Monday the worst day : ನೀವು ಕೂಡ ಒಂಬತ್ತರಿಂದ ಐದು ಗಂಟೆಗಳವರೆಗೆ ಕಚೇರಿಯಲ್ಲಿ ಕೆಲಸ ಮಾಡುವವರಾಗಿದ್ದರೆ ನಿಮಗೆ ಸೋಮವಾರ ಎನ್ನುವುದು ಎಷ್ಟು ಕಷ್ಟದ ದಿನ ಎನ್ನುವುದನ್ನು ಹೆಚ್ಚಾಗಿ ವಿವರಿಸಿ ಹೇಳಬೇಕಾಗಿಲ್ಲ. ವೀಕೆಂಡ್ನಲ್ಲಿ ಸಖತ್ ಮಜಾ ಮಾಡಿ ಸೋಮವಾರ ಎಂದಿನಂತೆ ಕಚೇರಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅನೇಕರ ಪಾಲಿಗೆ ದುಸ್ವಪ್ನವೇ ಸರಿ. ಹೀಗಾಗಿ ಬಹುತೇಕ ಉದ್ಯೋಗಿಗಳು ಸೋಮವಾರವನ್ನು ದ್ವೇಷಿಸುತ್ತಾರೆ. ಸೋಮವಾರ ಬಂತು ಎಂದರೆ ಸಾಕು ಯಾಕಾದರೂ ಈ ದಿನ ಬಂತೋ ಎಂದು ಗೋಳಾಡುವವರಿದ್ದಾರೆ.
ಸೋಮವಾರದ ಈ ಗೋಳು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಕ್ಕೂ ಅರ್ಥವಾದಂತಿದೆ. ಹೀಗಾಗಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿಯೂ ಸೋಮವಾರವನ್ನು ಅತ್ಯಂತ ಕೆಟ್ಟ ದಿನ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಗಿನ್ನೆಸ್ ವಿಶ್ವ ದಾಖಲೆಯೇ ಸೋಮವಾರವನ್ನು ಕೆಟ್ಟ ದಿನ ಎಂದು ಘೋಷಿಸಿದ ಬಳಿಕ ನೆಟ್ಟಿಗರು ಕೂಡ ಇದಕ್ಕೆ ಬೆಂಬಲ ನೀಡಿದ್ದು ತಮಗೆ ಸೋಮವಾರ ಯಾಕೆ ಕಷ್ಟ ಅನ್ನೋದನ್ನು ವಿವರಿಸಿದ್ದಾರೆ.
we're officially giving monday the record of the worst day of the week
— Guinness World Records (@GWR) October 17, 2022
ನಾವು ಸೋಮವಾರವನ್ನು ವಾರದ ಅತ್ಯಂತ ಕೆಟ್ಟ ದಿನ ಎಂದು ಘೋಷಿಸುತ್ತಿದ್ದೇವೆ ಎಂದು ಗಿನ್ನೆಸ್ ವಿಶ್ವ ದಾಖಲೆಯು ಅಧಿಕೃತ ಪೇಜ್ನಲ್ಲಿ ಘೋಷಣೆ ಮಾಡಲಾಗಿದೆ. ಗಿನ್ನೆಸ್ ವಿಶ್ವ ದಾಖಲೆಯ ಈ ಟ್ವೀಟ್ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು 4.28 ಲಕ್ಷ ಲೈಕ್ಸ್ ಹಾಗೂ 79 ಸಾವಿರಕ್ಕೂ ಅಧಿಕ ರಿಟ್ವೀಟ್ಗಳನ್ನು ಸಂಪಾದಿಸಿದೆ.
ಇದೇ ಕಾರಣಕ್ಕೆ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬುಧವಾರದ ಬಗ್ಗೆ ಏನು ಹೇಳುತ್ತೀರಿ..? ಇದು ನಿಮಗೆ ವಿಚಿತ್ರ ಎನಿಸಬಹುದು ಎಂದು ಬರೆದುಕೊಂಡಿದ್ದಾರೆ. ಸೋಮವಾರವನ್ನು ಬ್ಯಾನ್ ಮಾಡೋಣ. ಆಗ ನಮಗೆ ರವಿವಾರವಾದ ಬಳಿಕ ಸೀದಾ ಮಂಗಳವಾರ ಸಿಗುತ್ತೆ ಅಂತಾ ಇನ್ನೊಬ್ಬರು ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ. ಈ ರೀತಿಯಾಗಿ ಅನೇಕರು ತರಹೇವಾರಿ ರೀತಿಯಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಈ ಅಧಿಕೃತ ಘೋಷಣೆಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಇದನ್ನೂ ಓದಿ : Third FIR registered :ಮುರುಘಾ ಶರಣರಿಗೆ ಮತ್ತೊಂದು ಆಘಾತ : ಗ್ರಾಮೀಣ ಠಾಣೆಯಲ್ಲಿ ಶ್ರೀಗಳ ವಿರುದ್ಧ ದಾಖಲಾಯ್ತು ಮೂರನೇ ಎಫ್ಐಆರ್
Guinness World Records declares Monday the worst day of the week. Netizens react