iPhone 14 Flipkart : ಭಾರತದಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ನಿನ್ನೆಯಷ್ಟೇ ತೆರೆ ಬಿದ್ದಿದೆ. ವಿಜಯ ದಶಮಿ ಸಂಭ್ರಮ ಮನೆಯಲ್ಲಿ ಒಂದು ರೀತಿ ಇದ್ದರೆ ನವರಾತ್ರಿ ಹಾಗೂ ದಶಮಿಯ ಪ್ರಯುಕ್ತ ಆನ್ಲೈನ್ ಶಾಪಿಂಗ್ ಆ್ಯಪ್ಗಳಲ್ಲಿಯೂ ಜನರಿಗೆ ವಿವಿಧ ಆಫರ್ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯವನ್ನು ಮಾಡಲಾಗ್ತಿತ್ತು. ಹೆಚ್ಚಿನ ಜನರು ಆನ್ಲೈನ್ ಸೈಟ್ಗಳ ಆಫರ್ಗಳನ್ನು ನೋಡಿ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮೊಬೈಲ್ ಬುಕ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಮೊಬೈಲ್ ಬದಲಿಗೆ ಸೋಪುಗಳು ಸಿಕ್ಕಿದ್ದ ಘಟನೆಯೊಂದು ವರದಿಯಾಗಿತ್ತು.ಇದಾದ ಬಳಿಕ ಆನ್ಲೈನ್ ಮಾರುಕಟ್ಟೆಗಳನ್ನು ಹಾಗೂ ಅವುಗಳ ಹಬ್ಬದ ಆಫರ್ಗಳನ್ನು ನಂಬೋದು ಹೇಗಪ್ಪ ಎಂಬ ಪ್ರಶ್ನೆ ಕೂಡ ಎದುರಾಗಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಎಂತಾ ಅದೃಷ್ಟ ಮಾಡಿದ್ದ ಅಂದರೆ ಐಫೋನ್ 13 ಬುಕ್ ಮಾಡಿದ್ದ ಈತನಿಗೆ ಫ್ಲಿಪ್ಕಾರ್ಟ್ ಐಫೋನ್ 14 ಮೊಬೈಲ್ನ್ನು ಕಳುಹಿಸಿಕೊಟ್ಟಿದ್ದು ಈ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.
ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಈ ವಿಚಾರವಾಗಿ ಟ್ವೀಟಾಯಿಸಿದ್ದು ಇವರ ಫಾಲೋವರ್ಗಳಲ್ಲಿ ಒಬ್ಬರು ಫ್ಲಿಪ್ಕಾರ್ಟ್ನಲ್ಲಿ ಐಫೋನ್ 13 ಬುಕ್ ಮಾಡಿದ್ದರು. ಆದರೆ ಅವರಿಗೆ ಐಫೋನ್ 13 ಬದಲಾಗಿ ಐಫೋನ್ 14 ನೀಡಲಾಗಿದೆ. ಈ ಸಂಬಂಧ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಿದ್ದಾರೆ. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈತನ ಅದೃಷ್ಟವೇ ಎಂದು ಅನೇಕರು ಮಾತನಾಡಿಕೊಳ್ತಿದ್ದಾರೆ. ಇನ್ನೂ ಕೆಲವರು ಐಫೋನ್ 14 ಬಂತೆಂದು ಹಿರಿಹಿರಿ ಹಿಗ್ಗಬೇಡಿ.ಅದು ಸರಿಯಾಗಿ ಕೆಲಸ ಮಾಡುತ್ತದೆಯೇ ಎಂಬುದನ್ನು ಮೊದಲು ಗಮನಿಸಿ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : Taali Sushmita sen:ಮಂಗಳಮುಖಿ ಪಾತ್ರದಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೆನ್ : ತಾಲಿ ಸೀರಿಸ್ ಫಸ್ಟ್ ಲುಕ್ ಬಿಡುಗಡೆ
ಇದನ್ನೂ ಓದಿ : Bumrah hits back at critics : ಟಿ20 ವಿಶ್ವಕಪ್‌ನಿಂದ ಔಟ್: ಟೀಕಾಕಾರರನ್ನು ಬೊಗಳುವ ನಾಯಿಗೆ ಹೋಲಿಸಿದ ಜಸ್‌ಪ್ರೀತ್ ಬುಮ್ರಾ
ಇದನ್ನೂ ಓದಿ : Jio and Airtel 5G Network : ನಿಮ್ಮ ಸ್ಮಾರ್ಟ್‌ಫೋನ್ 5G ಸಪೋರ್ಟ್ ಮಾಡ್ತಾ ಇದೆಯಾ ಅಥವಾ ಇಲ್ಲವಾ; ಹೀಗೆ ಚೆಕ್ ಮಾಡಿ…
Man Orders iPhone 13 From Flipkart, Receives iPhone 14 Instead