Millets : ಚಳಿಗಾಲಕ್ಕೆ ಸಿರಿಧಾನ್ಯಗಳೇ ಬೆಸ್ಟ್‌ : ಹೇಗೆ ಅಂತೀರಾ…

ಆಯಾ ಕಾಲದಲ್ಲಿ ಸಿಗುವ ಆಹಾರಗಳನ್ನು ಋತುಮಾನದ ಆಹಾರಗಳು (Seasonal Foods) ಎನ್ನುತ್ತಾರೆ. ಪ್ರತಿಯೊಂದು ಋತುವಿನಲ್ಲೂ ಬೇರೆ ಬೇರೆ ರೀತಿಯ ಹಣ್ಣು, ತರಕಾರಿ ಮತ್ತು ಧಾನ್ಯಗಳು (Millets) ದೊರೆಯುತ್ತವೆ. ಮತ್ತು ಆ ಋತುಮಾನದಲ್ಲಿ ಅವುಗಳು ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತವೆ. ಬೇಸಿಗೆಯಲ್ಲಿ ಸಿಗುವ ಹಣ್ಣುಗಳು ಮತ್ತು ತರಕಾರಿಗಳು ನೀರು, ಮಿನರಲ್ಸ್‌ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುತ್ತವೆ. ಬೇಸಿಗೆಯ ತೀವ್ರ ಶಾಖ ಮತ್ತು ನಿರ್ಜಲೀಕರಣದ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಮಳೆಗಾಲದಲ್ಲಿ ಲಭ್ಯವಿರುವ ಆಹಾರಗಳು, ಬೇಸಿಗೆಯಲ್ಲಿ ಹೆಚ್ಚಾಗಿದ್ದ ಬೆವರುಗಳನ್ನು ತಡೆಯಲು ಮತ್ತು ತೇವಾಂಶದಿಂದ ಕೂಡಿರುವ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.

ಅದೇ ರೀತಿ ಚಳಿಗಾಲದಲ್ಲೂ ಸಹ ಒರಟಾದ ದೇಹಕ್ಕೆ ಅಗತ್ಯವಿರುವ ಇನ್ಸುಲೇಷನ್‌ ಮತ್ತು ರಕ್ತ ಪರಿಚಲನೆಯನ್ನು ಸರಾಗಗೊಳಿಸುವ ಆಹಾರಗಳ ಅವಶ್ಯಕತೆ ಇರುತ್ತದೆ. ಈ ಆಹಾರಗಳು ದೇಹಕ್ಕೆ ಶಾಖವನ್ನು ಬಿಡುಗಡೆ ಮಾಡುತ್ತವೆ. ಚಳಿಗಾಲದಲ್ಲಿ ಆಹಾರ ಸೇವೆನೆ ಹೆಚ್ಚು. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅದಕ್ಕಾಗಿ ಈ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಮತ್ತು ಗ್ಲುಟನ್‌–ಮುಕ್ತವಾಗಿರುವ ಆಹಾರಗಳ ಅವಶ್ಯಕತೆ ಇದೆ. ಸಿರಿಧಾನ್ಯಗಳಾದ ರಾಗಿ, ಸಜ್ಜೆ ಮತ್ತು ಜೋಳ ಚಳಿಗಾಲಕ್ಕೆ ಸೂಕ್ತವಾದ ಆಹಾರಗಳಾಗಿದೆ.

ರಾಗಿ:
ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ ಹೇರಳವಾಗಿದೆ. ಇದು ದೇಹದ ಕ್ಯಾಲ್ಸಿಯಂ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಸಾಕಷ್ಟು ಪ್ರಮಾಣದ ಜೀವಸತ್ವಗಳು ಮತ್ತು ಮಿನರಲ್ಸ್‌ಗಳನ್ನು ಹೊಂದಿರುವ ರಾಗಿ ರಕ್ತಹೀನತೆಯನ್ನು ಹೋಗಲಾಡಿಸತ್ತದೆ. ಇದು ಚಳಿಗಾಲದಲ್ಲಿ ಕಾಣಿಸುವ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೂ ಉತ್ತಮವಾಗಿದೆ.

ಇದನ್ನೂ ಓದಿ : Sprouted Seeds : ನಿಮಗೆ ಪ್ರೊಟೀನ್‌ ಅಗತ್ಯವಿದೆಯೇ; ಹಾಗಾದರೆ ಮೊಳಕೆಯೊಡೆದ ಕಾಳು ತಿನ್ನಿ

ಜೋಳ :
ಅತಿ ಹೆಚ್ಚಿನ ಫೈಬರ್‌, ವಿಟಮಿನ್‌ ಬಿ, ಕ್ಯಾಲ್ಸಿಯಂ, ಕಬ್ಬಿಣ ಹೊಂದಿರುವ ಜೋಳ ಉತ್ತಮ ಆರೋಗ್ಯ ನೀಡುವ ಸಿರಿಧಾನ್ಯ. ಇದನ್ನು ಖನಿಜಗಳ ಮೂಲ ಎಂದು ಕರೆಯುತ್ತಾರೆ. ಇದು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಜೋಳವು ಗ್ಲುಟನ್‌–ಫ್ರೀ ಆಗಿದ್ದು ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಲ್ಲದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಜ್ಜೆ:
ಸಜ್ಜೆಯು ಪ್ರೋಟೀನ್‌ ಭರಿತ ಆಹಾರಗಳಲ್ಲಿ ಒಂದಾಗಿದೆ. ಹೀಗಾಗಿ ಸಜ್ಜೆಯು ಸ್ನಾಯುಗಳ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕರ ದೇಹರಚನೆ ಪಡೆಯಬಹುದಾಗಿದೆ. ಬಾಜ್ರಾದಲ್ಲಿನ ಫೈಬರ್‌ ನೀರಿನಲ್ಲಿ ಕರಗಿ ಜೆಲ್‌ ತರಹದ ವಸ್ತುವನ್ನು ಉತ್ಪತ್ತಿ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಉಳಿದು. ಇದರಿಂದ ಚಯಾಪಚಯ ಕ್ರಿಯೆ ಸಲುಭವಾಗುತ್ತದೆ. ಮತ್ತು ಫೈಬರ್‌ನಿಂದಾಗಿ ತೂಕನಷ್ಟವೂ ಸುಲಭವಾಗುತ್ತದೆ. ಇದು ಕೊಲೆಸ್ಟ್ರಾಲ್‌ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳುವುದು ಉತ್ತಮವಾಗಿದೆ.

ಇದನ್ನೂ ಓದಿ : Thyroid : ಥೈರಾಯ್ಡ್‌ ಅಸಮತೋಲನವನ್ನು ಸರಿದೂಗಿಸಿಕೊಳ್ಳಲು 3 ಆಹಾರಗಳ ಸಲಹೆ ಕೊಟ್ಟ ಆಯುರ್ವೇದ ಡಾಕ್ಟರ್‌

(Millets are the best option in winter. Do you know how?)

Comments are closed.