ಕೆಂಟುಕಿ ಫ್ರೈಡ್ ಚಿಕನ್ ಅಥವಾ ಕೆಎಫ್ಸಿ(KFC) ಅಂದರೆ ನಾನ್ ವೆಜ್ ಪ್ರಿಯರ ಬಾಯಲ್ಲಂತೂ ನೀರೂರುತ್ತೆ. ಕೆಎಫ್ಸಿ ನೀಡುವ ವಿಶಿಷ್ಟ ರುಚಿಯ ಚಿಕನ್ ಪದಾರ್ಥಗಳು ವಿಶ್ವ ಮಟ್ಟದಲ್ಲಿ ಮನ್ನಣೆಯನ್ನು ಸಂಪಾದಿಸಿದೆ. ಇದೇ ಕಾರಣಕ್ಕೆ ಕೆಎಫ್ಸಿ ವಿಶ್ವಾದ್ಯಂತ ಒಳ್ಳೆಯ ಹೆಸರನ್ನು ಸಂಪಾದಿಸಿದೆ. ಆದರೆ ಬ್ರಿಟನ್ನಲ್ಲಿ ಕೆಎಫ್ಸಿ ಮಳಿಗೆಗೆ ಭೇಟಿ ನೀಡಿದ ಮಹಿಳೆಗೆ ಮಾತ್ರ ವಿಚಿತ್ರ ಅನುಭವವಾಗಿದೆ. ತಾವು ಆರ್ಡರ್ ಮಾಡಿದ್ದ ಹಾಟ್ ವಿಂಗ್ಸ್ ಮೀಲ್ನಲ್ಲಿದ್ದ ಕೋಳಿಯ ತಲೆಯನ್ನು ಕಂಡು ಶಾಕ್ಗೆ ಒಳಗಾಗಿದ್ದಾರೆ.
ಗ್ಯಾಬ್ರಿಲ್ಲೆ ಎಂಬ ಹೆಸರಿನ ಮಹಿಳೆಯು ಕೋಳಿಯ ತಲೆಯ ಫೋಟೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ರಿವ್ಯೂ ಬರೆದಿದ್ದಾರೆ. ಕೆಎಫ್ಸಿಗೆ 2 ಸ್ಟಾರ್ ನೀಡಿರುವ ಗ್ಯಾಬ್ರಿಲ್ಲೆ ಪ್ರತಿಷ್ಠಿತ ಕೆಂಟುಕಿ ಫ್ರೈಡ್ ಚಿಕನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ರಿವ್ಯೂದ ಸ್ಕ್ರೀನ್ಶಾಟ್ ಇದೀಗ ಟ್ವಿಟರ್ನಲ್ಲಿ ಹರಿದಾಡುತ್ತಿದೆ. ರಿವ್ಯೂನಲ್ಲಿ ಮಹಿಳೆಯು, ನಾನು ಆರ್ಡರ್ ಮಾಡಿದ್ದ ಹಾಟ್ ವಿಂಗ್ ಮೀಲ್ನಲ್ಲಿ ನನಗೆ ಕೋಳಿಯ ತಲೆ ಸಿಕ್ಕಿದೆ ಎಂದು ಬರೆದಿದ್ದಾರೆ. ಮಹಿಳೆ ಪೋಸ್ಟ್ ಮಾಡಿರುವ ಫೋಟೋದಲ್ಲಿ ಕೋಳಿ ತಲೆ, ಕಣ್ಣು, ಕೊಕ್ಕು ಸ್ಪಷ್ಟವಾಗಿ ಗೋಚರವಾಗ್ತಿದೆ.
ಈ ಟ್ವೀಟ್ನ್ನು ಡಿಸೆಂಬರ್ 20ರಂದು ಪೋಸ್ಟ್ ಮಾಡಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಕೆಎಫ್ಸಿಗೆ ಭೇಟಿ ನೀಡಲು ಎರಡ್ಮೂರು ಬಾರಿ ಯೋಚಿಸುವಂತಾಗಿದೆ. ಫೋಟೋ ನೋಡಿದ ನೆಟ್ಟಿಗರೊಬ್ಬರು ಇದು ನಿಜಕ್ಕೂ ಅಸಹ್ಯವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಮತ್ತೊಬ್ಬರು ಚಿಕನ್ ತಲೆಯನ್ನು ನೋಡಿದ ಬಳಿಕವೂ ಕೆಎಫ್ಸಿಗೆ 2 ಸ್ಟಾರ್ ನೀಡಿದ ಮಹಿಳೆ ಬಗ್ಗೆ ನನಗೆ ಆಶ್ಚರ್ಯ ಎನಿಸುತ್ತಿದೆ ಎಂದು ಬರೆದಿದ್ದಾರೆ.
ಈ ಟ್ವೀಟ್ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದರೆ ವಿಚಾರ ಬ್ರಿಟನ್ನ ಕೆಎಫ್ಸಿ ಕಚೇರಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಎಫ್ಸಿ ಬ್ರಿಟನ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಈ ಫೋಟೋ ನೋಡಿ ನಮಗೂ ಆಘಾತವಾಗಿದೆ. ನಾವು ಚಿಕನ್ ಪೀಸುಗಳನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡುತ್ತೇವೆ. ಆದರೆ ಎಂತಹ ಅತ್ಯುತ್ತಮ ಯೋಜನೆ ಇದ್ದರೂ ಸಹ ಅಲ್ಲಲ್ಲಿ ಎಡವುದು ಸಾಮಾನ್ಯ. ಇದು ಕೂಡ ಅದೇ ರೀತಿಯ ಒಂದು ಪ್ರಕರಣವಾಗಿದೆ. ಇಂತಹದ್ದೊಂದು ಪದಾರ್ಥ ಸ್ವೀಕರಿಸಿದ ಬಳಿಕವೂ 2 ಸ್ಟಾರ್ ನೀಡಿದ ಗ್ಯಾಬ್ರಿಲ್ಲೆ ಉದಾರತೆಗೆ ನಾವು ಆಭಾರಿಯಾಗಿದ್ದೇವೆ ಎಂದು ಟ್ವೀಟಾಯಿಸಿದ್ದಾರೆ.
ಇದನ್ನು ಓದಿ : CM Basavaraj Bommai Change : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ ಬರ್ತವ್ರೇ ಅಮಿತ್ ಶಾ
UK woman finds fried chicken head in her hot wings meal; KFC responds as picture goes viral