ಸೋಮವಾರ, ಏಪ್ರಿಲ್ 28, 2025
HomeSportsCricketKaviya Maran SRH: ಕವಿಯಾ ಮಾರನ್ ಎಂಬ ಸಂಚಲನ! ಐಪಿಎಲ್ ಹರಾಜಲ್ಲಿ ಇವರು ಕಾಣಿಸಿಕೊಂಡಿದ್ದೇಕೆ?

Kaviya Maran SRH: ಕವಿಯಾ ಮಾರನ್ ಎಂಬ ಸಂಚಲನ! ಐಪಿಎಲ್ ಹರಾಜಲ್ಲಿ ಇವರು ಕಾಣಿಸಿಕೊಂಡಿದ್ದೇಕೆ?

- Advertisement -

ಐಪಿಎಲ್ ಹರಾಜಿನಲ್ಲಿ (IPL Mega Auction 2022) ಶಾರುಖ್ ಖಾನ್ ಅವರ ಮಕ್ಕಳಾದ ಆರ್ಯನ್ ಖಾನ್ (Aryan Khan) ಮತ್ತು ಸುಹಾನಾ ಖಾನ್ (Suhana Khan) ಭಾಗವಹಿಸಿದ್ದರೂ ಅವರಗಿಂತ ಒಂದುಕೈ ಮೇಲೆ ಎಂಬಂತೆ ಫುಲ್ ವೈರಲ್ ಆದವರು ಬೇರೆಯೇ ಇದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಮಾಲೀಕ ಕವಿಯಾ ಮಾರನ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಸನ್‌ರೈಸಸ್ ಹೈದರಾಬಾದ್ ತಂಡದ ಪರವಾಗಿ ಕಾಣಿಸಿಕೊಂಡ ಅವರನ್ನು ನೋಡಿದ ಹಲವರು ಕವಿಯಾ ಮಾರನ್ ಮತ್ತು ‘ಎಸ್‌ಆರ್‌ಹೆಚ್ ಮಾಲೀಕರು ಯಾರು’ ಎಂದು ಜನ ಹುಡುಕುತ್ತಿದ್ದಾರೆ. ಅಷ್ಟು ವೈರಲ್ ಆಗಿದ್ದಾರೆ ಕವಿಯಾ ಮಾರನ್. ಹಾಗಿದ್ದರೆ ಅವರು ಯಾರು? (Kaviya Maran SRH) ಅವರಿಗು ಸನ್‌ರೈಸಸ್ ಹೈದರಾಬಾದ್ ತಂಡಕ್ಕೂ ಏನು ಸಂಬಂಧ ಎಂದು ನಾವಿಲ್ಲಿ ವಿವರಿಸಿದ್ದೇವೆ.

ಮಾಧ್ಯಮ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿಯೇ ಕವಿಯಾ ಮಾರನ್. ಅವರು ಸನ್ ರೈಸರ್ಸ್ ಹೈದರಾಬಾದ್‌ನ ಸಹಮಾಲೀಕರಾಗಿದ್ದಾರೆ. ಅಲ್ಲದೇ SUN ಮ್ಯೂಸಿಕ್ ಮತ್ತು SUN ಟಿವಿಯ FM ಚಾನೆಲ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕಲಾನಿಧಿ ಮಾರನ್ ಅವರ ತಂದೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಪ್ರಸಿದ್ಧ ರಾಜಕಾರಣಿ ಎಂ. ಕರುಣಾನಿಧಿ. ಕವಿಯಾ ಮಾರನ್ ಚಿಕ್ಕಪ್ಪ ದಯಾನಿಧಿ ಮಾರನ್ ಅವರು ಚೆನ್ನೈ ಸೆಂಟ್ರಲ್‌ನ ಸಂಸದರಾಗಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022 ಹರಾಜಿನಲ್ಲಿ 30 ವರ್ಷದ ಕವಿಯಾ ಮಾರನ್, ಸನ್‌ರೈಸರ್ಸ್ ಹೈದರಾಬಾದ್ ನಿರ್ದೇಶಕ ಟಾಮ್ ಮೂಡಿ, ಬೌಲಿಂಗ್ ಮೆಂಟರ್ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಕಾಣಿಸಿಕೊಂಡರು. ಕವಿಯಾ ಮಾರನ್ ಮೊದಲ ಬಾರಿಗೆ ಐಪಿಎಲ್ 2018 ರ ಆವೃತ್ತಿಯಲ್ಲಿ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಉಪ್ಪಲ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ SRH ಅನ್ನು ಬೆಂಬಲಿಸಿದ್ದರು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3

(Kaviya Maran SRH profile of viral sensation IPL Auction 2022)

RELATED ARTICLES

Most Popular