Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

ಇಂದು ಸುಗಂಧ ದ್ರವ್ಯದ ಬಳಕೆ ಇಲ್ಲದೇ ಇರುವ ರಂಗವೇ ಇಲ್ಲ ಎನ್ನಬಹುದು. ಹಿಂದೆ ಸೌಂದರ್ಯ ಸಾಧನಗಳಲ್ಲಿ ಮಾತ್ರ ಬಳಕೆ ಆಗುತ್ತಿದ್ದ ಸುಗಂಧ ದ್ರವ್ಯಗಳು ಇಂದು ಸೋಪ್, ಶಾಂಪೂ, ಫೇಸ್ ವಾಷ್, ಲೋಷನ್, ಡಿಯೋ ಹೀಗೆ ಎಲ್ಲಕ್ಕೂ ಬೇಕೇ ಬೇಕು. ಒಂದೊಂದು ಪರ್ಫ್ಯುಮ್‌ಗೂ ವಿಭಿನ್ನ ಸುವಾಸನೆಯಿದೆ. ಮುಂಬೈ, ದೆಹಲಿಯಂತಹ ನಗರಗಳಲ್ಲಿ ಪರ್ಫ್ಯುಮ್ ಮಾರಾಟಕ್ಕಾಗಿ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳೇ ಇವೆ. ಆದರೆ ಇವೆಲ್ಲ ಎಲ್ಲಿ ತಯಾರಾಗುತ್ತೆ (Perfume City Of India) ಎಂದು ಯಾರಿಗೂ ಗೊತ್ತಿಲ್ಲ. ನಿಮಗೆ ಗೊತ್ತಿರದ ಈ ಮಾಹಿತಿಯನ್ನು ಈ ಸ್ಟೋರಿ ನೀಡಲಿದೆ.

ಎಲ್ಲಿ ತಯಾರಾಗುತ್ತೆ ಈ ಪರ್ಫ್ಯುಮ್?
ಭಾರತದಲ್ಲಿ ರಾಜಸ್ಥಾನದ ಕನೌಜ್‌ನಲ್ಲಿ (Perfume City Kannauj) ಅತಿ ಹೆಚ್ಚು ಪರ್ಫ್ಯುಮ್ ಉತ್ಪಾದನೆ ಆಗುತ್ತದೆ. ಇದು ಲಕ್ನೋನಿಂದ 130 ಕಿ ಮಿ ದೂರದಲ್ಲಿದೆ. ಈ ಊರಿಗೆ ಕಾಲಿಡುವಾಗ ಸುಗಂಧ ದ್ರವ್ಯಗಳ ವಿಶೇಷ ಪರಿಮಳ ನಮ್ಮನ್ನು ಸ್ವಾಗತಿಸುತ್ತದೆ. ಇಲ್ಲಿ ಕಳೆದ ಐದು ಸಾವಿರ ವರ್ಷಗಳಿಂದ ಪರ್ಫ್ಯುಮ್ ಉತ್ಪಾದನೆ ಆಗುತ್ತಿದೆ. ಹಾಗೇ ಪ್ರತಿಯೊಬ್ಬ ವ್ಯಕ್ತಿಗೂ ಇಲ್ಲಿ ಸಂಪೂರ್ಣ ಮಾಹಿತಿ ಇದೆ. ಇಲ್ಲಿನ 80% ಮನೆಯವರು ಇದನ್ನೇ ಕುಲ ಕಸುಬಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿ”ಇತ್ತಾರ್” ಎಂದು ಕರೆಯಲಾಗುವ ಪರ್ಫ್ಯುಮ್ ನೈಸರ್ಗಿಕವಾಗಿ ತಯಾರಾಗುತ್ತೆ. ಕನೌಜ್‌ ನಗರವನ್ನು ಸುಗಂಧ ದ್ರವ್ಯಗಳ ನಗರ ಎಂದೇ ಕರೆಯುತ್ತಾರೆ.

ಇತಿಹಾಸ ಏನು?
ಈ ಪರ್ಫ್ಯುಮ್ ಹೊಸ ಪದವಲ್ಲ. ಬಹಳ ಹಿಂದಿನ ಕಾಲದಿಂದಲೂ ಪರ್ಫ್ಯುಮ್ ಬಳಕೆ ಇತ್ತು ಎನ್ನಲಾಗುತ್ತಿದೆ. ವಿಶೇಷವಾಗಿ ಯಾಗ, ಯಜ್ಞ ಮಾಡುವಾಗ ಗಿಡ ಮೂಲಿಕೆಗಳನ್ನು ಹಾಕಲಾಗುತ್ತಿತ್ತು. ಕೆಲವೊಮ್ಮೆ ಇದರಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದು ಬಾರದಂತೆ ತಡೆಯಲು ಸುಗಂಧ ವಸ್ತುಗಳನ್ನು ಹಾಕುತ್ತಿದ್ದರು. ಇದು ಬೆಂಕಿಯಲ್ಲಿ ಬೆಂದು ಪರಿಮಳ ಗಾಳಿಯಲ್ಲಿ ಸೇರುತ್ತಿತ್ತು. ಹೀಗೆ ಸುಗಂಧ ದ್ರವ್ಯಗಳ ತಯಾರಿ ಪ್ರಾರಂಭ ಆಯ್ತು ಎನ್ನುತ್ತಾರೆ ಕನೌಜ್‌ ನಗರದ ಹಿರಿಯರು. ಅಂದಹಾಗೆ ಒಂದಾನೊಂದು ಕಾಲದಲ್ಲಿ ಈ ನಗರದ ಚರಂಡಿಗಳಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

ಹೇಗೆ ತಯಾರಾಗುತ್ತೆ?
ಕನೌಜ್‌ನಲ್ಲಿ ಈಗಲೂ ಸಾಂಪ್ರದಾಯಿಕ ಶೈಲಿಯಲ್ಲಿ ಸುಗಂಧ ದ್ರವ್ಯ ತಯಾರಾಗುತ್ತೆ. ಯಾವುದೇ ಲ್ಯಾಬ್ ಇಲ್ಲದೆ, ಹಂಡೆಗಳಲ್ಲಿ ಪರ್ಫ್ಯುಮ್ ತಯಾರಾಗುತ್ತೆ. ದೊಡ್ಡ ಹಂಡೆಗಳಲ್ಲಿ ನೀರು ಹಾಗೂ ಹೂವಿನ ಎಸಳುಗಳನ್ನು ಹಾಕಲಾಗುತ್ತದೆ. ಇವೆರಡನ್ನೂ ಚೆನ್ನಾಗಿ ಕುದಿಸಲಾಗುತ್ತದೆ. ಇನ್ನೊಂದು ಬದಿಯಲ್ಲಿ ನಿಕಲ್ ಪ್ಲೇಟೆಡ್ ಪಾತ್ರೆಯಲ್ಲಿ ಎಣ್ಣೆ ಕುದಿಸುತ್ತಾರೆ. ಇವೆರಡನ್ನೂ ಕೊಳವೆ ಮೂಲಕ ಒಂದು ಮಾಡಲಾಗುತ್ತದೆ. ಅಂದರೆ ಹೂವಿನ ಪರಿಮಳ ಎಣ್ಣೆಯನ್ನು ಸೇರುವಂತೆ ಮಾಡಲಾಗುತ್ತದೆ. ಈ ಹಬೆ ಹೊರ ಹೋಗದಂತೆ 5 ಗಂಟೆ ಮುಚ್ಚಿಡುತ್ತಾರೆ. ನಂತರ ಎಣ್ಣೆ ಜೊತೆ ಬಂದ ನೀರನ್ನು ಚೆಲ್ಲುತ್ತಾರೆ. ಕಂಟೇನರ್ ತಣ್ಣಗಾದ ಮೇಲೆ 30 ದಿನಗಳ ತನಕ ಇದನ್ನು ಮುಚ್ಚಿ ಇಡಲಾಗುತ್ತದೆ.

ಕನೌಜ್‌ ಪ್ರದೇಶದಲ್ಲಿ ಒಟ್ಟು 6 ವೆರೈಟಿ ಪರ್ಫ್ಯುಮ್ ತಯಾರಿಸಲಾಗುತ್ತದೆ. ಗುಲಾಬಿ, ಹೆನ್ನಾ, ಶಮಾಮ್ ಹೆನ್ನಾ,ಮಲ್ಲಿಗೆ ಹಾಗೂ ಬೆಲಾ. ಇಲ್ಲಿ ಪಾಪುಲರ್ ಆಗಿದ್ದು ಮಣ್ಣಿನ ಪರ್ಫ್ಯುಮ್ ಆಗಿದೆ. ಇದು ಮೇಕಪ್ ಹಾಗೂ ಮೆಡಿಸಿನ್ ಕಂಪೆನಿಗಳಿಗೆ ರಫ್ತಾಗುತ್ತದೆ. ಪ್ರತಿ ವರ್ಷ ಕನೌಜ್‌ನಲ್ಲಿ 20 ಲಕ್ಷ ಲೀಟರ್ ಪರ್ಫ್ಯುಮ್ ತಯಾರಾಗುತ್ತೆ. ಇದಕ್ಕಾಗಿ ಸೀಸನಲ್ ಹೂವುಗಳನ್ನು ಬಳಸಲಾಗುತ್ತದೆ. ಇಲ್ಲಿ ತಯಾರಾದ ಈ ಪರ್ಫ್ಯುಮ್ 50ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತದೆ.

ಬರಹ : ತೇಜಸ್ವಿನಿ ಭಾರದ್ವಾಜ್

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು


ಇದನ್ನೂ ಓದಿ: Immadi Pulikeshi : ದಕ್ಷಿಣ ಭಾರತೀಯರ ಮೇಲೆ ನಿಲ್ಲಬೇಕಿದೆ ಹೇರಿಕೆ; ಕನ್ನಡಿಗರ ಸ್ವಾಭಿಮಾನದ ಸಂಕೇತ ಇಮ್ಮಡಿ ಪುಲಿಕೇಶಿಯಂತಹ ನಾಯಕ ಬೇಕಿದೆ


(Perfume City Kannauj 80 percent involved in perfume making)

Comments are closed.