newlywed bride : ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಬಹುಮುಖ್ಯ ಕ್ಷಣ. ಅದರಲ್ಲೂ ಪ್ರೀತಿಸಿ ಮದುವೆಯಾಗುವವರಂತೂ ಸಾಕಷ್ಟು ದಿನಗಳಿಂದ ಈ ಮಹತ್ವದ ದಿನಕ್ಕಾಗಿ ಕನಸು ಕಾಣುತ್ತಿರ್ತಾರೆ.ಜೊತೆಯಾಗಿ ಭವಿಷ್ಯದ ಕನಸು ಕಾಣುವುದು ಪ್ರೇಮಿಗಳ ಕೆಲಸ. ಆದರೆ ಓಡಿಶಾದಲ್ಲಿ ತಾನು ಪ್ರೀತಿಸಿದ ಯುವತಿ ಅಸಲಿಗೆ ಯುವಕ ಎಂದು ತಿಳಿದು ಶಾಕ್ ಆಗಿದ್ದಾನೆ. ಆದರೆ ಈ ವಿಚಾರ ಗೊತ್ತಾಗುವಷ್ಟರಲ್ಲಿ ಈ ಜೋಡಿಯ ಮದುವೆಯೇ ಮುಗಿದು ಹೋಗಿತ್ತು.
ಓಡಿಶಾದ (odisha) ಭದ್ರಕ್ ಜಿಲ್ಲೆಯ ಬಸುದೇವಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಾಸಿಯಾ ಎಂಬ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅಲೋಕ್ ಕುಮಾರ್ ಮಿಸ್ತ್ರಿ ಎಂಬಾತ ಫೇಸ್ಬುಕ್ನಲ್ಲಿ ಕೇಂದ್ರಪಾಡ ಜಿಲ್ಲೆಯ ಜಂಬೂ ಮೆರೈನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಗರ ಗ್ರಾಮದ ಬಿಸ್ವನಾಥ್ ಮಂಡಲ್ ಪುತ್ರಿ ಮೇಘನಾ ಮಂಡಲ್ ಜೊತೆ ಸ್ನೇಹ ಬೆಳಸಿದ್ದ. ಕೇವಲ 15 ದಿನಗಳಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ.
ಮೇ 24ರಂದು ಮೇಘನಾಳನ್ನು ಭೇಟಿಯಾಗಲು ಜಾಜ್ಪುರ ಜಿಲ್ಲೆಯ ಚಂಡಿಖೋಲ್ಗೆ ಬಂದಿದ್ದ ಅಲೋಕ್ ಕುಮಾರ್ ಆಕೆಯನ್ನು ಬಸುದೇವಪುರದಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿದ್ದ. ಇಲ್ಲಿ ಇವರಿಬ್ಬರಿಗೂ ಮದುವೆಯನ್ನು ಮಾಡಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆದರೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ವಧುವಿನ ಪರಿಚಯಸ್ಥರೊಬ್ಬರು ಆಕೆಯನ್ನು ಮೇಘನಾದ್ ಎಂದು ಕರೆದಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ಅಲೋಕ್ ಹಾಗೂ ಆತನ ಕುಟುಂಬಸ್ಥರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬಳಿಕ ವಧು ಸಾಕಷ್ಟು ಸ್ಪಷ್ಟನೆ ನೀಡಿದರೂ ಸಹ ಅನುಮಾನಗೊಂಡ ಅಲೋಕ್ ಹಾಗೂ ಆತನ ಕುಟುಂಬಸ್ಥರು ಮಹಿಳೆಯನ್ನು ವಿವಸ್ತ್ರಗೊಳಿಸಿ ನೋಡಿದಾಗ ಇದು ಅವಳಲ್ಲ, ಅವನು ಎಂದು ತಿಳಿದಿದೆ. ಇದರಿಂದ ಕೋಪಗೊಂಡ ಅಲೋಕ್ ಸಂಬಂಧಿಗಳು ಮೇಘನಾದ್ನ ಉದ್ದನೆಯ ಕೂದಲನ್ನು ಕತ್ತರಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿಯನ್ನೂ ನೀಡಿದ್ದಾರೆ. ಪೊಲೀಸರು ಮೇಘನಾದ್ನನ್ನು ರಕ್ಷಿಸಿ ಕುಟುಂಬಸ್ಥರ ಕೈಗೆ ಒಪ್ಪಿಸಿದ್ದಾರೆ.
ಇದನ್ನು ಓದಿ : Sruthi Hariharan : ಸಾಲು ಸಾಲು ಸಿನಿಮಾದಲ್ಲಿ ಶ್ರುತಿ ಹರಿಹರನ್ : ಲೂಸಿಯಾ ಚೆಲುವೆಯ ಗ್ರ್ಯಾಂಡ್ ಕಮ್ ಬ್ಯಾಕ್
ಇದನ್ನೂ ಓದಿ : IPL 2022 Eliminator : RCB vs LSG ಪಂದ್ಯ : ಇಲ್ಲಿದೆ ಪ್ರಬಲ ಪ್ಲೇಯಿಂಗ್ XI
newlywed bride turns out to be man in odisha