ಮಣ್ಣು ಅಗೆಯೋದಕ್ಕೆ, ನೆಲ ಸಮತಟ್ಟು ಮಾಡೋದಕ್ಕೆ ಜೆಸಿಬಿ ಯಂತ್ರವನ್ನು ಬಳಕೆ ಮಾಡಲಾಗುತ್ತೆ. ಆದರೆ ಇಲ್ಲೊಬ್ಬ ವ್ಯಕ್ತಿ ಜೆಸಿಬಿ ಯಂತ್ರದಿಂದಲೇ ತನ್ನ ಬೆನ್ನನ್ನು ಉಜ್ಜಿಸಿಕೊಳ್ಳುವ ಮೂಲಕ ಎಲ್ಲರೂ ಹಬ್ಬೇರಿಸುವಂತೆ ಮಾಡಿದ್ದಾರೆ.

ಅಬ್ದುಲ್ ನಝಾರ್ ಎಂಬವರು ತಮ್ಮ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಮಣ್ಣು ಕೆಲಸ ಮಾಡುತ್ತಿದ್ದ ವ್ಯಕ್ತಿ ಯೋರ್ವರು ಕೈಯಲ್ಲಿದ್ದ ಟವಲ್ ನಿಂದ ಬೆನ್ನನ್ನು ಉಜ್ಜಿಕೊಳ್ಳುತ್ತಾರೆ. ನಂತರ ಸೀದಾ ಜೆಸಿಬಿ ಬಳಿಗೆ ಬಂದು ಬೆನ್ನನ್ನ ಬಾಗಿಸಿ ನಿಲ್ಲುತ್ತಾರೆ. ಅಲ್ಲದೇ ಜೆಸಿಬಿ ಚಾಲಕನಿಗೆ ತನ್ನ ಬೆನ್ನನ್ನು ಜೆಸಿಬಿ ಬಕೆಟ್ ನಲ್ಲಿ ಉಜ್ಜುವಂತೆ ಸೂಚನೆಯನ್ನು ನೀಡುತ್ತಾರೆ. ಎರಡರಿಂದ ಮೂರು ಬಾರಿ ಚಾಲಕ ವ್ಯಕ್ತಿಯ ಬೆನ್ನನ್ನು ಜೆಸಿಬಿ ಬಕೆಟ್ ನಿಂದ ಉಜ್ಜುತ್ತಾರೆ.

ಅಂತಿಮವಾಗಿ ವ್ಯಕ್ತಿಯನ್ನು ಜೆಸಿಬಿ ಚಾಲಕ ಬಕೆಟ್ ಮೂಲಕ ಎತ್ತಲು ಮುಂದಾಗುತ್ತಿದ್ದಂತೆಯೇ ವ್ಯಕ್ತಿ ಬದಿಗೆ ಸರಿದಿದ್ದಾರೆ. ಅಲ್ಲಿಯೇ ಇದ್ದ ವ್ಯಕ್ತಿಯೋರ್ವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಅಲ್ಲದೇ ಬೆನ್ನು ಉಜ್ಜಿಸಿಕೊಳ್ಳಲು ಜೆಸಿಬಿ ಬಳಕೆ ಮಾಡಿರೋ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಅಲ್ಲದೆ ಸಾಕಷ್ಟು ತಮಾಷೆಯ ಕಾಮೆಂಟ್‍ಗಳು ಬಂದಿವೆ. ವ್ಯಕ್ತಿಯ ಈ ಕೆಲಸಕ್ಕೆ ನೆಟ್ಟಿಗರು ಇದೊಂದು ಬೇಜವಾಬ್ದಾರಿತನ ಎಂದು ಕಿಡಿಕಾರಿದ್ದಾರೆ.