ಶಾಲಾರಂಭ ಮಾಡಿ ಸಮಯ ವ್ಯರ್ಥ ಮಾಡಿದ ಸರಕಾರ : ಮುದ್ರಣವೇ ಗೊಂಡಿಲ್ಲ ಪಠ್ಯಪುಸ್ತಕ, ತಲುಪೋಕೆ ಬೇಕು ಒಂದು ತಿಂಗಳು

ಬೆಂಗಳೂರು : ಕೊರೋನಾದಿಂದ ಎರಡು ವರ್ಷಗಳ ಕಾಲ ಕುಂಠಿತಗೊಂಡ ಶಾಲಾ ಚಟುವಟಿಕೆಗಳನ್ನು ಪುನರಾರಂಭಿಸಿ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಉದ್ದೇಶದಿಂದ ಸರ್ಕಾರ ಈ ಭಾರಿ ನಿಗದಿತ ಅವಧಿಗಿಂತ 15 ದಿನ ಮೊದಲು ಶಾಲಾರಂಭ (School Start) ಮಾಡಿದೆ. ಆದರೇ ಈ ಶಾಲಾರಂಭ ಮಾಡಿದ್ದು ಪ್ರಯೋಜನವಿಲ್ಲ ಎಂಬಂತಾಗಿದ್ದು, ಪಠ್ಯಪುಸ್ತಕ ಶಾಲೆ ತಲುಪಲು (Text Book Delay) ಇನ್ನೂ ಒಂದು ತಿಂಗಳು ವಿಳಂಬವಾಗಲಿದೆ ಎಂಬ ಮಾಹಿತಿ ಸ್ವತಃ ಪ್ರಕಾಶಕರ ಮೂಲದಿಂದಲೇ ಹೊರಬಿದ್ದಿದೆ.

ಸಾಮಾನ್ಯವಾಗಿ ಸರ್ಕಾರ ನವೆಂಬರ್ ನಲ್ಲಿ ಪಠ್ಯಪುಸ್ತಕಗಳ ಮುದ್ರಣಕ್ಕೆ ಆರ್ಡರ್ ನೀಡುವುದು ವಾಡಿಕೆ. ಆದರೆ ಈ ಭಾರಿ ನಾಲ್ಕು ತಿಂಗಳು ತಡವಾಗಿ ಅಂದ್ರೇ ಫೆಬ್ರವರಿಯಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಆರ್ಡರ್ ಕೊಟ್ಟಿದ್ದಾರೆ. ಹೀಗಾಗಿ ಪಠ್ಯ ಪುಸ್ತಕ ಶಾಲೆಗಳಿಗೆ ತಲುಪೋದು ಇನ್ನೂ ವಿಳಂಬವಾಗಲಿದೆ.

ಒಂದೆಡೆ ಸರ್ಕಾರ ವಿಳಂಬವಾಗಿ ಪಠ್ಯಪುಸ್ತಕ ಮುದ್ರಣಕ್ಕೆ ನೀಡಿದೇ ಇನ್ನೊಂದೆಡೆ ಕಾಗದದ ಕೊರತೆಯಿಂದ ಪಠ್ಯ ಮುದ್ರಣ ವಿಳಂಬವಾಗುತ್ತಿದೆ. 5 ಕೋಟಿ 65 ಲಕ್ಷದ 25,228 ಪುಸ್ತಕ ಸಪ್ಲೈ ಆಗಬೇಕಿದೆ. ಇಷ್ಟು ಪುಸ್ತಕ ಸಪ್ಲೈ ಮಾಡಲು 21 ಜನ ಪ್ರಿಂಟರ್ಸ್ ಇದ್ದಾರೆ. ಇಲ್ಲಿಯವರೆಗೂ ಕೇವಲ 72% ಪುಸ್ತಕ ಸಫ್ಲೆ ಆಗಿದ್ದು, 3 ಕೋಟಿ 70 ಲಕ್ಷ ಪುಸ್ತಕ ಪ್ರಿಂಟ್ ಆಗಿದೆ. ಆದರೆ ಆರ್ಡರ್ ಪೂರ್ಣಗೊಳ್ಳಲು ಇನ್ನು 25% ಪುಸ್ತಕ ಪುಸ್ತಕ ಮುದ್ರಣವಾಗಿ ತಲುಪಬೇಕಾಗಿದೆ. ಹೀಗಾಗಿ ಈ ಭಾರಿ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಪುಸ್ತಕ ತಲುಪಲು 1 ತಿಂಗಳು ಸಮಯಾವಕಾಶ ಬೇಕಾಗುತ್ತೆ. ಪಠ್ಯಪುಸ್ತಕದ ಪ್ರಮುಖ ಮುದ್ರಕ ಅಭಿಮಾನಿ ಪ್ರಕಾಶನದ ಆಡಳಿತಾಧಿಕಾರಿ ಮಾಹಿತಿ ನೀಡಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಇರೋ ಪಠ್ಯ ಪುಸ್ತಕಗಳನ್ನು ಪ್ರಿ‌ಂಟ್ ಮಾಡಲು ನವೆಂಬರ್ ನಲ್ಲಿ ಆರ್ಡರ್ ನೀಡಲಾಗುತ್ತದೆ. ಆದರೆ ಈ ಭಾರಿ ಪಠ್ಯಪುಸ್ತಕ ಪರಿಷ್ಕರಣೆ ಮಾಡೋ ಉದ್ದೇಶದಿಂದ ಸರ್ಕಾರ ಮುದ್ರಣಕ್ಕೆ ನೀಡಿರಲಿಲ್ಲ. ಕೆಲ ಪಠ್ಯಗಳನ್ನು ಪರಿಷ್ಕರಣೆಗೊಳಿಸಿ ಪಠ್ಯವನ್ನು ಅಂತಿಮಗೊಳಿಸಿ ಪ್ರಿಂಟ್ ಗೆ ನೀಡಲು ವಿಳಂಬವಾಗಿದೆ.

ಇದೇ ಕಾರಣಕ್ಕೆ ಇನ್ನೂ ಶಾಲೆಗೆ ಪಠ್ಯತಲುಪಿಲ್ಲ. ಆದರೆ ಪಠ್ಯಪುಸ್ತಕ ಪರಿಷ್ಕರಣೆಗೆ ವ್ಯಕ್ತವಾಗಿರೋ ವಿರೋಧವನ್ನು ತಪ್ಪಿಸಿಕೊಳ್ಳಲು ಸರ್ಕಾರ ಈಗಾಗಲೇ ಪಠ್ಯಪುಸ್ತಕ ಶಾಲೆಗಳಿಗೆ ತಲುಪಿದೆ ಎಂದು ಸುಳ್ಳು ಹೇಳಿ ಮ್ಯಾನೇಜ್ ಮಾಡುವ ಪ್ರಯತ್ನದಲ್ಲಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಸರ್ಕಾರ ಶಿಕ್ಷಣ ಕ್ಷೇತ್ರದ ಸವಾಲು ಹಾಗೂ ಮಕ್ಕಳ ಹಿತ ಕಾಪಾಡುವಲ್ಲಿ ವಿಫಲವಾಗಿದ್ದು ಕೇವಲ ಹೆಗ್ಗಳಿಕೆ ಶಾಲೆಯನ್ನು ಅವಧಿಗೆ ಮುನ್ನ ಆರಂಭಿಸಿದೆ ಎಂಬ ಟೀಕೆ ಎಲ್ಲಾ ವಲಯದಿಂದ ವ್ಯಕ್ತವಾಗಿದೆ

ಇದನ್ನೂ ಓದಿ : CBSE : ಸಿಬಿಎಸ್​ಇ ಟರ್ಮ್​ 2 ಪರೀಕ್ಷೆ ಫಲಿತಾಂಶ ವಿಳಂಬ ಸಾಧ್ಯತೆ : ಅಂಕಗಳ ಅಪ್​ಲೋಡ್​ ಮಾಡಲು ಗಡುವು ವಿಸ್ತರಿಸಿದ ಬೋರ್ಡ್​

ಇದನ್ನೂ ಓದಿ : School Textbook : ಅವಧಿಗೂ ಮುನ್ನವೇ ಶಾಲಾರಂಭ : ಪಠ್ಯಪುಸ್ತಕ ಸಿಗದೇ ಶಿಕ್ಷಕರ ಪರದಾಟ

Text Book Delay Reach School in Karnataka

Comments are closed.