ಕಾರವಾರ : ಬಾಯಿಗೆ ರುಚಿ ನೀಡುವ ಸಮೋಸಾ ಸಾವನ್ನು ತರುತ್ತೆ ಅಂದ್ರೆ ನಂಬೋದಕ್ಕೆ ಸಾಧ್ಯನಾ ? ಚಾನ್ಸೇ ಇಲ್ಲಾ ಅಂತಾ ಹೇಳುವವರೇ ಹೆಚ್ಚು. ಆದರೆ ಸಮೋಸಾ ಗಂಟಲಿನಲ್ಲಿ ಸಿಲುಕಿ ಕಿರಿಯ ವಯಸ್ಸಿನ ಬೌದ್ದ ಬಿಕ್ಕು ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಂಡಗೋಡಿನಲ್ಲಿರುವ ಟಿಬೇಟಿಯನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಟಿಬೇಟಿಯನ್ ಕ್ಯಾಂಪಿನ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದ ಬಯಾರ್ಜವಖ್ಲನ್ ದಾಶ್ದೋರ್ಜ ತನ್ನ ಕೊಠಡಿಯಲ್ಲಿ ಸಮೋಸಾ ತಿಂದಿದ್ದಾರೆ. ಆದರೆ ಸಮೋಸಾ ತಿನ್ನುವ ವೇಳೆಯಲ್ಲಿ ಬಿಕ್ಕಳಿಕೆ ಬಂದಿದ್ದು, ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ. ಈ ಕುರಿತು ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.