ವಾಹನ ಮಾಲಿಕರಿಗೆ ಗುಡ್ ನ್ಯೂಸ್ : ಪಿಯುಸಿ ಪ್ರಮಾಣ ಪತ್ರಕ್ಕೆ ಬರಲಿದೆ ಕ್ಯೂಆರ್ ಕೋಡ್

ನವದೆಹಲಿ : ವಾಹನಗಳ ಕಳವು ತಪ್ಪಿಸುವುದರ ಜೊತೆಗೆ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ಎಲ್ಲಾ ವಾಹನಗಳ ಹೊಗೆಯುಗುಳುವಿಕೆ ಮಟ್ಟದ ಪರೀಕ್ಷಾ ಪ್ರಮಾಣವನ್ನು ಇಡೀ ದೇಶದಲ್ಲಿ ಏಕರೂಪಗೊಳಿಸಲು ಚಿಂತನೆ ನಡೆಸಿದೆ.

ವಾಹನಗಳ ಪೊಲ್ಯೂಷನ್ ಕಂಟ್ರೋಲ್ ಪ್ರಮಾಣ ಪತ್ರದಲ್ಲಿ ಕ್ಯೂಆರ್ ಕೋಡ್ ಅಳವಡಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ವಾಹನದ ಮಾಲೀಕರ ವಿವರದ ಜೊತೆಗೆ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸ್ಥಿತಿಗತಿ ಸೇರಿದಂತೆ ಇತರೆ ಮಾಹಿತಿಗಳು ಲಭ್ಯವಾಗಲಿದೆ.

ಇನ್ನು ಕ್ಯೂಆರ್ ಕೋಡ್ ಇರುವ ಪಿಯುಸಿ ಪ್ರಮಾಣ ಪತ್ರದಲ್ಲಿ ವಾಹನಗಳ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗೆಯೇ ಯಾರಾದರೂ ವಾಹನವನ್ನು ಕಳವು ಮಾಡಿ ಪಿಯುಸಿ ಪ್ರಮಾಣಪತ್ರ ಪಡೆಯಲು ಹೋದರೆ, ತಕ್ಷಣ ಪತ್ತೆ ಹಚ್ಚಲು ಪ್ರಮಾಣಪತ್ರ ಸಹಾಯಕವಾಗಲಿದೆ. .

Comments are closed.