Mukesh Ambani : ರಿಲಯನ್ಸ್​ ಕಂಪನಿಗೆ ಶೀಘ್ರದಲ್ಲೇ ಹೊಸ ಮುಖ್ಯಸ್ಥ: ಮಹತ್ವದ ಸುಳಿವು ನೀಡಿದ ಮುಕೇಶ್​ ಅಂಬಾನಿ

Mukesh Ambani :ಕೋಟ್ಯಾಧಿಪತಿ ಮುಖೇಶ್​ ಅಂಬಾನಿ ರಿಲಯನ್ಸ್​​ಗೆ ಕಂಪನಿಗೆ ನಾಯಕತ್ವ ಬದಲಾವಣೆಯ ಮಹತ್ವದ ಸುಳಿವೊಂದನ್ನು ಬಿಟ್ಟಯಕೊಟ್ಟಿದ್ದಾರೆ. ದೊಡ್ಡ ಕನಸನ್ನು ಕಾಣಲು ಸೂಕ್ತ ನಾಯಕನ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಮುಖೇಶ್​ ಮುಂದಿನ ಪೀಳಿಗೆಗೆ ರಿಲಯನ್ಸ್​ ಜವಾಬ್ದಾರಿಯನ್ನು ನೀಡುವ ಬಗ್ಗೆ ಸಂದೇಶ ನೀಡಿದ್ದಾರೆ. ಈ ಮೂಲಕ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಯಾರಾಗಬಹುದೆಂಬ ಚರ್ಚೆ ವಾಣಿಜ್ಯ ವಲಯದಲ್ಲಿ ಜೋರಾಗಿದೆ.


ದೇಶದ ಬಹುದೊಡ್ಡ ಕಂಪನಿಯಾದ ರಿಲಯನ್ಸ್​ ಇಂಡಸ್ಟ್ರೀಸ್​ ಉತ್ತರಾಧಿಕಾರಿ ಆಯ್ಕೆ ಕುರಿತಂತೆ 64 ವರ್ಷದ ಮುಕೇಶ್​ ಅಂಬಾನಿ ಈ ಹಿಂದೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಇದೀಗ ನಾಯಕತ್ವ ಪರಿವರ್ತನೆಯು ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದಾರೆ. ಮುಖೇಶ್​ ಅಂಬಾನಿಗೆ ಆಕಾಶ್​​ , ಇಶಾ ಹಾಗೂ ಅನಂತ್​​ ಎಂಬ ಮಕ್ಕಳಿದ್ದಾರೆ. ಗ್ರೂಪ್​ನ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಜನ್ಮ ವಾರ್ಷಿಕೋತ್ಸವ ದಿನದಂದು ಮಾತನಾಡಿದ ಮುಕೇಶ್​ ಅಂಬಾನಿ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಮುಂಬರುವ ವರ್ಷಗಳಲ್ಲಿ ವಿಶ್ವದ ಅತ್ಯಂತ ಪ್ರಬಲ ಹಾಗೂ ಭಾರತದ ಪ್ರತಿಷ್ಠಿತ ಬಹುರಾಷ್ಟ್ರ ಕಂಪನಿಗಳಲ್ಲಿ ಒಂದಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


ಇದೇ ವೇಳೆ ಉತ್ತರಾಧಿಕಾರಿ ಆಯ್ಕೆ ವಿಚಾರವಾಗಿ ಮಾತನಾಡಿದ ಮುಕೇಶ್​ ಅಂಬಾನಿ, ದೊಡ್ಡ ಕನಸುಗಳು ಹಾಗೂ ಅಸಾಧ್ಯವಾಗಿ ಕಾಣುವ ಗುರಿಗಳನ್ನು ಸಾಧಿಸಲು ಸೂಕ್ತ ನಾಯಕತ್ವದ ಅವಶ್ಯಕತೆ ಇದೆ. ರಿಲಯನ್ಸ್​ ಇದೀಗ ನಾಯಕತ್ವ ಬದಲಾವಣೆಯ ಹಂತದಲ್ಲಿದೆ. ಹಿರಿಯರಿಂದ ನನ್ನ ಪೀಳಿಗೆಗೆ ಬಂದಂತೆ ನನ್ನಿಂದ ಯುವ ನಾಯಕರಿಗೆ ರಿಲಯನ್ಸ್​ ವರ್ಗಾವಣೆಯಾಗಲಿದೆ. ಎಂದು ಹೇಳಿದರು.

ಉತ್ತರಾಧಿಕಾರಿ ಆಯ್ಕೆ ಕುರಿತಂತೆ ಮುಕೇಶ್​ ಅಂಬಾನಿ ನೀಡಿದ ಹೇಳಿಕೆಯ ಸಂಬಂಧ ರಿಲಯನ್ಸ್​ ಇಂಡಸ್ಟ್ರೀಸ್​ ಕಂಪನಿಯು ಯಾವುದೇ ಇಮೇಲ್​ ಅಥವಾ ಇನ್ನಿತರ ಯಾವುದೇ ಘೋಷಣೆಗಳನ್ನು ಮಾಡಿಲ್ಲ.

ನನ್ನನ್ನು ಸೇರಿದಂತೆ ಎಲ್ಲಾ ಹಿರಿಯರು ಇದೀಗ ರಿಲಯನ್ಸ್​​ಗೆ ಹೆಚ್ಚು ಸಮರ್ಥ, ಅತ್ಯಂತ ಬದ್ಧತೆಯುಳ್ಳ ಭರವಸೆಯ ಯುವ ನಾಯಕತ್ವದ ಪ್ರತಿಭೆಗೆ ತಲೆಬಾಗಬೇಕಿದೆ. ನಾವು ಆ ನಾಯಕನಿಗೆ ಮಾರ್ಗದರ್ಶನ ನೀಡಬೇಕು. ಅವರನ್ನು ಸಕ್ರಿಯಗೊಳಿಸಬೇಕು. ಅವರನ್ನು ಪ್ರೋತ್ಸಾಹಿಸಬೇಕು. ಹಾಗೂ ಅವರನ್ನು ಸಬಲೀಕರಣಗೊಳಿಸಬೇಕು . ಅವರು ನಮಗಿಂತ ಉತ್ತಮವಾಗಿ ಕೆಲಸ ಮಾಡುತ್ತಾರೆ ಇದನ್ನು ನಾವು ಕುಳಿತು ಶ್ಲಾಘಿಸಬೇಕು ಎಂದು ಹೇಳಿದರು.


Reliance Industries Chairman Mukesh Ambani Hints At Leadership Transition

ಇದನ್ನು ಓದಿ : Raghaveshwara Swamiji Big Relief : ರಾಘವೇಶ್ವರ ಸ್ವಾಮೀಜಿಗೆ ಬಿಗ್‌ ರಿಲೀಫ್‌ : ಆರೋಪ ಮುಕ್ತಗೊಳಿಸಿದ ಹೈಕೋರ್ಟ್‌

ಇದನ್ನೂ ಓದಿ : Goa New Year Alert : ಗೋವಾಕ್ಕೆ ಪಾರ್ಟಿಗೆ ಹೋಗೋ ಮುನ್ನ ಎಚ್ಚರ: ಸರ್ಕಾರ ಜಾರಿಗೆ ತಂದಿದೆ ಖಡಕ್ ರೂಲ್ಸ್

Comments are closed.