most-liked image on Instagram :ಇನ್ಸ್ಟಾಗ್ರಾಂನಲ್ಲಿ ಫೋಟೋಗಳಿಗೆ ಲೈಕ್ ಪಡೆಯಬೇಕು ಅಂತಾ ಅನೇಕರು ಹಲವು ರೀತಿಯ ಸಾಹಸಗಳನ್ನೇ ಮಾಡುತ್ತಾರೆ. ಇಲ್ಲಿ ನೀವು ಎಷ್ಟೇ ತಯಾರಾಗಿ ಕ್ಯಾಮಾರದ ಎದುರು ಪೋಸ್ ನೀಡಿದರೂ ಸಹ ಕೆಲವೊಮ್ಮೆ ಲೈಕ್ಗಳು ಬರೋದೇ ಇಲ್ಲ. ಸೆಲೆಬ್ರಿಟಿಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಇರುವುದರಿಂದ ಅವರ ಪೋಸ್ಟ್ಗಳಿಗೆ ಲಕ್ಷಗಟ್ಟಲೇ ಲೈಕ್ಸ್ ಬರುವುದುಂಟು. ಆದರೆ ಇನ್ಸ್ಟಾಗ್ರಾಂನಲ್ಲಿ ಈವರೆಗೆ ಅತೀ ಹೆಚ್ಚು ಲೈಕ್ ಪಡೆದ ಫೋಟೋ ಯಾವುದಿರಬಹುದೆಂದು ಎಂದಾದರೂ ಯೋಚನೆ ಮಾಡಿದ್ದೀರಾ..? ಹೌದು ಎಂದಾದರೆ ಈ ಪ್ರಶ್ನೆಗೆ ಸಿಗುವ ಉತ್ತರ ನಿಜಕ್ಕೂ ನಿಮ್ಮನ್ನು ಹುಬ್ಬೇರಿಸುವಂತೆ ಮಾಡಲಿದೆ.
ಮೂರು ವರ್ಷಗಳಿಂದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಮೊಟ್ಟೆಯ ಫೋಟೋವೊಂದು ಇಲ್ಲಿಯವರೆಗೆ ಅತೀ ಹೆಚ್ಚು ಲೈಕ್ಸ್ ಪಡೆದ ಫೋಟೋವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಹಿತಿ ನೀಡಿದೆ. ಈ ಮೊಟ್ಟೆಯ ಫೋಟೋಗೆ ಬರೋಬ್ಬರಿ 5.5 ಮಿಲಿಯನ್ ಲೈಕ್ಗಳು ಹಾಗೂ 3.4 ಮಿಲಿಯನ್ ಕಮೆಂಟ್ಗಳು ಬಂದಿವೆ.
ವಿಶ್ವ ದಾಖಲೆ ನಿರ್ಮಿಸಿರುವ ಈ ಮೊಟ್ಟೆಯ ಫೋಟೋವನ್ನು ಮೂರು ವರ್ಷಗಳ ಹಿಂದೆ ಪೋಸ್ಟ್ ಮಾಡಲಾಗಿತ್ತು. ಆದರೆ ಇಂದಿಗೂ ಕೂಡ 55.5 ಮಿಲಿಯನ್ ಲೈಕ್ಗಳನ್ನು ಸಂಪಾದಿಸುವ ಮೂಲಕ ಇನ್ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಫೋಟೋ ಎನಿಸಿಕೊಂಡಿದೆ ಎಂದು ಟ್ವಿಟರ್ನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆದುಕೊಂಡಿದೆ.
ಕುತೂಹಲಕಾರಿ ವಿಚಾರ ಏನಪ್ಪ ಅಂದರೆ, ಈ ವಿಶ್ವ ದಾಖಲೆ ನಿರ್ಮಿಸಿರುವ ಮೊಟ್ಟೆಯ ಫೋಟೋವನ್ನು ಹೊಂದಿರುವ ಇನ್ಸ್ಟಾಗ್ರಾಂ ಖಾತೆಯು ಕೇವಲ ಒಂದೇ ಪೋಸ್ಟ್ನ್ನು ಹೊಂದಿದೆ. ಅದೇ ಈ ಮೊಟ್ಟೆಯ ಫೋಟೋ..! ಈ ಮೊಟ್ಟೆಯ ಫೋಟೋವೊಂದನ್ನು ಹೊರತುಪಡಿಸಿ ಈ ಇನ್ಸ್ಟಾಗ್ರಾಂ ಖಾತೆಯಲ್ಲಿ ಇನ್ಯಾವುದೇ ಫೋಟೋಗಳನ್ನು ಪೋಸ್ಟ್ ಮಾಡಲಾಗಿಲ್ಲ. ವಿಡಿಯೋ ಸೆಕ್ಷನ್ನಲ್ಲಿ ನಿಮಗೆ 2 ವಿಡಿಯೋಗಳು ಕಾಣಸಿಗುತ್ತದೆ. ಈ ಎರಡೂ ವಿಡಿಯೋಗಳನ್ನು 2020ರಲ್ಲಿ ಪೋಸ್ಟ್ ಮಾಡಲಾಗಿದೆ . ಈ ಇನ್ಸ್ಟಾಗ್ರಾಂ ಖಾತೆಯು 4.8 ಮಿಲಿಯನ್ ಫಾಲೋವರ್ಸ್ ಹೊಂದಿದೆ.
ಕೋಳಿಯ ಮೊಟ್ಟೆಯ ಫೋಟೋವನ್ನು 2019ರ ಜನವರಿ 4ನೇ ತಾರೀಖಿನಂದು ಪೋಸ್ಟ್ ಮಾಡಲಾಗಿದೆ. ಈ ಫೋಟೋಗೆ ಎಲ್ಲರೂ ಸೇರಿ ವಿಶ್ವದಾಖಲೆ ನಿರ್ಮಿಸೋಣ ಹಾಗೂ ಇದನ್ನು ಇನ್ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಎಂದು ದಾಖಲೆ ಮಾಡೋಣ. ಈ ಮೂಲಕ ಕೆಲಿ ಜೆನ್ನರ್ನ ಪ್ರಸ್ತುತ ವಿಶ್ವದಾಖಲೆಯನ್ನು ಮುರಿಯೋಣ ಎಂದು ಶೀರ್ಷಿಕೆ ನೀಡಲಾಗಿದೆ.
2019ರ ಜನವರಿ 14ರಂದು ಕೈಲಿ ಜೆನ್ನರ್ರ ದಾಖಲೆಯನ್ನು ಮುರಿದ ಈ ಪೋಸ್ಟ್ 30.5 ಮಿಲಿಯನ್ ಲೈಕ್ಸ್ ಸಂಪಾದಿಸಿತ್ತು. 2018ರ ಫೆಬ್ರವರಿ ತಿಂಗಳಲ್ಲಿ ಕೈಲಿ ಜೆನ್ನರ್ ತನ್ನ ನವಜಾತ ಶಿಶುವಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಅತೀ ಹೆಚ್ಚು ಅಂದರೆ 18 ಮಿಲಿಯನ್ ಲೈಕ್ಗಳು ಬಂದಿದ್ದವು. ಈ ದಾಖಲೆಯನ್ನು ಮೊಟ್ಟೆಯ ಫೋಟೋ ಮುರಿದಿತ್ತು.
ಇದನ್ನು ಓದಿ : blankets for homeless : ಚಿಪ್ಸ್ ಪ್ಯಾಕೆಟ್ಗಳಿಂದ ಬೆಡ್ಶೀಟ್ಗಳನ್ನು ತಯಾರಿಸಿದ ಪೋರಿ
ಇದನ್ನೂ ಓದಿ : Shilpa Shetty: ಟ್ರೆಂಡಿ ಫ್ಯಾಷನ್‌ನಲ್ಲಿ ಕಂಗೊಳಿಸುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ
Photo of egg posted 3 years ago is STILL most-liked image on Instagram – can you guess how many likes it has?