ಮಂಗಳೂರು : ಕರಾವಳಿಗೆ ಮತ್ತೆ ಸುನಾಮಿ ಬಂದಪ್ಪಳಿಸುತ್ತಾ ಅನ್ನುವ ಆತಂಕ ಶುರುವಾಗಿದೆ. ಕರಾವಳಿಯಲ್ಲಿ ಮಳೆಗಾಲದಲ್ಲಿ ದೈತ್ಯ ಅಲೆಗಳು ಅಪ್ಪಳಿಸೋದು. ಕಡಲ್ಕೊರೆತ ಉಂಟಾಗುವುದು ಮಾಮೂಲು. ಆದ್ರೀಗ ಸಮುದ್ರದಲ್ಲಿ ಅಪಾಯಕಾರಿ ಅಲೆಗಳು ಏಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸುತ್ತಮುತ್ತಲಿನ ಸಮುದ್ರ ತೀರದಲ್ಲಿ ಬಹುದೂರದವರೆಗೆ ಅಲೆಗಳು ಬಂದಪ್ಪಳಿಸಿವೆ.

ದೈತ್ಯ ಅಲೆಗಳಿಂದಾಗಿ ಸಮುದ್ರ ತೀರದಲ್ಲಿ ನಿಂತಿದ್ದ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಸಮುದ್ರ ದೈತ್ಯ ಅಲೆಗಳ ನೀರು ದಡದಲ್ಲಿ ಹರಿಯುತ್ತಿರುವ ದೃಶ್ಯ ಕರಾವಳಿಗರಲ್ಲಿ ಆತಂಕವನ್ನು ಮೂಡಿಸಿದೆ.

ಭಯವನ್ನು ಹುಟ್ಟಿಸುವಷ್ಟರ ಮಟ್ಟಿಗೆ ಆರ್ಭಟಿಸುವ ಸಮುದ್ರದ ಅಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗದಲ್ಲಿ ಭಾರೀ ವೈರಲ್ ಆಗಿದೆ.

ನೀವೇನಾದ್ರೂ ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ.
ಮಳೆಗಾಲದಲ್ಲಿ ಸಮುದ್ರದ ಆರ್ಭಟ ಜೋರಾಗಿರುತ್ತದೆಯಾದರೂ ಇಷ್ಟೊಂದು ಪ್ರಮಾಣದಲ್ಲಿ ಆರ್ಭಟಿಸಿರುವುದು ಇದೇ ಮೊದಲು.

ಸಮುದ್ರದ ಅಲೆಗಳನ್ನು ನೋಡುತ್ತಲೆ ನಿಂತಿದ್ದ ಮಂದಿಗೆ ಅರೆಕ್ಷಣ ಶಾಕ್ ಆಗಿತ್ತು. ಸಮುದ್ರದ ಅಲೆಗಳಿಂದ ತಪ್ಪಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಸಮುದ್ರದ ನೀರು ಉಕ್ಕಿಬಂದಿದೆ.

ಬೃಹತ್ ಗಾತ್ರದಲ್ಲಿ ಸಮುದ್ರದ ದಡಕ್ಕೆ ಅಪ್ಪಳಿಸಿದ ದೈತ್ಯ ಅಲೆಗಳು ಬಹುದೂರದ ವರೆಗೂ ಸಾಗಿತ್ತು. ಸಮುದ್ರ ತೀರದ ಜನರಿಗೆ ಅಲ್ಲೇನಾಗುತ್ತಿದೆ ಅನ್ನುವಷ್ಟರಲ್ಲೇ ನೀರು ತುಂಬಿಕೊಂಡಿತ್ತು.

ಹೀಗಾಗಿ ಕರಾವಳಿ ಭಾಗದ ಜನರು ಆತಂಕದಲ್ಲಿದ್ದಾರೆ. ಒಂದೆಡೆ ಕೊರೊನಾ ಇನ್ನೊಂದೆಡೆ ದೈತ್ಯ ಅಲೆಗಳು ಜನರನ್ನು ಚಿಂತೆಗೀಡು ಮಾಡಿದೆ.