Electric Buses : ಬಿಎಂಟಿಸಿಗೆ ಬಿಸಿ ತುಪ್ಪ ವಾದ ಎಲೆಕ್ಟ್ರಿಕ್ ಬಸ್ : ಮತ್ತೆ ನಷ್ಟದ ಹಾದಿಯಲ್ಲಿ ಬೆಂಗಳೂರು ಸಾರಿಗೆ

ಬೆಂಗಳೂರು : ಕೊರೊನಾದ ಮೊದಲು ಮತ್ತು ಕರೋನಾ ಬಳಿಕವೂ ನಷ್ಟದಲ್ಲೇ ಇರುವ ಬಿಎಂಟಿಸಿ ( BMTC) ಒಮ್ಮೊಮ್ಮೆ ತನ್ನ ನಿರ್ಧಾರಗಳಿಂದಲೇ ನಷ್ಟವನ್ನು ಆಹ್ವಾನಿಸುತ್ತಾ ಅನ್ನೋ ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗ್ತಿದೆ. ಇದಕ್ಕೆ ತಾಜಾ ಉದಾಹರಣೆ ಬಿಎಂಟಿಸಿಯ (BMTC) ಎಲೆಕ್ಟ್ರಿಕ್ (Electric Buses) ಬಸ್ ಖರೀದಿ ತೀರ್ಮಾನ. ಹೌದು ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ಆರಂಭಿಸಿ ತಿಂಗಳೇ ಕಳೆದಿದೆ. ಆದರೆ ಮೊದಲ ಹಂತದಲ್ಲಿ ಓಡಾಟ ಆರಂಭಿಸಿದ್ದ 90 ಬಸ್‌ಗಳಿಂದ ಆದಾಯದ ನಿರೀಕ್ಷೆಯಲ್ಲಿದ್ದ, ಬಿಎಂಟಿಸಿಗೆ ಮತ್ತಷ್ಟು ನಷ್ಟವೇ ಎದುರಾಗಿದೆ. ಯಾಕೆಂದರೇ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಬಿಎಂಟಿಸಿ ಪಾಲಿಗೆ ಬಿಳಿಯಾನೆಯ ಪಾಲನೆಯಂತಾಗಿದೆ.

ಮೊದಲೇ ಕೋವಿಡ್‌ನಿಂದ ನಷ್ಟದಲ್ಲಿದ್ದ ಬಿಎಂಟಿಸಿ ಇದೀಗ ಎಲೆಕ್ಟ್ರಿಕ್ ಬಸ್ ಗಳೂ‌ (Electric Buses ) ನಷ್ಟವನ್ನೇ ತರುತ್ತಿದ್ದು, ಇದ್ರಿಂದಲೂ ನಿರೀಕ್ಷಿಸಿದಷ್ಟು ಆದಾಯ ಬರ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಬಿಎಂಟಿಸಿ ಮಾಡಿಕೊಂಡಿರೋ ಒಪ್ಪಂದ. ಸ್ಮಾರ್ಟ್ ಸಿಟಿಯ ಯೋಜನೆ ಅಡಿಯಲ್ಲಿ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಲಾಗಿದೆ. ಒಪ್ಪಂದದ ಪ್ರಕಾರ, ಕಿ.ಮೀಟರ್‌ಗೆ 51.67 ರೂಪಾಯಿ ಗುತ್ತಿಗೆ ಸಂಸ್ಥೆಗೆ ನೀಡಬೇಕು.ಅದ್ರ ಜೊತೆಗೆ 180 ಕಿ.ಮೀ. ದಿನದಲ್ಲಿ ಈ ಬಸ್ ಓಡಾಟ ನಡೆಸಬೇಕು.

ಆದರೆ 180 ಕಿ.ಮೀ‌ ಸಂಚರಿಸಲು ಈ ಬಸ್ ಗಳು ಬ್ಯಾಟರಿ ಸಮಸ್ಯೆ ಎದುರಿಸುತ್ತಿವೆ. ಕೇವಲ 120 ಕಿ.ಮೀಗೆ ಓಡಾಡಲು ಮಾತ್ರ ಸಾಮರ್ಥ್ಯ ಇರೋ‌ ಬ್ಯಾಟರಿಯನ್ನು ಬಸ್ ಗಳು ಹೊಂದಿವೆ. ಹೀಗಾಗಿ ಇಜ ಬಸ್ ಗಳಿಂದ ಬಿಎಂಟಿಸಿಗೆ ಕೇವಲ 30 ರೂಪಾಯಿ ಆದಾಯ ಬರ್ತಿದೆ. ಇದರಿಂದ ಬಿಎಂಟಿಸಿ ಈ ಬಸ್ ಗಳಿಗೆ ಕೈಯಿಂದ ದುಡ್ಡು ಹಾಕಿಕೊಂಡು ಹಣ ಪಾವತಿಸಬೇಕಾದ ಸ್ಥಿತಿಯಲ್ಲಿದೆ.

ಇನ್ನೊಂದೆಡೆ ಇನ್ನೂ ಮುಂದೆ ಗುತ್ತಿಗೆ ಎಲೆಕ್ಟ್ರಿಕ್ ಬಸ್ ಬೇಡ ನಾವೇ ಬಸ್ ಪರ್ಚೆಸ್ ಮಾಡಿ ರಸ್ತೆಗೆ ಇಳಿಸ್ತಿವಿ ಅಂತ ಸರ್ಕಾರಕ್ಕೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರದ ಹಣ ಹಾಗೂ ರಾಜ್ಯ ಸರ್ಕಾರದ ಹಣದಿಂದ ನಾವೇ ಬಸ್ ಖರೀದಿ ಮಾಡಿ ಓಡಿಸ್ತಿವಿ.ಲಾಭ ನಷ್ಟ ನಾವೇ ನೋಡಿಕೊಳ್ತಿವಿ, ಅಂತ ಸಾರಿಗೆ ಅಧಿಕಾರಿಗಳು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಒಟ್ಟಿನಲ್ಲಿ ಈ ಎಲೆಕ್ಟ್ರಿಕ್ ಬಸ್‌‌ಗಳಿಂದ ಸರಿಯಾದ ರೀತಿಯಲ್ಲಿ ಲಾಭವೂ ಬರ್ತಿಲ್ಲ. ಅತ್ತ ನಷ್ಟವೂ ತಪ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ಹೇಗೆ ಲಾಭದಾಯಕವಾಗಿ ಬದಲಾಯಿಸುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಗೆ ಅನುದಾನ ಕಟ್ : ಬಡವರ ಊಟಕ್ಕೂ ಕಲ್ಲು ಹಾಕಿದ ಸರ್ಕಾರ

ಇದನ್ನೂ ಓದಿ : ಬೆಂಗಳೂರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಲ್ಲ: ಸಲ್ಲಿಕೆಯಾಯ್ತು ಸಿಎಜಿ ವರದಿ

( BMTC is loss due to electric buses maintenance)

Comments are closed.