ವ್ಯಕ್ತಿಯೋರ್ವ ಬಾಲ್ಯದಲ್ಲಿ ಅಚಾನಕ್ ಆಗಿ ಮೂಗಿನೊಳಗೆ ನಾಣ್ಯವೊಂದನ್ನು ತೂರಿಸಿಕೊಂಡಿದ್ದರು. ಮನೆಯವರಿಗೆ ತಿಳಿಸಲು ಭಯದಿಂದಾಗಿ ವಿಷಯವನ್ನು ಮುಚ್ಚಿಟ್ಟಿದ್ದರು. ಸುಮಾರು 50 ವರ್ಷಗಳ ನಂತರ ವ್ಯಕ್ತಿಯ ಮೂಗಿನಲ್ಲಿದ್ದ ನಾಣ್ಯವನ್ನು ಹೊರ ತೆಗೆಯಲಾಗಿದೆ.

ರಷ್ಯಾ ಮೂಲದ ವ್ಯಕ್ತಿ ಆರು ವರ್ಷ ವಯಸ್ಸಿನವರಾಗಿದ್ದ ವೇಳೆ ಆಟವಾಡುವ ವೇಳೆಯಲ್ಲಿ ತಮ್ಮ ಮೂಗಿಗೆ ಈ ನಾಣ್ಯವನ್ನು ಹಾಕಿಕೊಂಡು ಬಿಟ್ಟಿದ್ದಾರೆ. ಈ ವಿಚಾರವನ್ನು ಅಮ್ಮನಿಗೆ ತಿಳಿಸಲು ಭಯಗೊಂಡು ಹಾಗೇ ಮುಚ್ಚಿಟ್ಟುಬಿಟ್ಟಿದ್ದಾರೆ.

ಇದಾದ ಐದು ದಶಕಗಳ ಮಟ್ಟಿಗೆ ಆ ನಾಣ್ಯವನ್ನು ಈತ ಮರೆತೇ ಬಿಟ್ಟಿದ್ದರು. ಇತ್ತೀಚೆಗೆ ತಮ್ಮ ಬಲ ಹೊಳ್ಳೆ ಮೂಲಕ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಆ ನಾಣ್ಯದ ಸುತ್ತಲೂ ರಿನೋಲಿತ್ಸ್ ಹೆಸರಿನ ಕಲ್ಲುಗಳು ಬೆಳೆಯಲು ಆರಂಭಿಸಿದ್ದವು. ಆಸ್ಪತ್ರೆಗೆ ಭೇಟಿ ಕೊಟ್ಟು ನಾಣ್ಯವನ್ನು ತೆಗೆಸಿದ್ದಾರೆ.
ಎಂಡೋಸ್ಕೋಪಿಕ್ ಸರ್ಜರಿ ಮಾಡಿ ಈ ನಾಣ್ಯ ಹಾಗೂ ಕಲ್ಲುಗಳನ್ನು ಹೊರತೆಗೆಯಲು ವೈದ್ಯರು ಸಫಲರಾಗಿದ್ದಾರೆ. ಸೋವಿಯತ್ ಕಾಲದ ಒಂದು ಕೋಪೆಕ್ ಮೌಲ್ಯದ ನಾಣ್ಯ ಇದಾಗಿದೆ ಎಂದು ತಿಳಿದು ಬಂದಿದೆ.