ಅಮೆರಿಕ : Reporter Uses Condom : ಅಮೆರಿಕಾವು ಪ್ರಸ್ತುತ ಇಯಾನ್ ಎಂಬ ಹೆಸರಿನ ತೀವ್ರವಾದ ಚಂಡಮಾರುತದ ವಿರುದ್ಧ ಹೋರಾಡುತ್ತಿದೆ. ಶುಕ್ರವಾರದಂದು ಇಯಾನ್ ಚಂಡಮಾರುತದಿಂದಾಗಿ ಫ್ಲೋರಿಡಾದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಮನೆಗಳು, ರಸ್ತೆಗಳು ಹಾಗೂ ವಾಹನಗಳು ಧ್ವಂಸಗೊಂಡಿವೆ. ಇಯಾನ್ ಚಂಡಮಾರುತ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂದು ಅಮೆರಿಕ ಮೂಲದ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಪ್ರಪಂಚದಾದ್ಯಂತ ಸುದ್ದಿ ಮಾಧ್ಯಮಗಳು ಫ್ಲೋರಿಡಾದಲ್ಲಿ ಚಂಡಮಾರುತವನ್ನು ವ್ಯಾಪಕವಾಗಿ ವರದಿ ಮಾಡುತ್ತಿವೆ. ಇಯಾನ್ ಚಂಡಮಾರುತದ ಇಂಚಿಂಚೂ ಮಾಹಿತಿಯನ್ನು ಜನತೆ ಜೊತೆಯಲ್ಲಿ ಹಂಚಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಈ ನಡುವೆ ಎನ್ಬಿಸಿ ಅಮೆರಿಕದ ಪತ್ರಕರ್ತೆ ಕೈಲಾ ಗ್ಯಾಲರ್, ಇಯಾನ್ ಚಂಡಮಾರುತದ ಕವರೇಜ್ ಮಾಡುವ ಸಂದರ್ಭದಲ್ಲಿ ವಿಚಿತ್ರ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ಪತ್ರಕರ್ತೆಯು ತನ್ನ ಮೈಕ್ನಲ್ಲಿ ಕಾಂಡೋಮ್ ಹಾಕಿಕೊಂಡು ಚಂಡಮಾರುತ ಪೀಡಿತ ವಲಯದ ಜನರೊಂದಿಗೆ ಸಂವಹನ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಭಾರೀ ಮಳೆಯಿಂದಾಗಿ ಮೈಕ್ನ್ನು ರಕ್ಷಿಸಿಕೊಳ್ಳಬೇಕು ಎಂದು ಈ ಪತ್ರಕರ್ತೆಯು ವಿಭಿನ್ನ ಪ್ಲಾನ್ ಮಾಡಿದ್ದಾರೆ. ಫ್ಲೋರಿಡಾದ ಮಳೆ ಹಾಗೂ ಇಯಾನ್ ಚಂಡಮಾರುತದ ಪರಿಣಾಮ ಜನತೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬ ಗ್ರೌಂಡ್ ರಿಪೋರ್ಟ್ ಮಾಡಲು ಮಹಿಳೆಯು ನೇರ ವರದಿಯನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮೈಕ್ನಲ್ಲಿ ಕಾಂಡೋಮ್ ನೋಡಿದ ಜನರು ಇದೇಕೆ ಈಕೆ ಹೀಗೆ ಮಾಡಿದ್ದಾಳೆ ಎಂದು ಮೊದಲು ಗೊಂದಲಕ್ಕೆ ಒಳಗಾಗಿದ್ದಾರೆ. ಇಂತಹದ್ದೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭಗೊಳ್ಳುತ್ತಿದ್ದಂತೆಯೇ ಕೈಲಾ ಗೇಲರ್ ಮೈಕ್ ಜೊತೆ ಕಾಂಡೋಮ್ ಏಕಿದೆ ಅನ್ನೋದಕ್ಕೆ ಕಾರಣ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪತ್ರಕರ್ತೆ ಕೈಲಾ ಮಾತನಾಡಿದ್ದು, ಅನೇಕರು ನನ್ನ ಮೈಕ್ನಲ್ಲಿ ಏನಿದೆ ಎಂದು ನನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ನೀವೆಲ್ಲ ಯೋಚಿಸುತ್ತಿರುವುದು ಸರಿಯಾಗಿದೆ. ನಾನು ಮೈಕ್ನ್ನು ಮಳೆಯಿಂದ ರಕ್ಷಿಸಲು ಅದಕ್ಕೆ ಕಾಂಡೋಮ್ ಹಾಕಿದ್ದೇನೆ. ಮೈಕ್ಗೆ ನೀರು ತಾಕಿದರೆ ಅದು ಹಾಳಾಗುತ್ತದೆ. ಆಗ ನನಗೆ ವರದಿ ಮಾಡಲು ಸಾಧ್ಯವಾಗೋದಿಲ್ಲ. ಹೀಗಾಗಿ ನಾನು ಈ ರೀತಿಯ ಪ್ಲಾನ್ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ
ಇದನ್ನೂ ಓದಿ : Mallikarjuna Kharge : ಎಐಸಿಸಿ ಅಧ್ಯಕ್ಷರಾಗ್ತಾರಾ ಖರ್ಗೆ: ದಲಿತ ನಾಯಕನ ಆಯ್ಕೆಗೆ ಕಾರಣಗಳೇನು ಗೊತ್ತಾ?
TV Reporter Uses Condom To Protect Mic From Heavy Rains During Hurricane Ian