ಡ್ರಗ್ಸ್ ನಶೆಗೆ ಚಿರು ಸಾವಿನ ಲಿಂಕ್ : ಕಣ್ಣೀರಿಟ್ಟ ಮೇಘನಾ ರಾಜ್, ಕಿಡಿಕಾರಿದ ಧ್ರುವ ಸರ್ಜಾ

0

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಇದೀಗ ಬಿರುಗಾಳಿಯನ್ನೇ ಎಬ್ಬಿಸಿದೆ. ಯುವ ನಟ ಚಿರಂಜೀವಿ ಸರ್ಜಾ ಸಾವಿಗೂ ಡ್ರಗ್ಸ್ ನಶೆಗೂ ಲಿಂಕ್ ಮಾಡಲಾಗ್ತಿದೆ. ಚಿರಂಜೀವ ಸರ್ಜಾ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಚಿರು ಪತ್ನಿ ಮೇಘನಾ ರಾಜ್ ಕಣ್ಣಿರಿಟ್ಟಿದ್ದಾರೆ. ಇನ್ನು ಸಹೋದರ ಧ್ರುವ ಸರ್ಜಾ ಇಂದ್ರಜಿತ್ ಲಂಕೇಶ್ ವಿರುದ್ದ ಕಿಡಿಕಾರಿದ್ದಾರೆ.

ಡ್ರಗ್ಸ್ ದಂಧೆಯ ಮಾಸ್ಟರ್ ಮೈಂಡ್ ಅನಿಕಾ ಬಂಧನದ ಬೆನ್ನಲೇ ಸ್ಯಾಂಡಲ್ ವುಡ್ ನಟ, ನಟಿಯರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಅದ್ರಲ್ಲೂ ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಯುವ ನಟ ಸಾವಿನ ಬೆನ್ನಲ್ಲಿ ಯಾಕೆ ಮರಣೋತ್ತರ ಪರೀಕ್ಷೆ ಮಾಡಿಲ್ಲ. ಈ ಸಾವಿಗೂ ಡ್ರಗ್ಸ್ ಗೂ ಸಂಬಂಧವಿದೆ ಅಂತಾ ಮಾತನಾಡಿದ್ರು.

ನೇರವಾಗಿ ಚಿರಂಜೀವಿ ಸರ್ಜಾ ಹೆಸರನ್ನು ಪ್ರಸ್ತಾಪ ಮಾಡದೇ ಇದ್ರೂ ಕೂಡ ಪರೋಕ್ಷವಾಗಿ ಹೇಳಿದ್ದಾರೆ. ಈ ಬೆನ್ನಲ್ಲೇ ಚಿರು ಮಾವ ಸುಂದರ್ ರಾಜ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಇದೀಗ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಕಣ್ಣೀರು ಸುರಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಇಂದ್ರಜಿತ್ ಲಂಕೇಶ್ ಅವರು ನೀಡಿದ ಹೇಳಿಕೆಯಿಂದ ಸರ್ಜಾ ಕುಟುಂಬ ಸಾಕಷ್ಟು ಮನನೊಂದಿದೆ. ಮೊದಲೇ ಮನೆ ಮಗನನ್ನು ಕಳೆದುಕೊಂಡಿದ್ದ ಸರ್ಜಾ ಕುಟುಂಬಕ್ಕೆ ಮನೆ ಮಗನ ಮೇಲೆ ಬಂದಿರುವ ಆರೋಪಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾಗಿರುವ ಪ್ರಶಾಂತ್ ಸಂಬರ್ಗಿ ಅವರ ಜೊತೆಗೆ ವಾಟ್ಸಾಪ್ ಚಾಟ್ ಮಾಡಿದ್ದ ನಟಿ ಮೇಘನಾ ರಾಜ್ ಇಂದ್ರಜಿತ್ ಲಂಕೇಶ್ ಚಿರು ಹೆಸರನ್ನು ಪ್ರಸ್ತಾಪ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಸರ್ಜಾ ಹೆಸರಿಗೆ ಕಳಂಕ ತರುವ ಕಾರ್ಯವನ್ನು ಮಾಡಬೇಡಿ , ಚಿರು ಹೆಸರಿಗೆ ಕಳಂಕ ತರಬೇಡಿ ಅಂತಾ ವಿನಂತಿಸಿಕೊಂಡಿದ್ದಾರೆ.

ಡ್ರಗ್ಸ್ ದಂಧೆಯ ವಿಚಾರದಲ್ಲಿ ಚಿರು ಹೆಸರು ಹೇಳುವುದರಿಂದ ಯಾರಿಗೆ ಲಾಭ. ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗಿಲ್ಲ, ಆದ್ರೂ ಅವ್ರ ಹೆಸರನ್ನ ಪ್ರಸ್ತಾಪಿಸಿದ್ದೇಕೆ ? ಎಂದು ಮೇಘನಾ ಪ್ರಶ್ನಿಸಿದ್ದಾರೆ. ಅಲ್ಲದೇ ಚಿರಂಜೀವಿ ಸರ್ಜಾ ಅವರನ್ನು ನೆನೆದು ಮೇಘನಾ ರಾಜ್ ಕಣ್ಣೀರು ಸುರಿಸಿದ್ದಾರೆ.

ಮೇಘನಾರಾಜ್ ಮಾತ್ರವಲ್ಲ, ಚಿರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಕೂಡ ಇಂದ್ರಜಿತ್ ಹೇಳಿಕೆಯ ವಿರುದ್ದ ಕಿಡಿಕಾರಿದ್ದಾರೆ. ಧ್ರುವ ಸರ್ಜಾ ಅವರು ಕೂಡ ಪ್ರಶಾಂತ್ ಸಂಬರ್ಗಿ ಅವರ ಜೊತೆಗೆ ವಾಟ್ಸಾಪ್ ಚಾಟ್ ಮಾಡುತ್ತಾ ಅಣ್ಣ ಹೆಸರು ಬಳಕೆ ಮಾಡಿರುವ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಚಿರು ಹಸರನ್ನು ಬಳಕೆ ಮಾಡಿರುವುದರಿಂದಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ. ಚಿರು ದೇವರ ಸಮಾನರು ಅವರ ಹೆಸರನ್ನು ಬಳಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಚಿರಂಜೀವಿ ಸಾವಿನ ನೋವು ಕುಟುಂಬಸ್ಥರಲ್ಲಿ ಹಾಗೂ ಅಭಿಮಾನಿಗಳಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವಲ್ಲೇ ಚಿರು ಸಾವನ್ನ ಡ್ರಗ್ಸ್ ನಶೆಯ ಜೊತೆಯಲ್ಲಿ ಹೋಲಿಕೆ ಮಾಡುತ್ತಿರುವುದು ನೋವನ್ನು ತರಿಸಿದೆ.

Leave A Reply

Your email address will not be published.