ಹೈದರಾಬಾದ್ :Hyderabad : ಸಂಚಾರ ಉಲ್ಲಂಘನೆ ಮಾಡಿದರೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸೋದು ಕಾಮನ್. ಹೀಗಾಗಿ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಟ್ರಾಫಿಕ್ ರೂಲ್ಸ್ ಪಾಲನೆ ಮಾಡುವುದು ತುಂಬಾನೇ ಅವಶ್ಯಕವಾಗಿದೆ. ಆದರೆ ಹೈದರಾಬಾದ್ನ ಅಮೀರ್ಪೇಟ್ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಸಂಚಾರ ಉಲ್ಲಂಘನೆ ಮಾಡಿದ ಕಾರಣಕ್ಕೆ ಬೈಕ್ ಸವಾರನಿಗೆ ಪೊಲೀಸರು ದಂಡ ವಿಧಿಸಿದ ಪರಿಣಾಮ ಕೋಪಗೊಂಡ 45 ವರ್ಷದ ಬೈಕ್ ಸವಾರ ತನ್ನ ಬೈಕ್ನ್ನೇ ಸುಟ್ಟು ಹಾಕಿದಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಬೈಕ್ ಸವಾರ ತನ್ನ ಬೈಕ್ಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಬೈಕ್ ಸಬಾರ ನಡುರಸ್ತೆಯಲ್ಲಿ ತನ್ನ ಬೈಕ್ಗೆ ಬೆಂಕಿ ಹಚ್ಚಿದ ಪರಿಣಾಮ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಕ್ಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಟ್ರಾಫಿಕ್ ಪೊಲೀಸರು ಯತ್ನಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ವನ್ ವೇ ರೋಡಿನಲ್ಲಿ ತಪ್ಪಾಗಿ ಬೈಕ್ ಓಡಿಸುತ್ತಿದ್ದ ಕಾರಣಕ್ಕೆ ಟ್ರಾಫಿಕ್ ಪೊಲೀಸರು 45 ವರ್ಷದ ವ್ಯಕ್ತಿಗೆ ದಂಡ ವಿಧಿಸಿದ್ದರು. ಈ ವಿಚಾರಕ್ಕಾಗಿ ಪೊಲೀಸರು ಹಾಗೂ ಬೈಕ್ ಸವಾರನ ನಡುವೆ ಕೆಲ ಕಾಲ ಮಾತಿನ ಜಟಾಪಟಿ ಉಂಟಾಗಿತ್ತು.
రాంగ్ రూట్ లో వచ్చాడు. ట్రాఫిక్ పోలీసులు ఆపారు. పోలీసులు అపినందుకు కోపం వచ్చింది. తన బైక్ లోని పెట్రోల్ తీసి బండి నీ తగల పెట్టారు. అదేమని అడిగితే పోలీసుల మీదకు తిరగ పడ్డారు. పోలీస్ లు అశోక్ ను అదుపులోకి తీసుకున్నారు. @CPHydCity @HYDTP #traffic pic.twitter.com/uhTjNmx1U7
— RameshVaitla (@RameshVaitla) October 3, 2022
ಟ್ರಾಫಿಕ್ ಪೊಲೀಸರು ತನ್ನ ಬೈಕ್ನ್ನು ಅಡ್ಡಗಟ್ಟಿ ದಂಡ ವಿಧಿಸಕ್ಕೆ ಕೋಪಗೊಂಡಿದ್ದ 45 ವರ್ಷದ ಬೈಕ್ ಸವಾರ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿದ್ದಾನೆ. ಎಂದು ಹೈದರಾಬಾದ್ನ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎ.ವಿ ರಂಗನಾಥ್ ಹೇಳಿದ್ದಾರೆ.
ಎಸ್.ಆರ್.ನಗರ ಸಂಚಾರ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದ ಗೃಹರಕ್ಷಕ ಅಧಿಕಾರಿ ಎಸ್.ಅಶೋಕ್ರ ಬೈಕ್ ನ್ನು ತಡೆದಿದ್ದಾರೆ. ಪೊಲೀಸರ ಜೊತೆ ವಾದ ವಿವಾದ ನಡೆಸಿದ ಅಶೋಕ್, ಕೂಡಲೇ ಮನೆ ಒಳಗೆ ಹೋಗಿ ಪೆಟ್ರೋಲ್ನ್ನು ತಂದಿದ್ದಾನೆ . ಕೂಡಲೇ ಪೆಟ್ರೋಲ್ನ್ನು ಬೈಕ್ಗೆ ಹಾಕಿ ಸುಟ್ಟಿದ್ದಾನೆ ಎಂದು ತಿಳಿದು ಬಂದಿದೆ.