರಾಹಕನಿಗೆ ಶಾಕ್
ಇದನ್ನೂ ಓದಿ : Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು
Goat ‘with the face of a human’ seen as a ‘warning from God’ is born in India