KL Rahul Vice captain : ದಕ್ಷಿಣ ಆಫ್ರಿಕಾ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್‌ ಉಪನಾಯಕ

ಮುಂಬೈ : ಟೀಂ ಇಂಡಿಯಾ ( Team India ) ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಈಗಾಗಲೇ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಬೆಳೆಸಿದೆ. ಈ ನಡುವಲ್ಲೇ ಟೆಸ್ಟ್‌ ತಂಡದ ಉಪನಾಯಕನಾಗಿರುವ ರೋಹಿತ್‌ ಶರ್ಮಾ ಗಾಯಗೊಂಡು ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಕನ್ನಡಿಗ ಕೆ.ಎಲ್.ರಾಹುಲ್‌ (KL Rahul Vice captain) ಅವರನ್ನು ಮೂರು ಟೆಸ್ಟ್‌ ಪಂದ್ಯಗಳ ಸರಣಿಗೆ ಉಪನಾಯಕನನ್ನಾಗಿ ( Team India vice Captain ) ಬಿಸಿಸಿಐ ನೇಮಕ ಮಾಡಿದೆ.

ವಿರಾಟ್‌ ಕೊಯ್ಲಿ ಚುಟುಕು ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ರೋಹಿತ್‌ ಶರ್ಮಾ ಅವರನ್ನು ಏಕದಿನ ಹಾಗೂ ಟಿ20 ಸರಣಿಗೆ ನಾಯಕನ್ನಾಗಿ ನೇಮಿಸಲಾಗಿದ್ದು, ಟಿ20 ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್‌ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಇನ್ನು ಟೆಸ್ಟ್‌ ಉಪನಾಯಕನಾಗಿದ್ದ ಅಜಿಂಕ್ಯಾ ರಹಾನೆಯನ್ನು ಕೆಳಗಿಳಿಸಿ ರೋಹಿತ್‌ ಶರ್ಮಾ ಅವರನ್ನು ಉಪನಾಯಕನ್ನಾಗಿ ನೇಮಿಸಲಾಗಿತ್ತು. ಆದರೆ ರೋಹಿತ್‌ ಶರ್ಮಾ ಗಾಯಗೊಂಡು ಟೆಸ್ಟ್‌ ಸರಣಿಯಿಂದಲೇ ಹೊರ ಬಿದಿದ್ದಾರೆ. ಹೀಗಾಗಿ ಟೆಸ್ಟ್‌ ಸರಣಿಗೆ ಕೆ.ಎಲ್.ರಾಹುಲ್‌ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ರೋಹಿತ್‌ ಶರ್ಮಾ ಏಕದಿನ ಸರಣಿಗೆ ಅಲಭ್ಯರಾದ್ರೆ ರಾಹುಲ್‌ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಡಿಸೆಂಬರ್‌ 26ರಿಂದ ದಕ್ಷಿಣ ಆಫ್ರಿಕಾ ತಂಡದ ವಿರುದ್ದ ಭಾರತ ಮೊದಲ ಟೆಸ್ಟ್‌ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್‌ ವಿರುದ್ದದ ಸರಣಿಯಿಂದ ದೂರ ಉಳಿದಿದ್ದ ಕೆ.ಎಲ್.ರಾಹುಲ್‌ ಇದೀಗ ಟೀಂ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಶುಭಮನ್‌ ಗಿಲ್‌, ರೋಹಿತ್‌ ಶರ್ಮಾ ಗಾಯಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಕನ್ನಡಿಗ ಮಯಾಂಕ ಅಗರ್‌ವಾಲ್‌ ಹಾಗೂ ಕೆ.ಎಲ್.‌ ರಾಹುಲ್‌ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯಲಿದ್ದಾರೆ. ಗಾಯಗೊಂಡಿರುವ ರೋಹಿತ್‌ ಶರ್ಮಾ ಬದಲು ಪ್ರಿಯಾಂಕ್‌ ಪಂಚಾಲ್‌ ಅವರನ್ನು ಬದಲಿ ಆಟಗಾರರನ್ನಾಗಿ ನೇಮಕ ಮಾಡಲಾಗಿದೆ.

ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾವ್ (ವಿಕೆಟ್ ಕೀಪರ್), ), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಎಂಡಿ ಸಿರಾಜ್

ಭಾರತ – ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯ ವೇಳಾಪಟ್ಟಿ

1 ನೇ ಟೆಸ್ಟ್ ಪಂದ್ಯ 26 – 30 ಡಿಸೆಂಬರ್, 2021
ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್

2 ನೇ ಟೆಸ್ಟ್ ಪಂದ್ಯ 3 – 7 ಜನವರಿ, 2022
ವಾಂಡರರ್ಸ್, ಜೋಹಾನ್ಸ್‌ಬರ್ಗ್

3 ನೇ ಟೆಸ್ಟ್ ಪಂದ್ಯ 11 – 15 ಜನವರಿ, 2022
ನ್ಯೂಲ್ಯಾಂಡ್ಸ್, ಕೇಪ್ ಟೌನ್

ಇದನ್ನೂ ಓದಿ : ಲಕ್ನೋಗೆ ಕೆ.ಎಲ್.ರಾಹುಲ್‌, ಅಹಮದಾಬಾದ್ ತಂಡಕ್ಕೆ ಶ್ರೇಯಸ್‌ ಅಯ್ಯರ್‌ ನಾಯಕ

ಇದನ್ನೂ ಓದಿ : ಐಪಿಎಲ್ 2022ರಿಂದ ಅಹಮದಾಬಾದ್ ಫ್ರಾಂಚೈಸಿ ಔಟ್‌ !

( Kl Rahul appointed as Team India vice Captain)

Comments are closed.