POCSO Court : ಸ್ನೇಹಿತೆ ಇರುವುದು ಯುವಕನ ಕಾಮತೃಷೆ ತೀರಿಸಲಿಕ್ಕಲ್ಲ: ಪೋಸ್ಕೋ ನ್ಯಾಯಾಲಯ ಮಹತ್ವದ ತೀರ್ಪು

POCSO Court :ನಿಮಗೆ ಸ್ನೇಹಿತೆ ಇದ್ದಾಳೆ ಎಂದ ಮಾತ್ರಕ್ಕೆ ಆಕೆಯನ್ನು ನಿಮ್ಮ ಲೈಂಗಿಕ ಕಾಮನೆಗಳನ್ನು ಪೂರೈಕೆ ಮಾಡಿಕೊಳ್ಳಲು ಬಳಕೆ ಮಾಡುವುದು ತಪ್ಪು ಎಂದು ಪೋಸ್ಕೋ ನ್ಯಾಯಾಲಯ ಆದೇಶ ನೀಡಿದೆ. ಸ್ನೇಹಿತೆ ಇರುವುದು ನಿಮ್ಮ ಕಾಮತೃಷೆಗಳನ್ನು ತೀರಿಸಲು ಅಲ್ಲ ಎಂದು ನ್ಯಾಯಪೀಠ ಹೇಳಿದೆ.

13 ವರ್ಷದ ಬಾಲಕಿಯ ಮೇಲೆ 20 ವರ್ಷದ ಯುವಕ ಅತ್ಯಾಚಾರ ಎಸಗಿದ ಪ್ರಕರಣದ ಸಂಬಂಧ ತೀರ್ಪು ಪ್ರಕಟಿಸಿದ ಪೋಸ್ಕೋ ನ್ಯಾಯಾಲಯದ ನ್ಯಾಯಪೀಠ ಯುವಕನಿಗೆ 10 ವರ್ಷಗಳ ಕಠಿಣ ಸಜೆಯನ್ನು ವಿಧಿಸಿದೆ. ದೂರದ ಸಂಬಂಧಿ ಹಾಗೂ ಸ್ನೇಹಿತೆ ಕೂಡ ಆಗಿದ್ದ 13 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗುವ ಮೂಲಕ ಯುವಕನು ಆಕೆಯ ಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದ್ದಾನೆ. ಆಕೆಯ ಜೀವನವನ್ನು ನಾಶ ಪಡಿಸುವಲ್ಲಿ ಯುವಕ ಮಹತ್ವದ ಪಾತ್ರ ವಹಿಸಿದ್ದಾನೆ ಎಂದು ನ್ಯಾಯಪೀಠ ಹೇಳಿದೆ.

ಆರೋಪಿಯ ಈ ಕೃತ್ಯದಿಂದಾಗಿ ಮುಂದಿನ ದಿನಗಳಲ್ಲಿ ಅಪ್ರಾಪ್ತೆಯ ವೈವಾಹಿಕ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಈಗಾಗಲೇ ಆಕೆಯ ನಿಶ್ಚಿತಾರ್ಥ ಕೂಡ ಮುರಿದುಬಿದ್ದಿದೆ. ಆರೋಪಿಗೆ ತಾನೆಂದ ಕೃತ್ಯ ಎಸಗಿದ್ದೇನೆ ಎಂಬುದರ ಅರಿವಾದಂತೆ ಕಾಣುತ್ತಿದೆ. ಹೀಗಾಗಿ ಇದಕ್ಕಿಂತ ಗರಿಷ್ಠ ಶಿಕ್ಷೆಯನ್ನು ವಿಧಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.

ತೀರ್ಪು ಪ್ರಕಟಿಸಿದ ಬಳಿಕ ಮಾತನಾಡಿದ ವಿಶೇಷ ನ್ಯಾಯಾಧೀಶರಾದ ಪ್ರೀತಿ ಕುಮಾರ್​ ಘುಲೆ, ಯುವಕನಿಗೆ ಕೋರ್ಟ್ ನೀಡಿರುವ ಶಿಕ್ಷೆಯನ್ನು ಈಗಿನ ಕಾಲದ ಯುವಜನತೆಗೆ ಎಚ್ಚರಿಕೆಯ ಕರಘಂಟೆಯಾಗಿದೆ. ಹದಿಹರೆಯಕ್ಕೆ ಬರುತ್ತಿದ್ದಂತೆಯೇ ಕೆಲ ಯುವಕರಿಗೆ ತಮ್ಮ ಕಾಮತೃಷೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಕಾಮದ ಬಗೆಗಿನ ಅತೀವ ಕಾಮನೆಯಿಂದಾಗಿ ಯುವಕರು ತಮ್ಮ ಭವಿಷ್ಯ ಹಾಗೂ ವೃತ್ತಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.

ಅಂಕಲ್​ ಎಂದು ಕರೆದಿದ್ದಕ್ಕೆ ರೋಷಾವೇಷ..! ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ

Uttarakhand : ನಮಗಿಂತ ಕೆಲವರು ತುಂಬಾ ಹಿರಿಯರಿದ್ದರೆ ಪ್ರೀತಿಪೂರ್ವಕವಾಗಿ ಅವರನ್ನು ಅಂಕಲ್ ಅಥವಾ ಆಂಟಿ​ ಎಂದು ಕರೆಯೋದು ವಾಡಿಕೆ. ಆದರೆ ಬಹುತೇಕರು ಈ ರೀತಿ ಕರೆಯಿಸಿಕೊಳ್ಳೋದನ್ನು ಇಷ್ಟ ಪಡೋದಿಲ್ಲ. ಕೆಲವರಿಗೆ ಯಾರ ಬಳಿಯಾದರೂ ಅಂಕಲ್​ ಅಥವಾ ಆಂಟಿ ಎಂದು ಕರೆಸಿಕೊಂಡರೆ ಮುಜುಗರ ವಾಗೋದು ಸಹಜ. ಆದರೆ ಈ ಗ್ರಾಮದಲ್ಲಿ ನಡೆದ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಂಕಲ್​ ಎಂದು ಕರೆದಿದ್ದಕ್ಕೆ ಕೋಪಗೊಂಡ ವ್ಯಕ್ತಿಯು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ..!

ಉತ್ತರಾಖಂಡ್​ನ ಉಧಮ್​ ಸಿಂಗ್​ ನಗರದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸಿತಾರ್​ಗಂಜ್​ ಎಂಬ ಪ್ರದೇಶದಲ್ಲಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅಂಗಡಿ ಮಾಲೀಕನೊಬ್ಬನಿಗೆ ಅಂಕಲ್​ ಎಂದು ಕರೆದಿದ್ದಾಳೆ. ಇಷ್ಟಕ್ಕೇ ಕೋಪಗೊಂಡ ಅಂಗಡಿಯಾತ ವಿದ್ಯಾರ್ಥಿನಿಗೆ ಮನಬಂದಂತೆ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿನಿಯ ಸ್ಥಿತಿ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಅಂದರೆ ಆಕೆಗೆ ಕೃತಕ ಆಮ್ಲಜನಕವನ್ನು ಅಳವಡಿಸಲಾಗಿದೆ.

ಸಿತಾರಗಂಜ್​​ನ ಇಸ್ಲಾಂನಗರದಲ್ಲಿ ವಾಸಿಸುತ್ತಿರುವ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ನಿಶಾ ಕೆಲವು ದಿನಗಳ ಹಿಂದೆಯಷ್ಟೇ ಖತೀಮಾ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಬ್ಯಾಡ್ಮಿಂಟನ್​ ಖರೀದಿ ಮಾಡಿದ್ದಳು. ಆದರೆ ಆಕೆ ಮನೆಗೆ ಬಂದ ವೇಳೆ ಬ್ಯಾಡ್ಮಿಂಟನ್​​ ಬ್ಯಾಟ್​ನಲ್ಲಿ ಸಮಸ್ಯೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅಂಗಡಿಗೆ ಮರಳಿದ ನಿಶಾ ಬ್ಯಾಡ್ಮಿಂಟನ್​ ಬ್ಯಾಟ್​ ಬದಲಾಯಿಸಿಕೊಡಿ ಅಂಕಲ್​ ಎಂದು ಕೇಳಿದ್ದಾಳೆ. ಇಷ್ಟಕ್ಕೆ ಸಿಟ್ಟಿಗೆದ್ದ ಅಂಗಡಿಯಾತ ನಿಶಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಅಂಗಡಿಯಾತ ಮೊದಲು ನಿಶಾಳನ್ನು ನಿಂದಿಸಿದ್ದಾನೆ. ಇದಕ್ಕೆ ನಿಶಾ ವಿರೋಧ ವ್ಯಕ್ತಪಡಿಸುವಂತೆ ಅಂಗಡಿಯವನು ನಿಶಾ ತಲೆಯನ್ನು ಕೌಂಟರ್​ಗೆ ಬಡಿದಿದ್ದಾನೆ. ಇದಾದ ಬಳಿ ನಿಶಾ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ನಿಶಾಳನ್ನು ಸಂಬಂಧಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದನ್ನು ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!

ಇದನ್ನೂ ಓದಿ: Uttarakhand :ಅಂಕಲ್​ ಎಂದು ಕರೆದಿದ್ದಕ್ಕೆ ರೋಷಾವೇಷ..!ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ

Friend of Opposite Sex Doesn’t Mean She is Available for Satisfying Sexual Desire, Says POCSO Court

Comments are closed.