ಉತ್ತರ ಪ್ರದೇಶ : Pet Dog Bites Boy : ಶ್ವಾನಗಳು ಎಷ್ಟು ಮುದ್ದು ಎನಿಸುತ್ತವೆಯೋ ಸ್ವಲ್ಪ ಯಾಮಾರಿದ್ರೂ ಸಹ ಶ್ವಾನ ಕಡಿತದಿಂದ ಆಸ್ಪತ್ರೆ ಸೇರೋದು ಗ್ಯಾರಂಟಿ. ನಾವು ಸಾಕಿದ ನಾಯಿ ನಮಗೆ ಮುದ್ದು ಎನಿಸಿದರೂ ಸಹ ಅದು ಬೇರೆಯವರ ಪಾಲಿಗೂ ಹಾಗೇ ಎನಿಸಬೇಕು ಎಂದೇನಿಲ್ಲ. ನಾಯಿ ಕಡಿತದಿಂದ ಮೃತಪಟ್ಟ ಅನೇಕ ಮಕ್ಕಳ ಕತೆಗಳೇ ಈ ಹೇಳಿಕೆಗಳಿಗೆ ಸಾಕ್ಷಿಯಾಗಿದೆ. ಈ ಮಾತಿಗೆ ಪುಷ್ಠಿ ಎಂಬಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಹೌಸಿಂಗ್ ಸೊಸೈಟಿಯ ಲಿಫ್ಟ್ ಒಂದರಲ್ಲಿ ಈ ಭಯಾನಕ ಘಟನೆ ಸಂಭವಿಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೌಸಿಂಗ್ ಸೊಸೈಟಿಗೆ ಸೇರಿದ ಲಿಫ್ಟ್ ಒಂದರಲ್ಲಿ ಮಹಿಳೆ ಹಾಗೂ ಬಾಲಕನ ಜೊತೆಯಲ್ಲಿ ಒಂದು ಶ್ವಾನ ಕೂಡ ಇತ್ತು. ಇದು ಮಹಿಳೆಗೆ ಸೇರಿದ ಶ್ವಾನವಾಗಿರಬಹುದು. ಲಿಫ್ಟ್ನ ಒಳಗಡೆ ಈ ಶ್ವಾನವು ಏಕಾಏಕಿ ಬಾಲಕನ ಮೇಲೆ ದಾಳಿ ಮಾಡಿದೆ. ಆದರೆ ಮಹಿಳೆ ಮಾತ್ರ ಶ್ವಾನದಿಂದ ಬಾಲಕನನ್ನು ಕಾಪಾಡುವ ಗೋಜಿಗೆ ಹೋಗದೇ ಸುಮ್ಮನೇ ನಿಂತಿದ್ದಾಳೆ. ಈ ಭಯಾನಕ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Dog Bites Kid in Lift, See in the video Humanity shamed in #Ghaziabad, the dog bitten the child in the #lift, the woman kept looking at the innocent crying in pain#ViralVideo pic.twitter.com/iop1IKjyPe
— Dharmendra Mishra (@dharm_mishra82) September 6, 2022
ಸೋಶಿಯಲ್ ಮೀಡಿಯಾದಲ್ಲಿ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ವೈರಲ್ ಆಗಿದ್ದು ಶ್ವಾನವು ಬಾಲಕನ ಮೇಲೆ ಎರಗಿ ಕಚ್ಚುತ್ತಿರೋದನ್ನು ಕಾಣಬಹುದಾಗಿದೆ. ಬಾಲಕ ನೋವಿನಿಂದ ಅಳುತ್ತಾ ಶ್ವಾನ ಕಡಿತದಿಂದ ಉಂಟಾದ ಗಾಯಗಳನ್ನು ಮುಟ್ಟಿಕೊಳ್ಳುತ್ತಿರುವ ದೃಶ್ಯ ಮನಕಲುಕುವಂತಿದೆ. ಗಾಜಿಯಾಬಾದ್ನ ರಾಜನಗರ ಎಕ್ಸಟೆನ್ಶನ್ನ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಬಾಲಕನ ಪೋಷಕರು ಸ್ಥಳೀಯ ಠಾಣೆಗೆ ದೂರನ್ನು ಸಲ್ಲಿಸಿದ್ದಾರೆ.ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Suresh Rains Retires: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ
ಇದನ್ನೂ ಓದಿ : Bengaluru rain death : ಬೆಂಗಳೂರಿನಲ್ಲಿ ಮಳೆಯ ಮರಣ ಮೃದಂಗ : ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು
Uttar Pradesh: Pet Dog Bites Boy in Elevator As Owner Looks on; Case Filed