ಭಾನುವಾರ, ಏಪ್ರಿಲ್ 27, 2025
Homeಮಿಸ್ ಮಾಡಬೇಡಿRevenge of the Apes : ಕೋತಿಗಳಲ್ಲೂ ಇದೆಯಾ ಸೇಡಿನ ಬುದ್ಧಿ..? ಬೆಚ್ಚಿಬೀಳಿಸುತ್ತೆ ಶ್ವಾನ-ವಾನರದ ನಡುವಿನ...

Revenge of the Apes : ಕೋತಿಗಳಲ್ಲೂ ಇದೆಯಾ ಸೇಡಿನ ಬುದ್ಧಿ..? ಬೆಚ್ಚಿಬೀಳಿಸುತ್ತೆ ಶ್ವಾನ-ವಾನರದ ನಡುವಿನ ಈ ದ್ವೇಷದ ಕತೆ..!

- Advertisement -

Revenge of the Apes : ಹಾವಿನ ದ್ವೇಷ 12 ವರುಷ ಎಂದು ಹೇಳುತ್ತಾರೆ. ಆದರೆ ಎಂದಾದರೂ ಕೋತಿಗಳು ದ್ವೇಷ ಸಾಧಿಸುವುದನ್ನು ಕೇಳಿದ್ದೀರೇ..? ದ್ವೇಷ , ವೈಷಮ್ಯ , ಸೇಡು ಇವೇನಿದ್ದರೂ ಮನುಷ್ಯನಿಗೆ ಸೀಮಿತ.ಮೂಖ ಪ್ರಾಣಿಗಳಲ್ಲಿ ಅವೆಲ್ಲ ಏನಿರೋದಿಲ್ಲ ಎಂಬುದು ನಿಮ್ಮ ಉತ್ತರವಾಗಿದ್ದಾರೆ ಖಂಡಿತ ತಪ್ಪು. ಪ್ರಾಣಿಗಳೂ ಸಹ ಸೇಡನ್ನು ಸಾಧಿಸುತ್ತವೆ.ಪ್ರತಿಕಾರ ತೀರಿಸಿಕೊಳ್ಳುತ್ತವೆ. ಈ ಎಲ್ಲಾ ಮಾತಿಗೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ವಿಚಿತ್ರ ಘಟನೆಯೊಂದು ನಡೆಯುತ್ತಿದೆ.

ಬೀಡ್ ಜಿಲ್ಲೆಯ ಮಜಲ್​ಗಾಂವ್​ ಎಂಬ ಪುಟ್ಟ ಗ್ರಾಮದಲ್ಲಿ ಕೋತಿಯ ಗುಂಪೊಂದು ವಾಸವಿತ್ತು. ಈ ಗುಂಪಿನಲ್ಲಿದ್ದ ಒಂದು ಕೋತಿ ಮರಿಯನ್ನು ಇಲ್ಲಿನ ಶ್ವಾನಗಳು ಸಾಯಿಸಿದ್ದವಂತೆ. ಅಲ್ಲಿಯೇ ಶುರುವಾಯ್ತು ನೋಡಿ ವಾನರರ ದ್ವೇಷ. ಈ ಪ್ರತಿಕಾರದ ಕಿಚ್ಚು ಎಷ್ಟರ ಮಟ್ಟಿಗೆ ಹೋಗಿದೆ ಅಂದರೆ ಈ ಗ್ರಾಮದಲ್ಲಿ ಒಂದೇ ಒಂದು ನಾಯಿ ಮರಿ ಬದುಕುಳಿದಿಲ್ಲ.

ಹೌದು..! ಆಶ್ಚರ್ಯ ಎನಿಸಿದ್ರೂ ಈ ಎಲ್ಲಾ ಮಾತುಗಳೂ ಸತ್ಯ. ಈ ಗ್ರಾಮದಲ್ಲಿ ಯಾವುದೇ ನಾಯಿ ಮರಿ ಹಾಕಿದರೆ ಅಥವಾ ಯಾರಾದರೂ ನಾಯಿ ಸಾಕಬೇಕೆಂದು ಮರಿಯನ್ನು ತಂದರು ಅಂದರೆ ಸಾಕು. ಇಲ್ಲಿನ ಕೋತಿಗಳು ಹೇಗಾದರೂ ಮಾಡಿ ಆ ನಾಯಿಮರಿಯನ್ನು ಎತ್ತಿಕೊಂಡು ಬಂದು ಸಾಯಿಸಿಬಿಡುತ್ತವೆಯಂತೆ. ನಾಯಿಮರಿಗಳನ್ನು ಸಾಯಿಸಲು ಈ ಕೋತಿಗಳ ಗುಂಪು ಒಂದು ವಿಧಾನವನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ.

ಎತ್ತರದ ಸ್ಥಳಗಳಿಗೆ ನಾಯಿ ಮರಿಗಳನ್ನು ಕೊಂಡೊಯ್ಯುವ ಈ ಕೋತಿಗಳು ಅದನ್ನು ಎತ್ತರದ ಸ್ಥಳದಿಂದ ಎಸೆಯುವ ಮೂಲಕ ಸಾಯಿಸುತ್ತವೆಯಂತೆ. ಏನಿಲ್ಲ ಅಂದರೂ ಕಳೆದೊಂದು ತಿಂಗಳಲ್ಲಿ ಈ ಗ್ರಾಮದಲ್ಲಿ 260 ಶ್ವಾನಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಶ್ವಾನದ ಮರಿಗಳು ಸಾಯುತ್ತಿರೋದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರನ್ನು ನೀಡಿದ್ದಾರೆ. 5000 ಮಂದಿ ಜನಸಂಖ್ಯೆ ಇರುವ ನಮ್ಮ ಗ್ರಾಮದಲ್ಲಿ ಒಂದೇ ಒಂದು ಶ್ವಾನದ ಮರಿಯಿಲ್ಲ. ಹೀಗಾಗಿ ನೀವೇ ಏನಾದರೂ ಮಾಡಿ ಎಂದಿದ್ದಾರೆ. ಆದರೆ ಈವರೆಗೆ ಅರಣ್ಯ ಇಲಾಖೆಗೆ ಒಂದೇ ಒಂದು ಕೋತಿಯನ್ನು ಹಿಡಿಯಲೂ ಸಾಧ್ಯವಾಗಿಲ್ಲ.

ಇದನ್ನು ಓದಿ : Gen Bipin Rawat :ಸೋಶಿಯಲ್​ ಮೀಡಿಯಾದಲ್ಲಿ ಜನರಲ್​ ಬಿಪಿನ್​ ರಾವತ್​​ರಿಗೆ ಅಪಮಾನ ಮಾಡಿದ್ದ ಮಹಿಳೆಗೆ ಜಾಮೀನು

ಇದನ್ನೂ ಓದಿ : Why Ceiling fans 3 blades : ಸೀಲಿಂಗ್ ಫ್ಯಾನ್‌ಗೆ ಮೂರೇ ರೆಕ್ಕೆ ಇರುವುದೇಕೆ? ಎಲ್ಲರ ಬಾಲ್ಯದ ಪ್ರಶ್ನೆಗೆ ಇಲ್ಲಿದೆ ಉತ್ತರ

Revenge of the Apes: Monkeys in Maha’s Beed On a Murderous Rampage After Dogs Kill One of their Infants

RELATED ARTICLES

Most Popular