Spider-Man lizard:ಹಾಲಿವುಡ್ನ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾವು ಸದ್ಯ ಭಾರೀ ಸುದ್ದಿಯಲ್ಲಿದೆ. ಇದೊಂದು ಹಾಲಿವುಡ್ ಸಿನಿಮಾ ಆಗಿದ್ದರೂ ಸಹ ದೇಶದಲ್ಲಿ ಇದರ ಕ್ರೇಜ್ ಎಷ್ಟರಮಟ್ಟಿಗೆ ಇತ್ತು ಅಂದರೆ ಬಾಕ್ಸಾಫೀಸಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ.ಹೌದು.. ಡಿಸೆಂಬರ್ 16ರಂದು ತೆರೆಕಂಡ ಈ ಸಿನಿಮಾದ ರಿಲೀಸ್ ನಾಲ್ಕೈದು ದಿನಗಳಲ್ಲೇ ಭಾರತದಲ್ಲಿ ಶತಕೋಟಿಗಟ್ಟಲೇ ಹಣವನ್ನು ಕಲೆಕ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಈಗ ಈ ಸಿನಿಮಾದ ಬಗ್ಗೆ ಮಾತನಾಡೋಕೆ ಒಂದು ವಿಶೇಷ ಕಾರಣವಿದೆ. ಥೇಟ್ ಮಾರ್ವೆಲ್ ಸೂಪರ್ ಹಿರೋ ಸ್ಪೈಡರ್ ಮ್ಯಾನ್ನಂತೆಯೇ ಕಾಣುವ ಹಲ್ಲಿಯ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅರ್ರೆ..! ಸ್ಪೈಡರ್ ಮ್ಯಾನ್ನಂತೆ ಇರುವ ಹಲ್ಲಿ ಇದ್ಯಾವುದಪ್ಪಾ ಅಂದುಕೊಂಡ್ರಾ ಇದಕ್ಕೆ ಉತ್ತರ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಾಂತ ನಂದ ಟ್ವಿಟರ್ನಲ್ಲಿ ಶೇರ್ ಮಾಡಿರುವ ಈ ಫೋಟೋ..!
ಫ್ಲಾಟ್ ಹೆಡೆಡ್ ರಾಕ್ ಅಗಮಾ ಎಂಬ ಹೆಸರಿನ ಈ ಹಲ್ಲಿಗಳು ನೋಡಲು ಥೇಟ್ ಸ್ಪೈಡರ್ ಮ್ಯಾನ್ಗಳಂತೆಯೇ ಕಾಣುತ್ತವೆ. ಈ ಜಾತಿಯಲ್ಲಿ ಹಲ್ಲಿಗಳಲ್ಲಿ ಪುರುಷ ಹಲ್ಲಿ ಅತೀ ಹೆಚ್ಚು ಆಕರ್ಷಕವಾಗಿ ಇರುತ್ತದೆ. ಇವುಗಳ ತಲೆ, ಕುತ್ತಿಗೆ ಹಾಗೂ ಭುಜ ಕೇಸರಿ ಹಾಗೂ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಉಳಿದ ಭಾಗವು ನೀಲಿ ಬಣ್ಣದಲ್ಲಿ ಇರೋದ್ರಿಂದ ಇದು ನಿಮಗೆ ಸ್ಪೈಡರ್ ಮ್ಯಾನ್ನನ್ನು ನೆನಪಿಸುತ್ತದೆ. ಆದರೆ ಹೆಣ್ಣು ಹಲ್ಲಿಗಳಲ್ಲಿ ಇಂತಹ ಯಾವುದೇ ವಿಶೇಷತೆ ಇರೋದಿಲ್ಲ ಅದು ಕಂದು ಬಣ್ಣವನ್ನು ಹೊಂದಿರುತ್ತದೆ.
ಈ ವಿಶೇಷ ಹಲ್ಲಿಯ ಫೋಟೋ ಶೇರ್ ಮಾಡಿರುವ ಸುಸಾಂತ ನಂದಾ, ರಿಯಲ್ ಲೈಫ್ನ ಸ್ಪೈಡರ್ ಮ್ಯಾನ್, ಫ್ಲ್ಯಾಟ್ ಹೆಡೆಡ್ ರಾಕ್ ಅಗಾಮ, ಇನ್ನೂ ಹಲವೆಡೆಗಳಲ್ಲಿ ಸ್ಪೈಡರ್ ಮ್ಯಾನ್ ಅಗಾಮಾ ಎಂದೇ ಕರೆಯಲಾಗುತ್ತದೆ. ಇದು ನೋಡೋಕೆ ಸ್ಪೈಡರ್ ಮ್ಯಾನ್ನಂತೆ ಕಾಣೋದು ಮಾತ್ರವಲ್ಲ ಸ್ಪೈಡರ್ ಮ್ಯಾನ್ನಂತೆಯೇ ಲಂಬವಾದ ಗೋಡೆಗಳನ್ನು ಏರಬಲ್ಲದು ಎಂದು ಶೀರ್ಷಿಕೆ ನೀಡಿದ್ದಾರೆ.
Spider-Man lizard: Photo of ‘Mwanza flat-headed rock agama’ goes viral
ಇದನ್ನು ಓದಿ: Uttarakhand :ಅಂಕಲ್ ಎಂದು ಕರೆದಿದ್ದಕ್ಕೆ ರೋಷಾವೇಷ..!ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ
ಇದನ್ನೂ ಓದಿ : POCSO Court : ‘ಸ್ನೇಹಿತೆ ಇರುವುದು ಯುವಕನ ಕಾಮತೃಷೆ ತೀರಿಸಲಿಕ್ಕಲ್ಲ’-ಪೋಸ್ಕೋ ನ್ಯಾಯಾಲಯ ಮಹತ್ವದ ತೀರ್ಪು