ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ರೈಲುಗಳನ್ನ ನಿಲ್ಲಿಸೋದನ್ನು ಕೇಳಿರುತ್ತೀರಾ. ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಅನೇಕ ಕಡೆಗಳಲ್ಲಿ ಈ ರೀತಿ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ (Pakistan )ಮಾತ್ರ ಮೊಸರು ತರಬೇಕು ಎಂಬ ಕಾರಣಕ್ಕೆ ಮಾರ್ಗ ಮಧ್ಯದಲ್ಲಿ ರೈಲನ್ನು ನಿಲ್ಲಿಸಲಾಗಿದೆ..! ಈ ರೀತಿ ಬೇಜವಾಬ್ದಾರಿ ತೋರಿದ ರೈಲು ಚಾಲಕ ಹಾಗೂ ಆತನ ಸಹಾಯಕನನ್ನು ಇದೀಗ ಸೇವೆಯಿಂದ ವಜಾಗೊಳಿಸಳಾಗಿದೆ. ಸೋಮವಾರಂದು ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ಪಾಕಿಸ್ತಾನ ರೈಲು ಇಲಾಖೆ ಈ ಕ್ರಮ ಕೈಗೊಂಡಿದೆ.
ಕನ್ಹಾ ರೈಲು ನಿಲ್ದಾಣದ ಸಮೀಪದಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಲಾಹೋರ್ನಿಂದ ಹೊರಟಿದ್ದ ಈ ರೈಲು ಕರಾಚಿಯತ್ತ ಸಂಚರಿಸುತ್ತಿತ್ತು ಎನ್ನಲಾಗಿದೆ.
ವಿಡಿಯೋದಲ್ಲಿ ರೈಲು ಚಾಲಕ ಹಾಗೂ ಆತನ ಸಹಾಯಕ ಮೊಸರನ್ನು ಬೀದಿ ಬದಿಯ ಅಂಗಡಿಯೊಂದರಲ್ಲಿ ಕೊಂಡು ಬಳಿಕ ರೈಲು ಹತ್ತೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪಾಕ್ ರೈಲ್ವೆ ಇಲಾಖೆಗೆ ಈ ಘಟನೆ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ನೆಟ್ಟಿಗರೊಬ್ಬರು ಈತ ಮೊಸರು ತರೋಕೆ ರೈಲನ್ನೇ ನಿಲ್ಲಿಸುತ್ತಾನೆ ಅಂದರೆ ಸಿಹಿ ತಿಂಡಿ ತರಲು ವಿಮಾನದಲ್ಲಿಯೇ ಹೋಗುತ್ತಾನೆ ಎನಿಸುತ್ತೆ ಎಂದು ವ್ಯಂಗ್ಯವಾಗಿಡಿದ್ದರು.
ವಿಡಿಯೋಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಪಾಕಿಸ್ತಾನ ರೈಲ್ವೆ ಸಚಿವ ಅಜಾಮ್ ಖಾನ್ ಸ್ವಾತಿ ರೈಲು ಚಾಲಕ ರಾಣಾ ಮೊಹಮ್ಮದ್ ಶೆಹಜಾದ್ ಹಾಗೂ ಆವರ ಸಹಾಯಕ ಇಫ್ತಿಕಾರ್ ಹುಸೇನ್ರನ್ನು ಅಮಾನತುಗೊಳಿಸುವಂತೆ ಲಾಹೋರ್ ರೈಲ್ವೆ ಇಲಾಖೆಗೆ ಸೂಚನೆ ನೀಡಿದ್ದಾರೆ.
Inter-city train driver in Lahore gets suspended after making unscheduled stop to pick up some yoghurt.#pakistan #Railway #ViralVideo pic.twitter.com/n6csvNXksQ
— Naila Tanveer🦋 (@nailatanveer) December 8, 2021
ವೈಯಕ್ತಿಕ ಕೆಲಸಕ್ಕೆಂದು ಸಾರ್ವಜನಿಕ ಆಸ್ತಿಯನ್ನು ಈ ರೀತಿ ಬಳಕೆ ಮಾಡೋದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ರೀತಿ ಮಾರ್ಗ ಮಧ್ಯದಲ್ಲಿ ರೈಲನ್ನು ನಿಲ್ಲಿಸುವುದು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಾಗಿಲ್ಲ.ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಸುರಕ್ಷತೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಯಾವುದೇ ನಡೆಯನ್ನು ನಾವು ಸಹಿಸೋದಿಲ್ಲ ಎಂದು ಅಜಾಮ್ ಖಾನ್ ಹೇಳಿದ್ದಾರೆ.
Viral video: Pakistan driver stops train to buy dahi, suspended
ಇದನ್ನು ಓದಿ : Google list for top searches : 2021 ನೇ ಸಾಲಿನ ಗೂಗಲ್ನ ಟಾಪ್ 10 ಹುಡುಕಾಟದ ಲಿಸ್ಟ್ ಇಲ್ಲಿದೆ ನೋಡಿ