ಎಂದಿನಂತೆ ಆ ಇಬ್ಬರು ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ರು. ಎಲ್ಲಾ ಕಡೆ ಗಸ್ತು ಮುಗಿಸಿ ಆ ಪಾರ್ಕ್ ಕಡೆಗೆ ಬಂದಿದ್ದಾರೆ. ನಡುರಾತ್ರಿಯ ಹೊತ್ತಲ್ಲಿ ಪಾರ್ಕ್ ನಲ್ಲಿ ಯಾರೋ ವರ್ಕೌಟ್ ಮಾಡ್ತಿದ್ದ ಸದ್ದು ಕೇಳಿಬರ್ತಿತ್ತು. ಯಾರಿರಬಹುದು ಅಂತಾ ಪೊಲೀಸರು ಹತ್ತಿರಕ್ಕೆ ಹೋಗಿ ನೋಡಿದ್ರೆ ಶಾಕ್ ಕಾದಿತ್ತು. ಯಾಕೆಂದ್ರೆ ಪಾರ್ಕಿನಲ್ಲಿ ವಿಚಿತ್ರ ಘಟನೆಯೊಂದು ನಡೆದು ಹೋಗಿತ್ತು.
ನಡುರಾತ್ರಿಯ ಹೊತ್ತಲ್ಲಿ ಪಾರ್ಕಿನಲ್ಲಿ ಅಳವಡಿಸಲಾಗಿದ್ದ ಜಿಮ್ ಪರಿಕರದಲ್ಲಿ ಯಾರೋ ವರ್ಕೌಟ್ ಮಾಡ್ತಾ ಇದ್ರು. ಆದ್ರೆ ಅಲ್ಲಿ ಯಾರು ಇರಲಿಲ್ಲ. ಎಕ್ವುಪ್ ಮೆಂಟ್ ಗಳು ಮಾತ್ರ ತನ್ನಷ್ಟಕ್ಕೆ ವರ್ಕೌಟ್ ಮಾಡ್ತಾ ಇತ್ತು. ಪೊಲೀಸರು ತಾಂತ್ರಿಕ ದೋಷವಿರಬಹುದು ಅಂತಾ ಸ್ವಲ್ಪ ಹೊತ್ತು ಕಾದು ನೋಡಿದ್ರು. ಆದ್ರೆ ವರ್ಕೌಟ್ ಮಾಡುವ ವೇಗ ಮಾತ್ರ ಹೆಚ್ಚುತ್ತಲೇ ಹೋಗಿತ್ತು. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುದ್ದಿಮುಟ್ಟಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು, ಹಲವು ಗಂಟೆಗಳ ಕಾಲ ಕಾದ್ರೂ ವರ್ಕೌಟ್ ಮಾಡುವುದು ಮಾತ್ರ ನಿಲ್ಲಲೇ ಇಲ್ಲ. ಅಷ್ಟಕ್ಕೂ ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಪೊಲೀಸರು ಇದನ್ನು ವಿಡಿಯೋ ಮಾಡಿದ್ದಾರೆ. ಆದ್ರೀಗ ವಿಡಿಯೋ ವೈರಲ್ ಆಗಿದೆ..

ದೆವ್ವ, ಭೂತ, ಪಿಶಾಚಿಯ ಮಾತುಗಳು ಕೇಳಿಬರುತ್ತಿದೆ. ಪಾರ್ಕಿನಲ್ಲಿ ದೆವ್ವಗಳೇ ವರ್ಕೌಟ್ ಮಾಡ್ತಾ ಇತ್ತು ಅಂತಾನೂ ಜನರು ಮಾತನಾಡಿ ಕೊಳ್ಳುವುದಕ್ಕೆ ಶುರುಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ದೆವ್ವಗಳಿಗೆ ಸಂಬಂಧಿಸಿದ ವಿಡಿಯೋಗಳು ಹರಿದಾಡುತ್ತಿರೊ ಬೆನ್ನಲ್ಲೇ ಈ ವಿಡಿಯೋ ಬಾರಿ ಕುತೂಹಲವನ್ನು ಮೂಡಿಸಿದೆ.