ಇಂದೋರ್ : ಪತ್ನಿಯ ಬಗ್ಗೆ ನಿರ್ಲಕ್ಷ್ಯವಹಿಸುವಂತಿಲ್ಲ. ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಅಲ್ಲದೇ ಪತ್ನಿಯನ್ನು ನಿತ್ಯವೂ ಡಾರ್ಲಿಂಗ್ ಎಂದೇ ಕರೆಯಬೇಕೆಂದು ವ್ಯಕ್ತಿಯೋರ್ವನಿಗೆ ಇಂದೋರ್ ನಲ್ಲಿರುವ ಖರಂಗಾವ್ ಕೋರ್ಟ್ ಆದೇಶಿಸಿದೆ.

ಪತಿ ವಿಪರೀತ ಕುಡಿತದ ಚಟವನ್ನು ಹೊಂದಿದ್ದ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ತನಗೆ ವಿಚ್ಛೇದನ ನೀಡುವಂತೆ ಮಹಿಳೆಯೋರ್ವರು ಖರಂಗಾವ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶರು ಇಬ್ಬರನ್ನೂ ರಾಜಿ ಸಂಧಾನ ನಡೆಸಿದ್ದರು. ಈ ವೇಳೆಯಲ್ಲಿ ಆಕೆಯ ಪತಿ ರಮೇಶ್ ತನ್ನ ಪತ್ನಿ ಪೋಷಕರೊಂದಿಗೆ ಸರಿಯಾಗಿ ನಡೆದುಕೊಳ್ಳುವುದಿಲ್ಲ. ಯಾವಾಗಲೂ ಜಗಳವಾಡುತ್ತಲೇ ಇರುತ್ತಾಳೆ ಅಂತಾ ದೂರಿದ್ದಾನೆ.

ನಂತರ ಮಹಿಳೆ ತನ್ನ ಪತಿ ವಿಪರೀತ ಕುಡಿತದ ಚಟದಿಂದ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಅಂತಾ ದೂರಿದ್ದಾಳೆ. ಈ ವೇಳೆಯಲ್ಲಿ ನ್ಯಾಯಧೀಶರು ಪತಿ, ಪತ್ನಿಗೆ ಬುದ್ದಿ ಹೇಳಿದ್ದಾರೆ. ನಿತ್ಯವೂ ಪತ್ನಿಯನ್ನು ಡಾರ್ಲಿಂಗ್ ಎಂದೇ ಕರೆಯಬೇಕು. ಅಲ್ಲದೇ ಆಕೆಗೆ ಸಮಯವನ್ನು ನೀಡಲೇಬೇಕೆಂದು ಆದೇಶಿಸಿ ಪ್ರರಕಣವನ್ನು ಇತ್ಯರ್ಥಗೊಳಿಸಿದ್ದಾರೆ.