psi recruitment scam : ಲಿಖಿತ ಪರೀಕ್ಷೆಯಂತೆ ದೈಹಿಕ ಪರೀಕ್ಷೆಯನ್ನೂ ರದ್ದುಗೊಳಿಸುವಂತೆ ಶಾಸಕ ಪ್ರಿಯಾಂಕ್​ ಖರ್ಗೆ ಆಗ್ರಹ

ಬೆಂಗಳೂರು : psi recruitment scam : 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ರಾಜಕೀಯ ಕೆಸರೆರೆಚಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ. ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈಗಿನ ಪರೀಕ್ಷೆಗಳನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರ ಬಳಿಕ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ ಲಿಖಿತ ಪರೀಕ್ಷೆಯಲ್ಲಿ ಮಾತ್ರವಲ್ಲ ದೈಹಿಕ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ ಎಂಬ ಹೊಸ ಬಾಂಬ್​ ಸಿಡಿಸಿದ್ದಾರೆ.


ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಮೊದಲು ಹೇಳಿಕೆ ನೀಡಿದ್ದೇ ಶಾಸಕ ಪ್ರಿಯಾಂಕ್​ ಖರ್ಗೆ. ಇಂದು ರಾಜ್ಯ ಸರ್ಕಾರದ ನಿರ್ಧಾರದ ಬಳಿಕವೂ ಮತ್ತೆ ಸುದ್ದಿಗೋಷ್ಠಿ ಕರೆದ ಪ್ರಿಯಾಂಕ್​ ಖರ್ಗೆ ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಸರ್ಕಾರದ ನಡೆಯ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದರು.


ಈ ಪ್ರಕರಣದಲ್ಲಿ ದಿವ್ಯಾಳ ಬಂಧನವಾಗುತ್ತಿದ್ದಂತೆಯೇ ಸರ್ಕಾರವು ಮರು ಪರೀಕ್ಷೆಯ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿಂದೆ ಅಕ್ರಮವೇ ನಡೆದಿಲ್ಲ ಎನ್ನುತ್ತಿದ್ದ ಬಿಜೆಪಿ ನಾಯಕರು ಇದೀಗ ಮರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಕೇವಲ ದಿವ್ಯಾ ಹಾಗೂ ರುದ್ರೇಗೌಡ ಮಾತ್ರ ಕಿಂಗ್​ ಪಿನ್​ಗಳಲ್ಲ. ಇನ್ನೂ ಅನೇಕರಿದ್ದಾರೆ.ಸಿಐಡಿ ಅಧಿಕಾರಿಗಳು ಕೇವಲ ಕಲಬುರಗಿಯನ್ನು ಮಾತ್ರ ಸೀಮಿತಿಗೊಳಿಸಿ ತನಿಖೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಪಿಎಸ್​ಐ ನೇಮಕಾತಿ ಗೋಲ್​ಮಾಲ್​ ನಡೆದಿದೆ. ಸಿಐಡಿ ಅಧಿಕಾರಿಗಳು ತಮ್ಮ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಬೇಕಿದೆ ಎಂದು ಆಗ್ರಹಿಸಿದರು.


ರಾಜ್ಯ ಸರ್ಕಾರ ಪಿಎಸ್​ಐ ಲಿಖಿತ ಪರೀಕ್ಷೆಯನ್ನು ಪುನಃ ಮಾಡುವುದಾಗಿ ಹೇಳಿದೆ. ಈ ನಿರ್ಧಾರ ಸ್ವಾಗತಾರ್ಹ. ಆದರೆ ಕೇವಲ ಲಿಖಿತ ಪರೀಕ್ಷೆಯಲ್ಲಿ ಮಾತ್ರ ಗೋಲ್​ಮಾಲ್​ ನಡೆದಿದೆಯೇ..? ದೈಹಿಕ ಪರೀಕ್ಷೆಯಲ್ಲಿ ಗೋಲ್​ಮಾಲ್​ ನಡೆದಿಲ್ಲವಾ..? ಈ ಬಗ್ಗೆ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಕೂಡಲೇ ತಿಳಿಸಬೇಕು. ಪಿಜಿಕಲ್​, ಬ್ಲೂಟೂತ್​ ಹಾಗೂ ಒಎಂಆರ್​ ಸೇರಿದಂತೆ ಮೂರು ರೀತಿಯ ಅಕ್ರಮ ನಡೆದಿದೆ. ಮುನ್ನೂರಕ್ಕೂ ಅಧಿಕ ಮಂದಿ ಈ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದಾರೆ.ಆದರೆ ಸಿಐಡಿ ಅಧಿಕಾರಿಗಳಿಗೆ ಈವರೆಗೆ ಏಳೆಂಟು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಅಕ್ರಮ ಎಸಗಿದವರಿಗೆ ಪರೀಕ್ಷೆ ಬರೆಯಲು ಮತ್ತೆ ಅವಕಾಶ ಕೊಡುತ್ತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ : Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್‌ ಅರೆಸ್ಟ್‌

ಇದನ್ನೂ ಓದಿ : kichcha sudeep vs ajay devgn : ಕಿಚ್ಚ ಸುದೀಪ- ಅಜಯ್​ ದೇವಗನ್​ ನಡುವೆ ಭಾಷಾ ವಾರ್​ ಶುರುವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

psi recruitment scam karnataka government decides to conduct reexam but congress mla priyank kharge wants know physical test or written test

Comments are closed.