Keep green things in house : ಅದೃಷ್ಟಕ್ಕಾಗಿ ಕಾಯುತ್ತಿದ್ದೀರೇ..? ಹಾಗಾದರೆ ಈ ವಾಸ್ತು ಟಿಪ್ಸ್​ ಪಾಲಿಸಿ

Keep green things in house :ವಾಸ್ತು ಶಾಸ್ತ್ರ, ಜ್ಯೋತಿಷ್ಯ ಹಾಗೂ ಹಿಂದೂ ಧರ್ಮದಲ್ಲಿ ಬಣ್ಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿಯೊಂದು ದೇವತೆಗಳಿಗೂ ಸಹ ಅವರದ್ದೇ ಆದ ಪ್ರಿಯ ಬಣ್ಣಗಳಿವೆ. ಬಣ್ಣಗಳನ್ನು ನೀವು ವಾಸ್ತು ಪ್ರಕಾರವೇ ಬಳಕೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಲಾಭವೇ ಕಾದಿದೆ. ಬಣ್ಣಗಳಿಗೆ ಅದೃಷ್ಟವನ್ನೂ ಬದಲಾಯಿಸುವ ಶಕ್ತಿ ಇದೆ. ಹೀಗಾಗಿ ನೀವು ವಾಸ್ತು ಪ್ರಕಾರವೇ ಬಣ್ಣಗಳನ್ನು ಬಳಕೆ ಮಾಡಿದರೆ ನೀವು ಜೀವನದಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಲಿದ್ದೀರಿ.


ವಾಸ್ತು ಶಾಸ್ತ್ರದಲ್ಲಿ ಬಣ್ಣಗಳಿಗೆ ತುಂಬಾನೇ ಮಹತ್ವವಿದೆ. ಸರಿಯಾದ ಬಣ್ಣವನ್ನು ನೀವು ಸೂಕ್ತವಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ವಾಸ್ತುದೋಷಗಳಿದ್ದರೂ ಅದು ನಿವಾರಣೆಯಾಗಲಿದೆ. ಅದು ಮಾತ್ರವಲ್ಲದೇ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿದೆ. ಮನೆಯಲ್ಲಿ ಹಸಿರು ಬಣ್ಣವನ್ನು ಬಳಕೆ ಮಾಡಿದರೆ ನಿಮ್ಮ ಜೀವನದಲ್ಲಿ ಅದೃಷ್ಟದ ಮಾರ್ಗವು ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ.

ಹಸಿರು ಒಂದು ಪವಾಡ :
ವಾಸ್ತು ಶಾಸ್ತ್ರದ ಪ್ರಕಾರ, ಹಸಿರು ಬಣ್ಣವನ್ನು ಸಂತೋಷ ಹಾಗೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಸಿರು ಬಣ್ಣವು ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಹಸಿರು ಬಣ್ಣವು ಬುಧ ಗ್ರಹಕ್ಕೆ ಸಂಬಂಧಿಸಿದೆ . ಹೀಗಾಗಿ ನೀವು ಬುಧವಾರ ಹಸಿರು ಬಣ್ಣವನ್ನು ತೊಟ್ಟರೆ ಒಳ್ಳೆಯದು. ಜಾತಕಗಳಲ್ಲಿ ಬುಧ ಗ್ರಹವನ್ನು ಬಲಪಡಿಸಲು ಸಾಧ್ಯವಾದಷ್ಟು ಹಸಿರು ಬಣ್ಣವನ್ನು ಬಳಕೆ ಮಾಡಬೇಕು. ವ್ಯಕ್ತಿಯು ಹಸಿರು ಬಣ್ಣದ ಬಟ್ಟೆ, ಹಸಿರು ಬಣ್ಣದ ವಸ್ತು ಸೇರಿಂತೆ ಹಸಿರನ್ನು ಹೆಚ್ಚೆಚ್ಚು ಬಳಕೆ ಮಾಡಬೇಕು. ಇದರಿಂದ ನಿಮಗೆ ಶುಭಪ್ರಾಪ್ತಿಯಾಗಲಿದೆ.


ಮನೆಯಲ್ಲಿ ಹಸಿರು ಬಣ್ಣದ ವಸ್ತುಗಳನ್ನು ಇರಿಸಿ :
ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು ಅಂದರೆ ಹಸಿರು ವಸ್ತುಗಳಿಗೆ ವಿಶೇಷ ಸ್ಥಾನವನ್ನು ನೀಡಬೇಕು ಎಂದು ಹೇಳುತ್ತೆ ವಾಸ್ತುಶಾಸ್ತ್ರ. ಆಗ್ನೇಯ ದಿಕ್ಕಿನಲ್ಲಿ ನೀವು ಆದಷ್ಟು ಹಸಿರು ಬಣ್ಣದ ವಸ್ತುಗಳನ್ನು ಇರಿಸಿದರೆ ಶುಭದಾಯಕವಾಗಿದೆ. ಉದಾಹರಣೆಗೆ ಹಸಿರು ಬಣ್ಣದ ಬಟ್ಟೆಗಳು, ಗಿಡಗಳು, ಕಿಟಕಿ ಪರದೆ ಹೀಗೆ ಆದಷ್ಟು ಆಗ್ನೇಯ ದಿಕ್ಕಿನಲ್ಲಿ ಹಸಿರು ಬಣ್ಣವೇ ಗೋಚರವಾಗುವಂತಿರಲಿ. ಇಲ್ಲವಾದಲ್ಲಿ ನೀವು ಆಗ್ನೇಯ ದಿಕ್ಕಿನಲ್ಲಿ ಸಣ್ಣ ಕೈ ತೋಟವನ್ನೇ ನಿರ್ಮಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಅದೃಷ್ಟದ ಮಾರ್ಗ ತೆರೆಯಲಿದೆ.

keep green things in house at this direction for good faith

ಇದನ್ನು ಓದಿ : Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ : astrology tips for home : ಜನವರಿ ತಿಂಗಳಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಶುಭಕರ

Comments are closed.