ಆಪ್ ಆಯ್ತು ಆಟಿಕೆ ಮೂಲಕ ಚೀನಾಕ್ಕೆ ಪಾಠ ಕಲಿಸ್ತಾರಾ ಮೋದಿ !

0
  • ವಂದನಾ ಕೊಮ್ಮುಂಜೆ

ವದೆಹಲಿ : ಕುತಂತ್ರಿ ಚೀನಾ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲೋ ಆಸಾಮಿ. ಭಾರತಕ್ಕೆ ಹೇಗಾದ್ರೂ ತೊಂದರೆ ಕೊಡಬೇಕು ಅಂತ ಕಾಯುತ್ತಾನೆ ಇರುತ್ತೆ. ಆದರೆ ಅಂತಹ ಚೀನಾಕೆ ಮತ್ತೊಮ್ಮೆ ಶಾಕ್ ಕೊಡೋಕೆ ರೆಡಿಯಾಗಿದ್ದಾರೆ ಪ್ರಧಾನಿ. ಮೋದಿಯ ಈ ನಿರ್ಧಾರದಿಂದ ಚೀನಾದ ಆದಾಯಕ್ಕೆ ಪೆಟ್ಟು ಬೇಳೋದು ಗ್ಯಾರಂಟಿ.

ಕೆಲವೇ ದಿನಗಳ ಹಿಂದೆಯಷ್ಟೇ ಚೀನಾದ ಆಪ್ ಗಳನ್ನು ಬ್ಯಾನ್ ಮಾಡಿ ಚೀನಾ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ನೀಡಿದ್ರು ನರೇಂದ್ರ ಮೋದಿ. ಈಗ ಮತ್ತೊಂದು ಏಟು ನೀಡೋಕೆ ಮುಂದಾಗಿದ್ದಾರೆ. ಅದಕ್ಕಾಗಿ ಮೋದಿ ಹುಡುಕಿದ ದಾರಿ ಮಕ್ಕಳ ಟಾಯ್ಸ್. ಅಂದ್ರೆ ಆಟಿಕೆ. ಹೌದು, ಚೀನಾದ ಆರ್ಥಿಕತೆ ನಿಂತಿರೋದೇ ಅವರು ರಪ್ತು ಮಾಡುವ ಪ್ಲಾಸ್ಟಿಕ್ ಸಾಮಾಗ್ರಿಗಳ ಮೇಲೆ.

ಅದರಲ್ಲೂ ಚೀನಾಗೆ ಭಾರತ ದೊಡ್ಡ ಮಾರ್ಕೆಟ್. ಮಕ್ಕಳ ಹೆಚ್ಚಿನ ಆಟಿಕೆ ಸಿಗೋದು ಚೀನಾ ಮೇಡ್. ನೀವೇ ನೋಡಿರುತ್ತಿರಾ, ಅದರಲ್ಲೂ ನೀವು ಪೋಷಕರಾಗಿದ್ರೆ ನೀವು ಮಕ್ಕಳಿಗೆ ಮಾರುಕಟ್ಟೆಯಿಂದ ತರುವ ಆಟಿಕೆಗಳ ಕವರ್ ಮೇಲೆ ಮೇಡ್ ಇನ್ ಚೀನಾ ಅಂತ ಬರೆದಿರೋದು ಅಥವಾ ಚೀನೀ ಬಾಷೆಯಲ್ಲಿ ಬರೆದಿರೋ ಸೂಚನೆಗಳನ್ನು ಅಂತಹ ವಿದೇಶಿ ವಸ್ತುಗಳಿಗೆ ಸಡ್ಡು ಹೊಡೆಯೋಕೆ ಮೋದಿ ಮುಂದಾಗಿದ್ದಾರೆ.

ಹಾಗಂತ ಪ್ರಧಾನಿ ನರೇಂದ್ರ ಮೋದಿ ಆಟಿಕೆಗಳನ್ನು ಬ್ಯಾನ್ ಮಾಡ್ತಿಲ್ಲ. ಬದಲಾಗಿ ಆತ್ಮ ನಿರ್ಭರ ಯೋಜನೆಯಅಡಿಯಲ್ಲಿ ಭಾರತೀಯ ಆಟಿಕೆ ಉದ್ಯಮವನ್ನು ಆರಂಭಿಸಲು ಕರೆ ನೀಡಿದ್ದಾರೆ. 65 ನೇ ಆವೃತ್ತಿಯ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಮೋದಿ ಭಾರತೀಯ ಆಟಿಕೆ ಉದ್ಯಮ ಬೆಳೆಯಬೇಕು ಅಂದ್ರು.

ವಿಶ್ವದ ಆಟಿಕೆ ಉದ್ಯಮದ ವಹಿವಾಟು ಸುಮಾರು 7 ಲಕ್ಷ ಕೋಟಿ ಇದೆ. ಆದರೆ ಭಾರತದ ಕೊಡುಗೆ ಮಾತ್ರ ಇದಕ್ಕೆ ಅತೀ ಕಡಿಮೆ ಅಂತ ಹೇಳಿದ್ರು. ಹೇಗಾದೂ ಮಾಡಿ ನಾವು ಇದರಲ್ಲೂ ಮುಂದೆ ಬರಬೇಕು ಅಂತ ಕರೆ ನೀಡಿದ್ದಾರೆ.

ಗಣೇಶ ಚತುರ್ಥಿಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಬಳಸಲಾಗಿದೆ. ಅಂತೆಯೇ ಆಟಿಕೆಯಲ್ಲೂ ಯಾಕೆ ಪರಿಸರ ಸ್ನೇಹಿಯಾಗಿರೋ ಆಟಿಕೆಯನ್ನು ಬಳಸಬಾರದು ಅಂತ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಭಾರತೀಯ ಆಟಿಕೆ ಉದ್ಯಮವನ್ನು ಪ್ರಸ್ತಾಪಿಸಿದ ಮೋದಿ ಚೆನ್ನಪಟ್ಟಣದ ಗೊಂಬೆಗಳು, ತಮಿಳುನಾಡು, ಆಂದ್ರಪ್ರದೇಶದಲ್ಲಿ ತಯಾರಾಗು ಗೊಂಬೆಗಳು ಉತ್ಕೃಷ್ಟ ಮರದಿಂದ ತಯಾರಾಗಿರುವ ಈ ಗೊಂಬೆಗಳು ಮಕ್ಕಳಿಗೂ ಸೂಕ್ತ. ವಿದೇಶಿ ಆಟಿಕೆ ಬದಲು ಭಾರತೀಯ ಆಟಿಕೆಯನ್ನು ಬಳಸಿ ಅಂತ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಆಂದ್ರ ಪ್ರದೇಶದ ವಿಶಾಖಪಟ್ಟಣದ ಸಿವಿ ರಾಜು ಮರದ ಎತಿಕೊಪ್ಪಕ ಆಟಿಕೆಗಳ ಬಗೆಯೂ ಮೋದಿ ಮೆಚ್ಚುಗೆಯ ಮಾತನಾಡಿದ್ದಾರೆ.

ಕೇವಲ ಆಟಿಕೆಗಳು ಮಾತ್ರವಲ್ಲ ದೇಶದಲ್ಲಿ ಬಳಕೆ ಮಾಡುತ್ತಿರುವ ಬಹುತೇಕ ಕಂಪ್ಯೂಟರ್ ಗೇಮ್ ಆಪ್ ಗಳೂ ಕೂಡಾ ವಿದೇಶದಲ್ಲಿಯೇ ಅಭಿವೃದ್ದಿಯಾದವೇ ಹೆಚ್ಚು. ಹೀಗಾಗಿ ನಮ್ಮ ದೇಶದ ಗೇಮ್ ಗಳು ಬರೋ ಅಗತ್ಯವಿದೆ. ನಮ್ಮಲ್ಲಿ ಕಾನ್ಸೆಪ್ಟ್ ಗಳಿಗೆ ಬರವಿಲ್ಲ ಅನ್ನೋ ಮೂಲಕ ನಮ್ಮ ಪ್ರತಿಭೆಗಳಿಗೆ ಮಣೆ ಹಾಕೋಕೆ ಮೋದಿ ಮುಂದಾಗಿದ್ದಾರೆ. ಯವ ಪ್ರತಿಭೆಗಳಿಗೆ ಕರೆ ನೀಡಿರೋ ಮೋದಿ ಭಾರತೀಯ ಗೇಮ್ ಜೊತೆಗೆ, ಭಾರತೀಯತೆಯ ಗೇಮ್ ಗಳನ್ನು ಡೆವಲಪ್ ಮಾಡಿ ಅಂತ ಕರೆ ನೀಡಿದ್ದಾರೆ

ಸರ್ಕಾರದಿಂದಲೂ ನ್ಯೂ ಸ್ಟಾರ್ಟ್ ಪ್ ಗಳಿಗೆ ಸಹಾಯ ಸಿಗುವ ಸಾಧ್ಯತೆ ಇದೆ. ನ್ಯೂ ನ್ಯೂ ಸ್ಟಾರ್ಟಫ್ ಗಳಿಗೆ ಬೆಂಬಲ ನೀಡುತ್ತೇನೆ ಎಂದು ಮೋದಿ ಘೋಷಿಸಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲೂ ಆಟಿಕೆಗಳ ಮೂಲಕ ಕ್ರಿಯೇಟಿವ್ ಲರ್ನಿಂಗ್ ಕೂಡಾ ಆರಂಭಿಸಲು ಸರ್ಕಾರ ಮುಂದಾಗಿದೆ.

ಒಂದೊಮ್ಮೆ ಮೇಡ್ ಇನ್ ಇಂಡಿಯಾ ಉದ್ಯಮ ಆರಂಭವಾದ್ರೆ ಚೀನಾದ ಆಟಿಕೆಗಳು ನೆಲಕಚ್ಚೋದು ಖಂಡಿತ. ಚಾಣಾಕ್ಷ ಮೋದಿ ಲೆಟ್ಸ್ ಬಿಗಿನ್ ಗೇನ್ ಅನ್ನೋ ಮೂಲಕ ಚೀನಾದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳೋಕೆ ಮುಂದಾಗಿದ್ದಾರೆ.

Leave A Reply

Your email address will not be published.