Actress Ramya tweets : ಮಳೆಗೆ ತತ್ತರಿಸಿದ ಮಹಾನಗರ : ಶಾಸಕರು, ಸಂಸದರಿಗೆ ರಮ್ಯ ಟ್ವೀಟ್ ಟಾಂಗ್

ಬೆಂಗಳೂರು : ಮಹಾಮಳೆಗೆ ಮಹಾನಗರ ಬೆಂಗಳೂರು (Heavy Rain Bangaluru) ದಿಕ್ಕಿಲ್ಲದಂತೆ ಮುಳುಗಿದೆ. ಕೆರೆಗಳಿಗೆ ಮಣ್ಣು ತುಂಬಿಸಿ ಎದ್ದು ನಿಂತ ಅಪಾರ್ಟ್ಮೆಂಟ್ ಗಳು, ಒತ್ತುವರಿಯಾದ ರಾಜಕಾಲುವೆಗಳು ತಮ್ಮ ಮೂಲ‌ ಸ್ವರೂಪಕ್ಕೆ ಮರಳಿದ್ದು ಜನರು ತಿನ್ನೋ ಅನ್ನ, ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಮಧ್ಯೆ ನಗರದ ಎಲ್ಲ ಅವಾಂತರಗಳಿಗೆ ರಿಯಲ್ ಎಸ್ಟೇಟ್ ಗುಮ್ಮನೇ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯವಾಗಿದ್ದರೂ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ (Actress Ramya tweets) ಮತ್ತೊಮ್ಮೆ ಈ ವಿಚಾರ ಪ್ರಸ್ತಾಪಿಸಿ ಟಾಂಟ್ ನೀಡೋ ಮೂಲಕ ಎಮ್ ಎಲ್ ಎ ಹಾಗೂ ಎಂಪಿಗಳಿಗೆ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಎಗ್ಗಿಲ್ಲದೇ ಬೆಳೆದ ರಿಯಲ್ ಎಸ್ಟೇಟ್ ಮಾಫಿಯಾ ಕೆರೆಗಳನ್ನು ನುಂಗಿ ಹಾಕಿದೆ. ಇವತ್ತು ಲೇ ಔಟ್ ಗಳಾಗಿ ದುಡ್ಡಿನ ಮನೆ ಸುರಿಸಿದ ಭೂಮಿಗಳೆಲ್ಲ ಒಂದೋ ಕೃಷಿ ಭೂಮಿ ಇಲ್ಲವೋ ಕೆರೆ. ಹೀಗಾಗಿಯೇ ಒಂದೊಂದು ಮಳೆಗೂ ಬೆಂಗಳೂರು ಮುಳುಗೇಳುತ್ತಿದೆ. ಈ ಮಧ್ಯೆ ನಗರದ ರಸ್ತೆ ಕಾಮಗಾರಿಯ ಕಳಪೆ ಕೆಲಸ, ಚರಂಡಿಯೇ ಇಲ್ಲದ ಪ್ಲ್ಯಾನಿಂಗ್ ಎಲ್ಲವೂ ಜನರನ್ನು ಹೈರಾಣಾಗಿಸಿದೆ.

ಈ ಮಧ್ಯೆ ಸದ್ಯ ಚಿತ್ರರಂಗ ಹಾಗೂ ರಾಜಕೀಯ ಎರಡರಿಂದಲೂ ದೂರ ಉಳಿದಿರೋ ನಟಿ ರಮ್ಯ, ಸೋಷಿಯಲ್ ಮೀಡಿಯಾದ ಮೂಲಕ ಮಳೆಯ ಅವಾಂತರಗಳ ಬಗ್ಗೆ ಗಮನ ಸೆಳೆಯೋ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಸುಸ್ಥಿತಿಗಾಗಿ ಅಕ್ರಮ ಕಟ್ಟಡಗಳನ್ನು ಕೆಡವುವರಿಗೆ ನಮ್ಮ ಮತ ಎಂದಿರುವ ರಮ್ಯ ಆ ಮೂಲಕ ಮಳೆಯ ಈ ದುಸ್ಥಿತಿಗೆ ಅಕ್ರಮ ಕಟ್ಟಡ ಹಾಗೂ ಒತ್ತುವರಿಯೇ ಕಾರಣ ಎಂದಿದ್ದಾರೆ.

ಅಲ್ಲದೇ ನಗರದಲ್ಲಿರೋ ಒಟ್ಟು 28 ಎಂಎಲ್ ಎ ಗಳಿಗೂ ಟಾಂಗ್ ಕೊಟ್ಟಿರೋ ನಟಿ ರಮ್ಯ, ಶಾಸಕರುಗಳೇ ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಡೆಸುತ್ತಾರೆ. ಎಷ್ಟು ಜನ ಶಾಸಕರಿಗೆ ರಿಯಲ್ ಎಸ್ಟೇಟ್ ಉದ್ಯಮವಿಲ್ಲ ಹೇಳಿ ನೋಡೋಣ ಎಂದು ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿ ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಎರಡೂ ಅತಿದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ರಾಜಕೀಯ ನಾಯಕರು,ಪ್ರಭಾವಿಗಳ ಬೆಂಬಲವಿದೆ ಅನ್ನೋದು ಹಲವು ಭಾರಿ ಸಾಬೀತಾಗಿದೆ. ಅದರಲ್ಲೂ ಎಮ್ ಎಲ್ ಎ ಗಳು ಶಾಮೀಲಾಗಿದ್ದಾರೆ ಅನ್ನೋದು ಬೆತ್ತಲೆ ಸತ್ಯ.

ಇದೇ ಸತ್ಯವನ್ನು ನಟಿ ರಮ್ಯ ನೇರವಾಗಿ ಟ್ವೀಟ್ ಮಾಡೋ ಮೂಲಕ ಬೆಂಗಳೂರು ಎಮ್ ಎಲ್ ಎ ಎಂಪಿಗಳಿಗೆ ಟ್ವೀಟ್ ಚಾಟಿ ಬೀಸಿದ್ದಾರೆ. ಇದಲ್ಲದೇ ಸಂಸದ ತೇಜಸ್ವಿ ಸೂರ್ಯ ದೋಸೆ ತಿಂದಿರೋ ವಿಡಿಯೋವನ್ನು ಹಂಚಿಕೊಂಡ ರಮ್ಯ ಸಂಸದರ ಹೊಣೆಗೇಡಿ ತನವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇದನ್ನೂ ಓದಿ : Bengaluru rain death : ಬೆಂಗಳೂರಿನಲ್ಲಿ ಮಳೆಯ ಮರಣ ಮೃದಂಗ : ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು

ಇದನ್ನೂ ಓದಿ : Pet Dog Bites Boy : ಲಿಫ್ಟ್​ನಲ್ಲಿ ಬಾಲಕನ ಮೇಲೆ ಶ್ವಾನದಿಂದ ಡೆಡ್ಲಿ ಅಟ್ಯಾಕ್​ : ಮೈ ಝುಂ ಎನ್ನಿಸುತ್ತೆ ಈ ವಿಡಿಯೋ

Heavy Rain Bangaluru Actress Ramya tweets to MLAs and MPs

Comments are closed.