ಕುದುರೆಗಳಲ್ಲಿ ಅನೇಕ ಜಾತಿಗಳಿವೆ. ಕೆಲವೊಂದು ಜಾತಿಯ ಕುದುರೆಗಳಂತೂ ತುಂಬಾನೇ ಬೆಲೆಬಾಳುತ್ತವೆ. ಕೆಲವೊಂದು ಕುದುರೆಗಳ ಬೆಲೆ ಎಷ್ಟಿರುತ್ತದೆ ಎಂದರೆ ಅದನ್ನು ಖರೀದಿ ಮಾಡೋದನ್ನು ನಮ್ಮಿಂದ ಊಹಿಸಲೂ ಸಾಧ್ಯವಿರೋದಿಲ್ಲ. ಕೆಲವೊಂದು ಕುದುರೆಗಳು ಲಕ್ಷಕ್ಕೆ ಮಾರಾಟವಾದರೆ ಇನ್ನು ಕೆಲವು ಕೋಟಿಗೆ ಬಿಕರಿಯಾಗುತ್ತವೆ. ಇದೇ ರೀತಿಯ ಒಂದು ಕುದುರೆಯು ಭಾರತೀಯ ಕುದುರೆ(horse Price) ರೇಸ್ ಪ್ರಿಯರ ಪಾಲಿಗೆ ಕನಸಿನ ಕುದುರೆಯಾಗಿ ಮಾರ್ಪಟ್ಟಿದೆ.
ಅಂದ ಹಾಗೆ ಈ ವಿಶೇಷ ಕುದುರೆಯ ಬೆಲೆ ಬರೋಬ್ಬರಿ 1 ಕೋಟಿ 25 ಲಕ್ಷ ರೂಪಾಯಿಗಂತೆ..! ಅಂದರೆ ನೀವು ಮರ್ಸಿಡೀಸ್, ಬಿಎಂಡಬ್ಲು, ಆಡಿ ಕಾರುಗಳನ್ನೇ ಖರೀದಿ ಮಾಡಬಹುದಾದ ಬೆಲೆಯು ಈ ಕುದುರೆಗಿದೆ. ಪ್ರಸ್ತುತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೊಂದಿರುವ 50 ಲಕ್ಷ ರೂಪಾಯಿ ಮೌಲ್ಯದ ಕುದುರೆಗಿಂತಲೂ ಇದರ ಬೆಲೆ ಹೆಚ್ಚಿದೆ .ಅಲೆಕ್ಸ್ ಎಂಬ ಹೆಸರಿನ ಈ ಕುದುರೆಯನ್ನು ಇತಿಹಾಸ ಪ್ರಸಿದ್ಧ ಮಹಾರಾಣ ಪ್ರತಾಪ್ ಜೊತೆ ಯುದ್ಧ ಭೂಮಿಯಲ್ಲಿ ಸವಾರಿ ಮಾಡಿದ ಚೇತಕ್ಗೆ ಇದನ್ನು ಹೋಲಿಸಲಾಗಿದೆ.
ಯಾಕೆ ಅಲೆಕ್ಸ್ಗೆ 1 ಕೋಟಿ 25 ಲಕ್ಷ ರೂಪಾಯಿ..?
ಸುಮಾರು 5 ವರ್ಷ ಪ್ರಾಯದ ಅಲೆಕ್ಸ್ 65 ಇಂಚು ಎತ್ತರ ಹಾಗೂ ಕುದುರೆ ತಳಿಗಳಲ್ಲೇ ಅಪರೂಪ ಎನಿಸುವ ರಚನೆಯನ್ನು ಹೊಂದಿದೆ. ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ಸಾರಂಗ್ಖೇಡಾ ಗ್ರಾಮದಲ್ಲಿ ನಡೆದ ಕುದುರೆ ಮೇಳದಲ್ಲಿ ಅಲೆಕ್ಸ್ನ್ನು ಪರಿಚಯಿಸಲಾಗಿದೆ. ಇದು ಮಾರ್ವಾರಿ ಅಥವಾ ಮಲಾನಿ ಎಂಬ ಅಪರೂಪದ ಕುದುರೆ ತಳಿಗೆ ಸೇರಿದೆ. ಈ ರೀತಿಯ ಕುದುರೆಯನ್ನು ಮೊದಲು ರಾಥೋಡ್ ದೊರೆಗಳು ಸಾಕುತ್ತಿದ್ದರಂತೆ. ಇತ್ತೀಚಿನ ದಿನಗಳಲ್ಲಿ ಈ ಕುದುರೆಯು ತನ್ನ ಜನಪ್ರಿಯತೆಯನ್ನು ಮರಳಿ ಸಂಪಾದಿಸಿದೆ.
ಅಲೆಕ್ಸ್ಗೆ ಮಾರುಕಟ್ಟೆಯಲ್ಲಿ ಇಷ್ಟೊಂದು ಬೆಲೆ ಇರಲು ಇನ್ನೊಂದು ಕಾರಣವಿದೆ. ಇದನ್ನು ಕುದುರೆ ಮಾಲೀಕ ಅಬ್ದುಲ್ ಮಜೀದ್ ಸೌದಾಗರ್ ವಿವರಿಸಿದ್ದಾರೆ. ಅಲೆಕ್ಸ್ನ್ನು ಹಗಲಿರುಳು ನೋಡಿಕೊಳ್ಳಲೆಂದೇ ಇಬ್ಬರು ನೌಕರರನ್ನು ನೇಮಿಸಲಾಗಿದೆ. ಕುದುರೆಯ ಫಿಟ್ನೆಸ್ನ್ನು ನೋಡಿಕೊಳ್ಳಲು ಅದಕ್ಕೆ ದುಬಾರಿ ಆಹಾರವನ್ನು ನೀಡಲಾಗುತ್ತದೆ. ಚೇತಕ್ನಂತಹ ಕುದುರೆಗಳ ಪರಾಕ್ರಮದ ಕತೆಗಳನ್ನು ಕೇಳಿದ ಬಳಿಕ ಮಾರ್ವಾಡಿ ಕುದುರೆ ತಳಿಗಳ ಮೇಲೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಈ ತಳಿಗಳು ಅತೀ ಬುದ್ಧಿವಂತ ಹಾಗೂ ಅತ್ಯಂತ ಚತುರವಾಗಿದೆ. ಇವು ಸುಲಭವಾಗಿ ದಣಿಯುವುದಿಲ್ಲವಂತೆ.
Price of this horse is more than 2 Mercedes cars – Reason will blow your mind
ಇದನ್ನೂ ಓದಿ : Revenge of the Apes : ಕೋತಿಗಳಲ್ಲೂ ಇದೆಯಾ ಸೇಡಿನ ಬುದ್ಧಿ..? ಬೆಚ್ಚಿಬೀಳಿಸುತ್ತೆ ಶ್ವಾನ-ವಾನರದ ನಡುವಿನ ಈ ದ್ವೇಷದ ಕತೆ..!