ಆಸ್ಸಾಂನ ಪ್ರಸಿದ್ಧ ಮನೋಹರಿ ಗೋಲ್ಡ್ ಟೀ ಪೌಡರ್ (Manaohari gold tea) ಪ್ರತಿಬಾರಿಯಂತೆ ಈ ಬಾರಿ ಕೂಡ ಇತಿಹಾಸವನ್ನು ಸೃಷ್ಟಿಸಿದೆ. ಗುವಾಹಟಿ ಮೂಲದ ವಿಷ್ಣು ಟೀ ಕಂಪನಿಯು 1 ಕೆಜಿ ಮನೋಹರಿ ಚಹ ಪುಡಿಯನ್ನು ಬರೋಬ್ಬರಿ 99,999 ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ಮನೋಹರಿ ಗೋಲ್ಡ್ ಟೀ ಪೌಡರ್ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.
ಹರಾಜಿನಲ್ಲಿ ಸೌರವ್ ಟೀ ಟ್ರೇಡರ್ಸ್ ಕಂಪನಿಯು 99999 ರೂಪಾಯಿಗೆ ಚಹ ಪುಡಿಯನ್ನು ಬಿಡ್ ಮಾಡಿತ್ತು. ಇದನ್ನು ವಿಷ್ಣು ಟೀ ಕಂಪನಿ ಖರೀದಿ ಮಾಡಿದೆ. ಕಳೆದ ವರ್ಷ ಮನೋಹರಿ ಗೋಲ್ಡ್ ಟೀ ಪುಡಿಯನ್ನು ಕಂಟೆಂಪರೆರಿ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ ಹರಾಜಿಗಿಟ್ಟಿತ್ತು. ಈ ವೇಳೆ 1 ಕೆಜಿ ಚಹಾಪುಡಿ 75 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಮನೋಹರಿ ಮತ್ತೊಮ್ಮೆ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಮನೋಹರಿ ಗೋಲ್ಡ್ ಟೀ ವಿಶೇಷ ಕಾರಣಗಳಿಂದ ಈ ರೀತಿಯ ಪ್ರಸಿದ್ಧಿಯನ್ನು ಪಡೆದಿದೆ. ಚಹಾ ಗಿಡದ ಕುಡಿಯಿಂದ ಇದನ್ನು ತಯಾರಿಸಲಾಗುತ್ತದೆ. ಮತ್ತೊಂದು ವಿಶೇಷ ಅಂದರೆ ಮುಂಜಾನೆ 4 ರಿಂದ 6 ಗಂಟೆಯವರೆಗೆ ಮಾತ್ರ ಈ ಕುಡಿಯನ್ನು ಕೊಯ್ಯಲಾಗುತ್ತದೆ. ಇದನ್ನು ಭಾರತದ ಅತ್ಯಂತ ದುಬಾರಿ ಚಹ ಪುಡಿ ಎಂದು ಕರೆಯಲಾಗುತ್ತದೆ. ಆಸ್ಸಾಂನ ಮನೋಹರಿ ಚಹಾ ಪುಡಿಗೆ ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ .
ಇದನ್ನು ಓದಿ : Mother Killed Baby : ಮಗುವಿನ ಅಳು ಸಹಿಸಲಾರದೇ ಗೋಡೆಗೆ ಜಜ್ಜಿ ಕೊಂದ ಪಾಪಿ ತಾಯಿ..!
ಇದನ್ನೂ ಓದಿ: Corona Mask Test : ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು
Manaohari gold tea powder sold rupess 99999 in auction set record