Mayank Agarwal to lead Karnataka : ಸೈಯದ್ ಮುಷ್ತಾಕ್ ಅಲಿ ಟಿ20 : ಮನೀಶ್ ಪಾಂಡೆ ಕೈ ತಪ್ಪಿದ ನಾಯಕತ್ವ, ಕರ್ನಾಟಕ ತಂಡಕ್ಕೆ ಮಯಾಂಕ್ ಕ್ಯಾಪ್ಟನ್

ಬೆಂಗಳೂರು: (Mayank Agarwal to lead Karnataka) ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ (Syed Mushtaq Ali T20) ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಟಗಾರ ಮನೀಶ್ ಪಾಂಡೆಯವರನ್ನು ನಾಯಕತ್ವದಿಂದ ಕೆಳಗಿಳಿಸಿ ಮಯಾಂಕ್ ಅಗರ್ವಾಲ್’ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಮನೀಶ್ ಪಾಂಡೆ (Manish Pandey) ನಾಯಕತ್ವದಲ್ಲಿ ಕರ್ನಾಟಕ ತಂಡ 34 ಟಿ20 ಪಂದ್ಯಗಳನ್ನು ಆಡಿದ್ದು, 29ರಲ್ಲಿ ಗೆದ್ದು ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ವಿನ್ನಿಂಗ್ ಪರ್ಸಂಟೇಜ್ 85.29% ಇದ್ದರೂ ಪಾಂಡೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಕರ್ನಾಟಕ ತಂಡ ಈ ಬಾರಿಯ ದೇಶೀಯ ಕ್ರಿಕೆಟ್’ನಲ್ಲಿ ಹೊಸ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್ ಹೊರತು ಪಡಿಸಿ ಬ್ಯಾಟಿಂಗ್ ವಿಭಾಗದಲ್ಲಿ ಯುವ ಆಟಗಾರರಿಗೆ ಸ್ಥಾನ ನೀಡಲಾಗಿದೆ. KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಿಂಚಿದ್ದ ಬಲಗೈ ಆರಂಭಕಾರ ಎಲ್.ಆರ್ ಚೇತನ್ ಇದೇ ಮೊದಲ ಬಾರಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿ ಎಂಬಂತೆ ಹಿರಿಯ ಆಟಗಾರರಾದ ಕರುಣ್ ನಾಯರ್, ಆರ್.ಸಮರ್ಥ್ ಮತ್ತು ಕೆ.ವಿ ಸಿದ್ಧಾರ್ಥ್ 25 ಮಂದಿ ಸದಸ್ಯರ ಸಂಭಾವ್ಯ ತಂಡದಲ್ಲೇ ಸ್ಥಾನ ಪಡೆದಿರಲಿಲ್ಲ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ (Mayank Agarwal lead Karnataka)ಕರ್ನಾಟಕ ತಂಡ

ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ, ಎಲ್.ಆರ್ ಚೇತನ್, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮನೋಜ್ ಭಾಂಡಗೆ, ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್), ಬಿ.ಆರ್ ಶರತ್ (ವಿಕೆಟ್ ಕೀಪರ್), ಜೆ.ಸುಚಿತ್, ಎಂ.ವೆಂಕಟೇಶ್, ವೈಶಾಖ್ ವಿಜಯ್ ಕುಮಾರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿ.ಕೌಶಿಕ್, ವಿದ್ವತ್ ಕಾವೇರಪ್ಪ. ಕೋಚ್: ಪಿ.ವಿ ಶಶಿಕಾಂತ್, ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ತಂಡದ ವೇಳಾಪಟ್ಟಿ
ಅಕ್ಟೋಬರ್ 11: ಕರ್ನಾಟಕ Vs ಮಹಾರಾಷ್ಟ್ರ (ಸ್ಥಳ: ಮೊಹಾಲಿ)
ಅಕ್ಟೋಬರ್ 12: ಕರ್ನಾಟಕ Vs ಕೇರಳ (ಸ್ಥಳ: ಮೊಹಾಲಿ)
ಅಕ್ಟೋಬರ್ 14: ಕರ್ನಾಟಕ Vs ಮೇಘಾಲಯ (ಸ್ಥಳ: ಮೊಹಾಲಿ)
ಅಕ್ಟೋಬರ್ 16: ಕರ್ನಾಟಕ Vs ಅರುಣಾಚಲ ಪ್ರದೇಶ (ಸ್ಥಳ: ಮೊಹಾಲಿ)
ಅಕ್ಟೋಬರ್ 20: ಕರ್ನಾಟಕ Vs ಸರ್ವಿಸಸ್ (ಸ್ಥಳ: ಮೊಹಾಲಿ)
ಅಕ್ಟೋಬರ್ 22: ಕರ್ನಾಟಕ Vs ಹರ್ಯಾಣ (ಸ್ಥಳ: ಮೊಹಾಲಿ)

ಇದನ್ನೂ ಓದಿ : India vs South Africa 1st ODI: ಪದಾರ್ಪಣೆಯ ಪಂದ್ಯದಲ್ಲೇ ಭಾರತವನ್ನು ಸೋಲಿಸಿದ ಧೋನಿ ಶಿಷ್ಯ

ಇದನ್ನೂ ಓದಿ : Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

Mayank Agarwal to lead Karnataka Syed Mushtaq Ali T20

Comments are closed.