ಮಂಗಳವಾರ, ಜೂನ್ 17, 2025
Homeಮಿಸ್ ಮಾಡಬೇಡಿಎರಡನೇ ಮದುವೆ ಆದ್ರೆ ಸಿಗುತ್ತೆ 6 ಲಕ್ಷ ಸಾಲ...!! ಇಲ್ಲಿದೆ ಸಖತ್ ಆಫರ್...!

ಎರಡನೇ ಮದುವೆ ಆದ್ರೆ ಸಿಗುತ್ತೆ 6 ಲಕ್ಷ ಸಾಲ…!! ಇಲ್ಲಿದೆ ಸಖತ್ ಆಫರ್…!

- Advertisement -



ಮನೆ ಕಟ್ಟುವವರಿಗೆ, ವಾಹನ ಖರೀದಿ, ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರಣಕ್ಕೆ ಬ್ಯಾಂಕುಗಳು ಸಾಲ ನೀಡುತ್ತವೆ. ಆದರೆ ಮದುವೆಗೆ ಸಾಲ ನೀಡೋದಕ್ಕೆ ಮಾತ್ರ ಬಹುತೇಕ ಬ್ಯಾಂಕುಗಳು ಹಿಂದೇಟು ಹಾಕುತ್ತವೆ. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್ ವೊಂದು ಎರಡನೇ ಮದುವೆ ಆಗುವವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡುವ ಯೋಜನೆಯೊಂದನ್ನು ಘೋಷಿಸಿದೆ.

Alvas1

ಎರಡನೇ ಮದುವೆಗೆ ಈ ಬ್ಯಾಂಕ್​ 8389 ಡಾಲರ್​ ಅಂದ್ರೆ 6,19,382 ರೂಪಾಯಿಯನ್ನ ಸಾಲ ರೂಪದಲ್ಲಿ ನೀಡಲಿದೆ. ಆದರೆ ಈ ಸಾಲದ ಹಣವನ್ನು ಮೊದಲ ಮದುವೆಗೆ ಬಳಕೆ ಮಾಡುವಂತಿಲ್ಲ ಅನ್ನೋ ಕಂಡಿಷನ್ ಕೂಡ ಹಾಕಿದೆ.

Iraq

ಆದರೆ ಇಂತಹದ್ದೊಂದು ಸಾಲದ ಯೋಜನೆಯನ್ನು ಘೋಷಿಸಿರೋದು ಇರಾಕ್​ನ ಅಲ್​ ರಷೀದ್​ ಹೆಸರಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್​. 2 ವರ್ಷಗಳ ಕಾಲ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು ಈ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ‌ ಎಂದಿದೆ.

Namami Shankara 1

ಎರಡನೇ ಮದುವೆಯಾಗ ಬಯಸುವ ಪೌರ ಕಾರ್ಮಿಕರಿಗೆ ಈ ಸಾಲ ಸೌಲಭ್ಯ ನೀಡುವುದಾಗಿ ಘೋಷಣೆ ಮಾಡಿದೆ. ಬ್ಯಾಂಕ್ ಎರಡನೇ ಮದುವೆ ಆಗುವವರಿಗೆ ಸಾಲ ನೀಡುವ ಯೋಜನೆಯನ್ನು ಘೋಷಣೆ ಮಾಡಿರುವುದುಮಹಿಳಾ ಪರ ನ್ಯಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Iraq Money Loan

ಬ್ಯಾಂಕ್ ನೀಡಿರುವ ಸಾಲದ‌ ಆಫರ್ ಕುರಿತು ಇರಾಕ್ ಪ್ರಧಾನಿ ಕಚೇರಿಯ ಮಹಿಳಾ ಅಭಿವೃದ್ಧಿ ಸಲಹೆಗಾರ್ತಿ ಹನಾನ್​ ಅಲ್​ ಫತ್ಲಾವಿ ಟ್ವೀಟ್ ಮಾಡಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಈ ರೀತಿಯ ಆಫರ್​ ನೀಡಿರೋದು ನಾಚಿಕೆಗೇಡು ಅಂತಾ ಕೆಂಡಕಾರಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular