Starbucks New CEO : ಸ್ಟಾರ್‌ಬಕ್ಸ್ ನ ಮುಂದಿನ ಸಿಇಒ ಲಕ್ಷ್ಮಣ್ ನರಸಿಂಹನ್ : ಪುಣೆ ಎಂಜಿನಿಯರ್‌ನ, ಕಾಫಿ ದೈತ್ಯ ‘ಸ್ಟಾರ್‌ಬಕ್ಸ್‌’ ನ ವರೆಗಿನ ಪ್ರಯಾಣ

ಕಾಫಿ ತಯಾರಿಕೆಯ ದೈತ್ಯ (Coffee Gaint) ಸ್ಟಾರ್‌ಬಕ್ಸ್‌ನ (Starbucks) ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಲಕ್ಷ್ಮಣ್ ನರಸಿಂಹನ್ (Starbucks New CEO) ಅವರನ್ನು ನೇಮಿಸಲಾಗಿದೆ. ಇದರಿಂದ ಯುಎಸ್‌ ನಲ್ಲಿ ಭಾರತೀಯ ಮತ್ತು ಭಾರತೀಯ ಮೂಲದ ಸಿಇಒಗಳ ಸಂಖ್ಯೆಯು ಮತ್ತೊಮ್ಮೆ ಬೆಳೆದಿದೆ. ಸ್ಟಾರ್‌ಬಕ್ಸ್ ಸಿಇಒ ಆಗಿ ಹೆಸರಿಸುವ ಮೊದಲು ರೆಕಿಟ್‌ನೊಂದಿಗೆ ಕೆಲಸ ಮಾಡಿದ್ದರು. ನರಸಿಂಹನ್, ಹೊವಾರ್ಡ್ ಷುಲ್ಟ್ಜ್ ಬದಲಿಗೆ ಹೆಸರಿಸಲಾಗಿದೆ. ಲಕ್ಷ್ಮಣ್ ನರಸಿಂಹನ್ ಅವರು ಅಕ್ಟೋಬರ್ 1, 2022 ರಂದು ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಲಕ್ಷ್ಮಣ ನರಸಿಂಹನ್ ಅವರು ಕಂಪನಿಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಟಾರ್‌ಬಕ್ಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗುತ್ತಾರೆ ಎಂದು ಸ್ಟಾರ್‌ಬಕ್ಸ್ ಗುರುವಾರ ಘೋಷಿಸಿದೆ. ನರಸಿಂಹನ್ ಅವರು ಲಂಡನ್‌ನಿಂದ ಸಿಯಾಟಲ್ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಅಕ್ಟೋಬರ್ 1, 2022 ರಂದು ಸ್ಟಾರ್‌ಬಕ್ಸ್‌ಗೆ ಒಳಬರುವ CEO ಆಗಲಿದ್ದಾರೆ. ಇವರು ಪೂರ್ಣ ಪ್ರಮಾಣದಲ್ಲಿ ಸಿಎಒ ಪಾತ್ರವನ್ನು ವಹಿಸುವ ಮೊದಲು ಮತ್ತು ಏಪ್ರಿಲ್ 1, 2023 ರಂದು ಮಂಡಳಿಗೆ ಸೇರುವ ಮೊದಲು, ಮಧ್ಯಂತರ CEO ಆಗಿರುವ ಹೊವಾರ್ಡ್ ಶುಲ್ಟ್ಜ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದರೆ.

ಪುಣೆಯಿಂದ ಸ್ಟಾರ್‌ಬಕ್ಸ್‌ ಸಿಇಒ ವರೆಗಿನ ಪ್ರಯಾಣ :

ಸ್ಟಾರ್‌ಬಕ್ಸ್ ಸಿಇಒ ಲಕ್ಷ್ಮಣ್ ನರಸಿಂಹನ್ ಅವರು ಏಪ್ರಿಲ್ 15, 1967 ರಂದು ಮಹಾರಾಷ್ಟ್ರ ಪುಣೆಯಲ್ಲಿ ಜನಿಸಿದರು. ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್, ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ, ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಲಾಡರ್ ಇನ್‌ಸ್ಟಿಟ್ಯೂಟ್‌ನಿಂದ ಜರ್ಮನ್ ಮತ್ತು ಅಂತರಾಷ್ಟ್ರೀಯ ಅಧ್ಯಯನಗಳಲ್ಲಿ ಎಂಎ ಪದವಿ ಗಳಿಸಿದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಿಂದ ಹಣಕಾಸು ವಿಷಯದಲ್ಲಿ ಅವರು ಎಂಬಿಎ ಪಡೆದರು.

ನರಸಿಂಹನ್‌ ತಮ್ಮ ವೃತ್ತಿಜೀವನವನ್ನು ಮೆಕಿನ್ಸೆಗೆ ಸೇರುವುದರ ಮೂಲಕ ಪ್ರಾರಂಭಿಸಿದರು. 19 ವರ್ಷಗಳ ಕಾಲ ಅಲ್ಲಿಯೇ ಕೆಲಸ ಮಾಡಿದರು. ಅವರು ಅಲ್ಲಿ ನವದೆಹಲಿಯ ಕಚೇರಿಯ ನಿರ್ದೇಶಕ ಮತ್ತು ಸ್ಥಳ ವ್ಯವಸ್ಥಾಪಕರ ಸ್ಥಾನಕ್ಕೆ ಬಡ್ತಿ ಪಡೆದಿದ್ದರು.

ನರಸಿಂಹನ್ 2012 ರಲ್ಲಿ, ಪೆಪ್ಸಿಕೋಗೆ ಸೇರಿದರು. ಅಲ್ಲಿ ಅವರು ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿ ಸೇರಿದಂತೆ ವಿವಿಧ ನಾಯಕತ್ವವನ್ನು ನಿಭಾಯಿಸಿದರು. ಪೆಪ್ಸಿಕೋ ಲ್ಯಾಟಿನ್ ಅಮೆರಿಕದ CEO ಆಗಿದ್ದ ಲಕ್ಷ್ಮಣ್‌ ಅವರು ಕಂಪನಿಯ ಲ್ಯಾಟಿನ್ ಅಮೇರಿಕಾ, ಯುರೋಪ್ ಮತ್ತು ಸಬ್-ಸಹಾರನ್ ಆಫ್ರಿಕಾ ಆಪರೇಷನ್‌ಗಳ ಸಿಇಒ ಆಗಿ ಸೇವೆ ಸಲ್ಲಿಸಿದರು. ನಂತರ ಅವರಿ ಪೆಪ್ಸಿಕೋ ಅಮೇರಿಕಾಸ್ ಫುಡ್ಸ್‌ನ ಸಿಇಒ ಆಗಿ ಸೇವೆಸಲ್ಲಿದರು.

ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌ನ ಟ್ರಸ್ಟಿಯಾಗಿರುವ ನರಸಿಂಹನ್ ಅವರು, ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‌ನ ಸದಸ್ಯರೂ ಆಗಿದ್ದರೆ. ಯುಕೆ ಪ್ರೈಮ್ ಮಿನಿಸ್ಟರ್ಸ್ ಬಿಲ್ಡ್ ಬ್ಯಾಕ್ ಬೆಟರ್ ಕೌನ್ಸಿಲ್‌ನ ಸದಸ್ಯ ಮತ್ತು ವೆರಿಝೋನ್‌ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರೆಕಿಟ್‌ ಲೈಸೋಲ್, ಡ್ಯುರೆಕ್ಸ್ ಕಾಂಡೋಮ್‌ಗಳು, ಎನ್‌ಫಾಮಿಲ್ ಬೇಬಿ ಫಾರ್ಮುಲಾ ಮತ್ತು ಮ್ಯೂಸಿನೆಕ್ಸ್ ಕೋಲ್ಡ್ ಸಿರಪ್ ಅನ್ನು ತಯಾರಿಸುವ ಕಂಪನಿಯಾಗಿದೆ. ಇವರು ರೆಕಿಟ್ ರಚನೆಯಾದ ನಂತರ ಅದರ ಚುಕ್ಕಾಣಿ ಹಿಡಿದ ಮೊದಲ ಬಾಹ್ಯ ಅಭ್ಯರ್ಥಿ. ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಯೂ ಕಂಪನಿಯನ್ನು ಮುನ್ನಡೆಸಿದರು. ಇದು ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಿತು.

30 ವರ್ಷಗಳ ಅನುಭವ ಹೊಂದಿರುವ ಲಕ್ಷ್ಮಣ್ ನರಸಿಂಹನ್‌ ಇನ್ನುಮುಂದೆ ಸ್ಟಾರ್‌ಬಕ್ಸ್‌ನ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸ್ಟಾರ್‌ಬಕ್ಸ್‌ನ ಹೇಳಿಕೆಯ ಪ್ರಕಾರ, “ನರಸಿಂಹನ್ ಅವರು ಜಾಗತಿಕ ಗ್ರಾಹಕ-ಮುಖಿ ಬ್ರ್ಯಾಂಡ್‌ಗಳನ್ನು ಮುನ್ನಡೆಸುವ ಮತ್ತು ಸಲಹೆ ನೀಡುವ ಸುಮಾರು 30 ವರ್ಷಗಳ ಅನುಭವವನ್ನು ಹೊತ್ತು ತರುತ್ತಿದ್ದಾರೆ. ಉತ್ತಮ ಕಾರ್ಯಾಚರಣೆಯ ಪರಿಣತಿಗೆ ಹೆಸರುವಾಸಿಯಾದ ಅವರು ಉದ್ದೇಶಿತ ಬ್ರಾಂಡ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ದಾಖಲೆಯನ್ನು ಹೊಂದಿದ್ದಾರೆ. ಅವರು ಗ್ರಾಹಕ ಕೇಂದ್ರಿತ ಮತ್ತು ಡಿಜಿಟಲ್ ಆವಿಷ್ಕಾರಗಳನ್ನು ಚಾಲನೆ ಮಾಡುವ ಮೂಲಕ ಭವಿಷ್ಯದ ಮಹತ್ವಾಕಾಂಕ್ಷೆಗಳನ್ನು ತಲುಪಿಸಲು ಪ್ರತಿಭೆಯನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.”

ಇದನ್ನೂ ಓದಿ : Tata Blackbird : ಟಾಟಾ ಬ್ಲ್ಯಾಕ್‌ಬರ್ಡ್‌ : ಹುಂಡೈನ ಕ್ರೆಟಾ ಮತ್ತು ಕಿಯಾನ ಸೆಲ್ಟೊಸ್‌ಗೆ ಠಕ್ಕರ್‌ ಕೊಡಲಿದೆಯೇ

ಇದನ್ನೂ ಓದಿ : World Coconut Day 2022 : ಇಂದು ವಿಶ್ವ ತೆಂಗು ದಿನ : ತೆಂಗಿನಕಾಯಿಯಿಂದ ಮಾಡಬಹುದಾದ ಸವಿರುಚಿಗಳು

(Starbucks New CEO Laxman Narasimhan and his journey)

Comments are closed.