ಕಪಿಗಳು ಚೇಷ್ಟೆ ಮಾಡೋದನ್ನ ಕೇಳಿರ್ತೀರಾ, ನೋಡಿಯೂ ಇರ್ತೀರಾ. ಆದರೆ ಎಂದಾದರೂ ಮೇಕೆ ( Goat) ಚೇಷ್ಟೆ ಮಾಡೋದನ್ನು ಕೇಳಿದ್ದೀರಾ..? ಇಲ್ಲ ಎಂದಾದಲ್ಲಿ ನೀವು ಈ ಸ್ಟೋರಿ ಯನ್ನು ಓದಲೇಬೇಕು. ಏಕೆಂದರೆ ಮೇಕೆ ಮಾಡಿದ ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬ ಇಡೀ ದಿನ ಮೇಕೆಯ ಹಿಂದೇ ಅಲೆಯುವಂತ ಪ್ರಸಂಗವೊಂದು ನಡೆದಿದೆ.
ಆಫೀಸು ಅಂದಮೇಲೆ ಅಲ್ಲಿ ನೀವು ಫೈಲುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಚಾರವೊಂದರಲ್ಲಿ ವ್ಯಕ್ತಿಯೊಬ್ಬ ಕುರಿಯ ಹಿಂದೆ ಓಡಿದ್ದಾನೆ. ಇದರ ಹಿಂದೆ ಇಂಟರೆಸ್ಟಿಂಗ್ ಕಾರಣ ಕೂಡ ಇದೆ.ಏಕೆಂದರೆ ಈ ಮೇಕೆಯು ತನ್ನ ಬಾಯಿಯಲ್ಲಿ ಆಫೀಸ್ ಫೈಲನ್ನು ಕಚ್ಚಿಕೊಂಡಿತ್ತು. ಆ ಫೈಲನ್ನು ಪಡೆಯಲು ವ್ಯಕ್ತಿಯು ಕುರಿಯ ಹಿಂದೆ ಊರೆಲ್ಲ ಅಲೆದಿದ್ದಾನೆ.
ಉತ್ತರ ಪ್ರದೇಶದ ಕಾನ್ಪುರ ಎಂಬಲ್ಲಿ ಈ ಘಟನೆಯು ಸಂಭವಿಸಿದೆ. ಈ ದೃಶ್ಯಾವಳಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದ್ದು 51 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಪ್ಪು ಬಣ್ಣದ ಮೇಕೆಯೊಂದು ಬಾಯಲ್ಲಿ ಒಂದಷ್ಟು ಕಾಗದಗಳನ್ನು ಕಚ್ಚಿಕೊಂಡಿರೋದನ್ನು ಕಾಣಬಹುದಾಗಿದೆ. ಅದು ಪೇಪರ್ ಸಮೇತ ಓಡೋಕೆ ಆರಂಭಿಸುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಅದರ ಹಿಂದೆಯೇ ಓಡಿದ್ದಾನೆ. ಅಯ್ಯೋ.. ಅದನ್ನು ವಾಪಸ್ ಕೊಡು ಎಂದು ಮತ್ತೊಬ್ಬ ವ್ಯಕ್ತಿ ಕೂಗುತ್ತಿರೋದು ಸಹ ವಿಡಿಯೋದಲ್ಲಿ ಕೇಳುತ್ತಿದೆ.
कानपुर भी गज़बे है भाई.. एक बकरी सरकारी कार्यालय से पेपर चबा के भाग रही है और कर्मचारी पीछा कर रहे है pic.twitter.com/ql6Yt0D3aE
— Rajeev Nigam (@apnarajeevnigam) December 1, 2021
ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕೊನೆಗೂ ಈ ಮೇಕೆಯನ್ನು ಹಿಡಿಯಲು ಸಿಬ್ಬಂದಿಗೆ ಸಾಧ್ಯವಾಗಲಿಲ್ಲ. ಮುದ್ದೆಯಾದ ಹಾಳೆಗಳ ರಾಶಿಯು ಕಾನ್ಪುರದ ಚೌಬೆಪುರ ಬ್ಲಾಕ್ನ ಸಮೀಪದಲ್ಲಿ ಸಿಕ್ಕಿದೆ ಎನ್ನಲಾಗಿದೆ.
ಇದನ್ನು ಓದಿ :blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು
( Man runs after goat as it escapes with office files in viral video from Kanpur. Watch )