ಸೀರೆಯಲ್ಲಿ ಮಿಂಚುವ ಈ ಬಂಗಾಳಿ ಬ್ಯೂಟಿ ಬಗ್ಗೆ ನಿಮಗೆ ಗೊತ್ತಾ ?

0

ಬಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸುಂದರ ನಟಿಯರು ಅಂತಾನೇ ಬಂಗಾಲಿ ನಟಿಯರು ಕರೆಯಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಬಂಗಾಲದ ನಟಿಯರ ಪೈಕಿ ಬಿಪಾಶಾ ಬಲು, ಮೂನ್ ಮೂನ್ ಸೇನ್, ಕೊಂಕಣ್ ಸೇನ್ ಶರ್ಮಾ, ಪ್ರಿಯಾಂಕ ಉಪೇಂದ್ರ, ಐಂದ್ರಿತಾ ರೇ ಸೇರಿದಂತೆ ಹಲವು ನಟಿಯರು ಹಾಟ್ ಫೇವರೇಟ್ ಆಗಿದ್ದಾರೆ. ಆದ್ರೀಗ ನಾವು ಹೇಳ ಹೊರಟಿರೋ ನಟಿ, ಸೌಂದರ್ಯದ ಖನಿ ರುಪ್ಸಾ ಸಹಾ ಚೌಧರಿ.

ಸಾಮಾನ್ಯವಾಗಿ ಮಾಡೆಲ್ ಗಳು ಅರೆಬರೆ ಬಟ್ಟೆ ತೊಟ್ಟು, ಹಾಟ್ ಹಾಟ್ ಆಗಿ ಪೋಟೋಗೆ ಪೋಸ್ ಕೊಡ್ತಾರೆ. ಪಡ್ಡೆ ಹೈಕಳು ಮಾರ್ಡನ್ ಟ್ರೆಂಡ್ಸ್ ನೋಡಿ ಪುಲ್ ಖುಷಿಯಾಗ್ತಾರೆ. ಆದರೆ ರುಪ್ಸಾ ಸಹಾ ಚೌಧರಿ ತುಂಬಾನೇ ಡಿಫ್ರೆಂಟ್.

ರುಪ್ಸಾ ಸಹಾ ಚೌಧರಿ ತುಂಡು ತುಂಡು ಬಟ್ಟೆ ಹಾಕೋದಿಲ್ಲಾ. ಯಾವುದೇ ಪೋಟೋ ಶೂಟ್ ಇದ್ರೂ ಸೀರೆಯಲ್ಲಿಯೇ ಕಾಣಿಸಿಕೊಳ್ತಾರೆ. ಆದರೆ ಸೀರೆಯಲ್ಲೂ ತನ್ನ ಮಾದಕತೆಯಿಂದಲೇ ಪಡ್ಡೆ ಹುಡುಗರ ಪಾಲಿಗೆ ಹಾಟ್ ಫೇವರೇಟ್ ಆಗಿದ್ದಾರೆ.


ಕೊಲ್ಕತ್ತಾದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ರುಪ್ಸಾ ಸಹಾ ಚೌಧರಿ ಸಾಮಾಜಿಕ ಜಾಲತಾಣದ ವೀಕ್ಷಕರ ಪಾಲಿಗೆ ಹಾಟ್ ಫೇವರೇಟ್.

https://www.facebook.com/2235319106730115/videos/2972392682773372

ಈಗಾಗಲೇ ನೂರಕ್ಕೂ ಅಧಿಕ ಪೋಟೋ ಶೂಟ್ ಗಳಲ್ಲಿ ಪೋಸ್ ಕೊಟ್ಟಿರುವ ರುಪ್ಸಾ, ಸೀರೆಯಲ್ಲೇ ತನ್ನನ್ನ ಎಕ್ಸ್ ಪೋಸ್ ಮಾಡಿಕೊಳ್ಳುತ್ತಿದ್ದಾರೆ.

ಬಂಗಾಲಿ ಬೆಡಗಿ ಸಾರಿಯುಟ್ಟು ಪೋಸ್ ಕೊಡುವ ಪೋಟೋ ಶೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೇ ಬಿಕರಿಯಾಗುತ್ತಿದೆ.

ಮೋಹಕ ಮೈಮಾಟದಿಂದಲೇ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ರುಪ್ಸಾ ಈಗಾಗಳೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕೇವಲ ಪೋಟೋ ಶೂಟ್ ಮಾತ್ರವಲ್ಲ ಕೋಲ್ಕತ್ತಾದ ಬಹುಬೇಡಿಕೆಯ ಮಾಡೆಲ್ ಕೂಡ ಹೌದು. ಈಗಾಗಲೇ ರುಪ್ಸಾ ಚೌದರಿ ಅವರ ದಿಲ್ ಕಿ ಖರಾಬ್ ಆಲ್ಬಂ ಸೂಪ್ ಹಿಟ್ ಆಗಿತ್ತು.

ಇನ್ನು ಬಣ್ಣದ ಲೋಕಕ್ಕೂ ಕಾಲಿಟ್ಟಿರುವ ರುಪ್ಸಾ ಈಗಾಗಲೇ ನಾ ಅನ್ನೋ ಕಿರು ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಮಿಂಚು ಹರಿಸುತ್ತಿರುವ ರುಪ್ಸಾ ಸಹಾ ಚೌಧರಿ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.

Leave A Reply

Your email address will not be published.