ಸೋಮವಾರ, ಏಪ್ರಿಲ್ 28, 2025
Homeಮಿಸ್ ಮಾಡಬೇಡಿHoli2022 ಬಣ್ಣಗಳ ಹಬ್ಬದ ಹಿನ್ನೆಲೆ, ಮಹತ್ವ, ಬಣ್ಣಗಳ ಅರ್ಥವೇನು? ಇಲ್ಲಿದೆ ತಿಳಿದುಕೊಳ್ಳಿ

Holi2022 ಬಣ್ಣಗಳ ಹಬ್ಬದ ಹಿನ್ನೆಲೆ, ಮಹತ್ವ, ಬಣ್ಣಗಳ ಅರ್ಥವೇನು? ಇಲ್ಲಿದೆ ತಿಳಿದುಕೊಳ್ಳಿ

- Advertisement -

Holi2022 ಬಣ್ಣಗಳ ಹಬ್ಬ ಎಂದೇ ಹೆಸರುವಾಸಿ. ಎಲ್ಲಡೆ ರಂಗು ರಂಗಿನ ಜಾತ್ರೆ. ಹೋಳಿ ಇದು ಭಾರತದಲ್ಲಿ ದೇಶಾದ್ಯಂತ ಆಚರಿಸುವ ಹಬ್ಬ. ಪೂರ್ತಿ ದೇಶದಲ್ಲಿ ಬಣ್ಣ, ಹೂವು ಮುಂತಾದವುಗಳಿಂದ ಬಣ್ಣದಾಟವಾಡುವ ಹಬ್ಬ. ಇದನ್ನು ಬಹಳ ಸಡಗರದಿಂದ ಎರಡು ದಿನಗಳ ಕಾಲ ಆಚರಿಸುತ್ತಾರೆ. ಮೊದಲನೆ ದಿನ ದಹನವಾದರೆ ಎರಡನೇ ದಿನ ಓಕುಳಿ(Holi). ಇದು ಅಸುರರ ಮೇಲೆ ದೇವತೆಗಳ ವಿಜಯೋತ್ಸವದ ಹಬ್ಬವಾಗಿದೆ. ಈ ವರ್ಷ ಕರೋನಾದ ಮೇಲಿನ ನಿರ್ಭಂದ ತೆರವುಗೊಳಿಸಿದ್ದರಿಂದ ಯಾವುದೇ ಅಡೆತಡೆಗಳಿಲ್ಲದೆ ಬಣ್ಣಗಳ ಹಬ್ಬವನ್ನು ಆಚರಿಸಬಹುದಾಗಿದೆ.

ಹೋಳಿಯ ಹಿನ್ನೆಲೆ:
ಅಸುರರ ರಾಜನಾದ ಹಿರಣ್ಯಕಶ್ಯಪ ಬ್ರಹ್ಮನಿಂದ ಹೆಚ್ಚುಕೆಡಿಮೆ ಅಮರತ್ವದ ವರ ಪಡೆದುಕೊಂಡಿದ್ದ. ಆದರೆ ವಿಷ್ಣುವಿನ ಭಕ್ತನಾದ ಆತನ ಮಗ ಪ್ರಹ್ಲಾದನನ್ನು ಕೊಲ್ಲಲು ಬಯಸಿದ್ದ. ಅದಕ್ಕಾಗಿ ಅನೇಕ ರೀತಿಯ ಪ್ರಯತ್ನ ಸಹ ಮಾಡಿದ್ದ, ಮೇಲಿನಿಂದ ಎಸೆಯುವುದು, ಸೈನಿಕರನ್ನು ಬಿಟ್ಟು ಕೊಲ್ಲಲು ನೋಡಿದ್ದು, ಹಾವಿನಿಂದ ಕಚ್ಚಿಸಲು ಸಹ ಮುಂದಾಗಿದ್ದ. ಆದರೆ ಪ್ರತಿ ಬಾರಿ ವಿಷ್ಣು, ತನ್ನ ಪರಮ ಭಕ್ತನಾದ ಮಗು ಪ್ರಹ್ಲಾದನ್ನು ಕಾಪಾಡಿದ್ದ. ಕಡೆಗೆ ಇವೆಲ್ಲವು ಆಗದಿದ್ದಾಗ ತನ್ನ ತಂಗಿ ರಾಕ್ಷಸಿ ಹೋಲಿಕಾಳ ಸಹಾಯ ಪಡೆಯಲು ನೋಡದಿ. ಹೋಲಿಕಾಳಿಗೆ ಬೆಂಕಿಯಿಂದ ಏನೂ ಆಗದಿರುವ ವರವಿತ್ತು. ಹೋಲಿಕಾ ಮಗು ಪ್ರಹ್ಲಾದನೊಂದಿಗೆ ಬೆಂಕಿಯಲ್ಲಿ ಕೂತಳು. ಆದರೆ ಪ್ರಹ್ಲಾದ ವಿಷ್ಣುವಿನ ಧ್ಯಾನ ಮಾಡಲು ಪ್ರಾರಂಭಿಸಿದ ಕೂಡಲೇ ಹೋಲಿಕಾ ಬೆಂಕಿಯಲ್ಲಿ ದಹನವಾದಳು.

ಹೋಳಿಯ ಮಹತ್ವ:
ಹೋಳಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಹಬ್ಬ. ರಾಕ್ಷಸಿ ಹೋಲಿಕಾಳ ದಹನವು ಪ್ರಹ್ಲಾದನ ಭಕ್ತಿಯ ವಿಜಯದ ಸಂಕೇತವಾಗಿದೆ.
ಬಣ್ಣಗಳ ಹಬ್ಬವಾದ ಹೋಳಿಯು ವಸಂತ ಋತುವಿನ ಆಗಮನದ ಸಂತೋಷದ ಆಚರಣೆಯಾಗಿದೆ. ಹೊಸ ಬೆಳೆಗಳನ್ನು ಬೆಳೆಯಲು ಸಜ್ಜಾಗುವ ಕಾಲ ಎಂದೇ ಪ್ರತೀತಿ.

ಬಣ್ಣಗಳಿಂದಲೇ ಸಂಭ್ರಮಿಸುವುದೇಕೆ?
ಪುರಾತನ ಕಾಲದಲ್ಲಿ ಹೊಳಿಯನ್ನು ಪ್ರಾರಂಭಿಸಿದಾಗ ಜನರು ಕಹಿಬೇವು, ಅರಿಶಿನ, ಬಿಲ್ವ, ಪಲಾಶ ಮುಂತಾದ ಸಸ್ಯಗಳಿಂದ ತಯಾರಿಸಿದ ಬಣ್ಣಗಳನ್ನು ಉಪಯೋಗಿಸುತ್ತಿದ್ದರು. ಆ ಬಣ್ಣಗಳು ದೇಹದ ಮೇಲಾದ ಗಾಯ, ಇತರೆ ರೋಗಗಳನ್ನು ಗುಣಪಡಿಸಬಲ್ಲದು ಎಂದು ನಂಬಲಾಗಿತ್ತು.

ಬಣ್ಣಗಳ ಅರ್ಥವೇನು:
ಹೋಳಿಯನ್ನು ವಿವಿಧ ಬಣ್ಣಗಳಿಂದ ಆಚರಿಸುತ್ತಾರೆ. ಕೆಂಪು, ಕೇಸರಿ, ಹಳದಿ, ಹಸಿರು, ನೀಲಿ, ಗುಲಾಬಿ ಹೀಗೆ ಬೇರೆ ಬೇರೆ ಬಣ್ಣಗಳನ್ನು ಉಪಯೋಗಿಸುತ್ತಾರೆ. ಹಾಗಾದರೆ ಆ ಬಣ್ಣಗಳಿಗೆ ವಿಶೇಷ ಅರ್ಥಗಳೇನಾದರೂ ಇರಬೇಕಲ್ಲವೇ?

ಕೆಂಪು : ಪ್ರೀತಿ, ಉತ್ಸಾಹ ಮತ್ತು ಫಲವತ್ತತೆಯ ಪ್ರತೀಕ
ಕೇಸರಿ: ಹೊಸ ಆರಂಭದ ಸಂಕೇತ
ಹಳದಿ: ಸಂತೋಷ, ಶಾಂತಿ, ಆನಂದ, ಧ್ಯಾನ, ಜ್ಞಾನ ಮತ್ತು ಕಲಿಕೆಯನ್ನು ಪ್ರತಿನಿಧಿಸುತ್ತದೆ.
ಗುಲಾಬಿ: ದಯೆ, ಸಹಾನುಭೂತಿ ಮತ್ತು ಸಕಾರಾತ್ಮಕತೆ ಸೂಚಿಸುತ್ತದೆ.
ಹಸಿರು: ಪ್ರಕೃತಿ, ಜೀವನ ಮತ್ತು ಸುಗ್ಗಿ ದ್ಯೋತಕ.
ನೇರಳೆ: ಮ್ಯಾಜಿಕ್‌ ಮತ್ತು ರಹಸ್ಯದ ಸಂಕೇತ.
ನೀಲಿ: ಕೃಷ್ಣನ ಮೈಬಣ್ಣವಾದ ನೀಲಿ ಶಕ್ತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಪ್ರತೀಕ.

ಇದನ್ನೂ ಓದಿ: Tulsi Face Pack: ಚರ್ಮದ ಕಾಂತಿಗೆ ತುಳಸಿ ಫೇಸ್ ಪ್ಯಾಕ್ ಬಳಸಿ

ಇದನ್ನೂ ಓದಿ: Haircare Tips : ಕೇವಲ ಮೂರು ಸರಳ ಮಾರ್ಗಗಳನ್ನು ಅನುಸರಿಸಿ ನಿಮ್ಮ ಕೂದಲ ಆರೋಗ್ಯ ಕಾಪಾಡಿ

(Holi2022 History significance and meaning of colours)

RELATED ARTICLES

Most Popular