phulbani mla angada kanhar : ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂಬ ಮಾತಿದೆ. ಅನೇಕರ ಜೀವನದಲ್ಲಿ ಈ ಮಾತು ಅಕ್ಷರಶಃ ಸತ್ಯವೆನಿಸಿದೆ. ಏನನ್ನಾದರೂ ಸಾಧನೆ ಮಾಡಬೇಕೆಂದುಕೊಂಡರೆ ಅದಕ್ಕೆ ವಯಸ್ಸಿನ ಹಂಗಿರುವುದಿಲ್ಲ. ಸಾಧಿಸುವ ಛಲವೊಂದಿದ್ದರೆ ಯಾರು ಯಾವ ವಯಸ್ಸಿನಲ್ಲಿ ಏನು ಬೇಕಿದ್ದರೂ ಮಾಡಬಹುದು. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಒಡಿಶಾದ ಫುಲ್ಭಾನಿಯ ಶಾಸಕ ಅಂಗದ ಕನ್ಹರ್ ತಮ್ಮ 58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ..!
1978ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಬಿಜೆಡಿ ಶಾಸಕ ಅಂಗದ ಕನ್ಹರ್ ಈ ವರ್ಷ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದಂತಾಗಿದೆ. 58ನೇ ವಯಸ್ಸಿನಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿ ಶಾಸಕ ಅಂಗದ ಕನ್ಹರ್ರಿಂದ ಸ್ಪೂರ್ತಿ ಪಡೆದ ಕನ್ಹರ್ ಸ್ನೇಹಿತರು ಹಾಗೂ ಸ್ಥಳೀಯ ಸರಪಂಚ್ಗಳು ಕೂಡ ಪರೀಕ್ಷೆಗೆ ಹಾಜರಾಗಿದ್ದು ಕಂಡು ಬಂತು. ಈ ಮೂಲಕ ಅಂಗದ ಕನ್ಹರ್ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಅನೇಕರಿಗೆ ನೀವು ಯಾವ ವಯಸ್ಸಿನಲ್ಲಾದರೂ ನಿಮ್ಮ ವ್ಯಾಸಂಗ ಮುಂದುವರಿಸಬಹುದು ಎಂಬುದನ್ನು ಸಾರುವ ಮೂಲಕ ಮಾದರಿ ಎನಿಸಿದ್ದಾರೆ.
ಆಡಳಿತಾರೂಢ ಬಿಜೆಡಿ ಶಾಸಕರಾಗಿರುವ ಅಂಗದ ಕನ್ಹರ್ ಎಲ್ಲರಂತೆ ಹಾಲ್ ಟಿಕೆಟ್ ಪಡೆದು ಕಂಧಮಾಲ್ ಜಿಲ್ಲೆಯ ಪಟಿಭಾರಿ ಗ್ರಾಮದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತೆರಳಿ ಸಾಮಾನ್ಯ ವಿದ್ಯಾರ್ಥಿಗಳಂತೆ ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ 8 ಗಂಟೆಗೆ ಸರಿಯಾಗಿ ಪರೀಕ್ಷೆಗೆ ಹಾಜರಾದ ಅಂಗದ ಕನ್ಹರ್ ಪರೀಕ್ಷೆಯನ್ನು ಪೂರೈಸುವ ಮೂಲಕ ಸರಳತೆ ಮೆರೆದರು. ಈ ಮೂಲಕ ಅನೇಕ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಅಂಗದ ಮಾದರಿ ಎನಿಸಿದ್ದಾರೆ.
ಇದನ್ನು ಓದಿ : Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್ ಅರೆಸ್ಟ್
phulbani mla angada kanhar appears matric exam