Bombay HC : ‘ಮದುವೆಯಾದ ಬಳಿಕ ಕೆಲಸ ಮಾಡುತ್ತೇನೆಂದು ಪತ್ನಿ ಹೇಳಿದರೆ ಅದು ಕ್ರೌರ್ಯವಲ್ಲ’ : ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ : Bombay HC :ಮದುವೆಯಾದ ಬಳಿಕ ಮಹಿಳೆಯು ಕೆಲಸಕ್ಕೆ ಹೋಗಬೇಕೆಂದು ಬಯಸುವುದು ಕ್ರೌರ್ಯವಲ್ಲ .ಈ ಕಾರಣಕ್ಕೆ ಮಹಿಳೆಗೆ ವಿಚ್ಛೇದನ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠವು ತನ್ನ ಪತ್ನಿಯಿಂದ ವಿಚ್ಛೇದನ ಬೇಕೆಂದು ವ್ಯಕ್ತಿಯು ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡು ಈ ಮಹತ್ವದ ತೀರ್ಪನ್ನು ನೀಡಿದೆ. ಪತ್ನಿಯು ತಾನು ಕೆಲಸ ಮಾಡಲು ಹೋಗುತ್ತೇನೆಂದು ನನ್ನ ಬಳಿ ನಿರಂತರವಾಗಿ ಜಗಳವಾಡುತ್ತಿದ್ದಳು ಹಾಗೂ ತನಗೆ ಭದ್ರವಾದ ಕೆಲಸ ಸಿಗುವವರೆಗೂ ಮಗು ಮಾಡಿಕೊಳ್ಳುವುದಿಲ್ಲವೆಂದು ನನಗೆ ಬೆದರಿಕೆ ಹಾಕಿದ್ದಳು ಎಂದು ಪತಿಯು ಆರೋಪಿಸಿದ್ದರು. ಅಲ್ಲದೇ ನನ್ನ ಅನುಮತಿಯಿಲ್ಲದೇ ಆಕೆ ಒಮ್ಮೆ ಗರ್ಭಪಾತವನ್ನೂ ಮಾಡಿಸಿಕೊಂಡಿದ್ದಳು ಎಂದು ವ್ಯಕ್ತಿಯು ದೂರಿದ್ದಾರೆ ಎನ್ನಲಾಗಿದೆ.

ನ್ಯಾಯಮೂರ್ತಿ ಅತುಲ್​ ಚಂದೂರ್ಕರ್​ ಹಾಗೂ ನ್ಯಾಯಮೂರ್ತಿ ಊರ್ಮಿಳಾ ಜೋಶಿ ಫಾಲ್ಕೆ ಬಾಂಬೆ ಹೈಕೋರ್ಟ್ ನ್ಯಾಯಪೀಠವು ಹಿಂದೂ ವಿವಾಹ ಕಾಯ್ದೆ ಸೆಕ್ಷನ್​ 13ರ ಅಡಿಯಲ್ಲಿ ಪತ್ನಿಯ ಈ ನಿರ್ಣಯಗಳು ಕ್ರೌರ್ಯದ ಅಡಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಸಂದರ್ಭದಲ್ಲಿ ಉತ್ತಮ ಅರ್ಹತೆ ಹೊಂದಿರುವ ಪತ್ನಿಯು ಕೆಲಸ ಮಾಡಲು ಇಚ್ಛಿಸುತ್ತೇನೆಂದು ಆಸೆ ವ್ಯಕ್ತಪಡಿಸುವುದು ಕ್ರೌರ್ಯದ ಅಡಿಯಲ್ಲಿ ಬರುವುದಿಲ್ಲ. ಪತ್ನಿಯ ನಡವಳಿಕೆಗಳು ಕ್ರೌರ್ಯ ರೂಪವನ್ನು ಹೊಂದಿದೆ ಎಂದು ಹೇಳಲು ಪತಿಯು ನಿರ್ದಿಷ್ಟ ಕಾರಣಗಳನ್ನು ನೀಡಬೇಕಿದೆ. ಯಾಕೆ ತನಗೆ ಆಕೆಯೊಂದಿಗೆ ಇರಲು ಕಷ್ಟವಾಗಿದೆ ಎಂಬುದನ್ನು ಪತಿಯು ಸೂಕ್ತ ಕಾರಣಗಳೊಂದಿಗೆ ತಿಳಿಸಬೇಕು ಎಂದು ನ್ಯಾಯಾಲಯವು ಹೇಳಿದೆ.

ಗರ್ಭ ಧರಿಸುವುದು ಮಹಿಳೆಗೆ ಇಷ್ಟವಿಲ್ಲ ಎಂದಾದಲ್ಲಿ ಆಕೆ ಗರ್ಭಪಾತ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದ್ದಾಳೆ ಎಂದು ಬಾಂಬೆ ಹೈಕೋರ್ಟ್​ ಹೇಳಿದೆ. ಗರ್ಭಾವಸ್ಥೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ವಿಶೇಷ ಹಕ್ಕು ಮಹಿಳೆಗೆ ಇದೆ ಎಂದು ನ್ಯಾಯಾಲಯವು ಸ್ಪಷ್ಟನೆ ನೀಡಿದೆ.

ಇದನ್ನು ಓದಿ :Man Tries To Kiss Cobra : ನಾಗರಹಾವಿಗೆ ಚುಂಬಿಸಲು ಹೋಗಿ ಆಸ್ಪತ್ರೆ ಪಾಲಾದ ಉರಗ ತಜ್ಞ

ಇದನ್ನೂ ಓದಿ : Taali Sushmita sen:ಮಂಗಳಮುಖಿ ಪಾತ್ರದಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೆನ್‌ : ತಾಲಿ ಸೀರಿಸ್ ಫಸ್ಟ್ ಲುಕ್‌ ಬಿಡುಗಡೆ

Wife’s Wish To Work After Marriage, Not Wanting A Child Until Then Is Not Cruelty: Bombay HC

Comments are closed.