Jeera Water as Toner : ಮುಖದ ಕಾಂತಿ ಹೆಚ್ಚಿಸಲು ಬಳಸಿ ಈ ನೈಸರ್ಗಿಕ ಟೋನರ್​​

Jeera Water as Toner :ಪ್ರತಿಯೊಬ್ಬ ಮಹಿಳೆಗೂ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ ದುಬಾರಿ ಸೌಂದರ್ಯವರ್ಧಕಗಳನ್ನು ಖರೀದಿ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅನೇಕ ಮಂದಿ ತ್ವಚೆಯನ್ನು ಆರೈಕೆ ಮಾಡುವ ಗೋಜಿಗೆ ಹೋಗೋದೇ ಇಲ್ಲ. ಆದರೆ ನೀವು ಇದಕ್ಕೆ ಅತಿಯಾಗಿ ಚಿಂತಿಸಬೇಕಿಲ್ಲ. ನಿಮ್ಮ ಮನೆಯಲ್ಲಿಯೇ ನೈಸರ್ಗಿಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಜೀರಿಗೆ ಸೇವನೆ ಮಾಡುವುದು ಹಾಗೂ ಅದನ್ನು ಚರ್ಮದ ಮೇಲೆ ಲೇಪನ ಮಾಡಿಕೊಳ್ಳುವುದರಿಂದ ನೀವು ಆರೋಗ್ಯವಂತ ತ್ವಚೆಯನ್ನು ಪಡೆಯಬಹುದಾಗಿದೆ.

ಹೌದು. ಜೀರಿಗೆಯನ್ನು ಬಳಸಿ ನೀವು ಮನೆಯಲ್ಲಿಯೇ ನೈಸರ್ಗಿಕವಾಗಿ ಸೌಂದರ್ಯವರ್ಧಕಗಳನ್ನು ತಯಾರಿಸಬಹುದಾಗಿದೆ.ಜೀರಿಗೆಯಲ್ಲಿ ತ್ವಚೆಯ ಆರೋಗ್ಯವನ್ನು ಹೆಚ್ಚಿಸುವಂತಹ ಸಾಮರ್ಥ್ಯವಿದೆ. ಹೀಗಾಗಿ ನೀವು ಜೀರಿಗೆಯಿಂದ ಟೋನರ್​ ತಯಾರಿಸಿಕೊಳ್ಳಬಹುದಾಗಿದೆ.

ಜೀರಿಗೆ ಟೋನರ್​ ತಯಾರಿಸುವುದು ಹೇಗೆ..?

1/2 ಕಪ್​ ಜೀರಿಗೆ ನೀರು
1/2 ಕಪ್​ ರೋಸ್​ ವಾಟರ್​
1 ವಿಟಮಿನ್​ ಇ ಮಾತ್ರೆ

ತಯಾರಿಸುವ ವಿಧಾನ :1/2 ಕಪ್​ ನೀರಿಗೆ 1 ಚಮಚ ಜೀರಿಗೆಯನ್ನು ಸೇರಿಸಿ ರಾತ್ರಿಯಿಡೀ ನೆನೆಯಲು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಈ ನೀರಿನಿಂದ ಜೀರಿಗೆಯನ್ನು ಬೇರ್ಪಡಿಸಿ. ಇದಕ್ಕೆ ನೀವು ರೋಸ್​ ವಾಟರ್​ ಹಾಗೂ ವಿಟಮಿನ್​ ಇ ಮಾತ್ರೆಯನ್ನು ಸೇರಿಸಿ ಒಂದು ಬಾಟಲಿಯಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಿ. ಇದನ್ನು ನೀವು ಪ್ರತಿನಿತ್ಯ ಮುಖ ತೊಳೆದ ಬಳಿಕ ಟೋನರ್​ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ.

ಈ ಟೋನರ್​ನಿಂದ ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದುಕೊಂಡಿದ್ದರೆ ನೀವು ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಶುದ್ಧವಾಗಿ ತೊಳೆದು ಮುಖಕ್ಕೆ ಈ ಟೋನರ್​ನ್ನು ಸ್ಪ್ರೇ ಮಾಡಿಕೊಳ್ಳಿ. ಬಳಿಕ ಬೆಳಗ್ಗೆ ಎದ್ದು ಮುಖವನ್ನು ತೊಳೆದುಕೊಳ್ಳಿ. ಕ್ರಮೇಣವಾಗಿ ನಿಮ್ಮ ಮುಖದಲ್ಲಿ ಕಾಣುವ ಕಾಂತಿ ನಿಮ್ಮನ್ನೇ ಆಶ್ಚರ್ಯಗೊಳಿಸಲಿದೆ.

ಇದನ್ನು ಓದಿ : Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

ಇದನ್ನೂ ಓದಿ: Toothache :ಹಲ್ಲು ನೋವಿನಿಂದ ಬಳಲುತ್ತಿದ್ದೀರೇ..? ನಿಮ್ಮ ಅಡುಗೆ ಮನೆಯಲ್ಲೇ ಇದೆ ಇದಕ್ಕೆ ಪರಿಹಾರ

ಇದನ್ನೂ ಓದಿ : ನವಜಾತ ಶಿಶುಗಳಿಗೆ ವರದಾನ : ಮಂಗಳೂರಿನಲ್ಲಿ ಸ್ಥಾಪನೆ ಆಗಲಿದೆ ಹ್ಯುಮನ್ ಮಿಲ್ಕ್ ಬ್ಯಾಂಕ್

ಇದನ್ನೂ ಓದಿ : Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

Use jeera water as toner to get the glowing skin

Comments are closed.