ಮಕ್ಕಳಿಗೆ ಏನಾದರೂ ಕೊಡಿಸೋದು ಅಂದರೆ ತಂದೆಗೆ ಅದು ಸಂಭ್ರಮವೇ ಸರಿ. ಮಕ್ಕಳ ಇಷ್ಟದ ವಸ್ತುಗಳನ್ನು ಕೊಡಿಸಿ ಅವರ ಮುಖದಲ್ಲಿ ಕಾಣುವ ಆನಂದವನ್ನು ನೋಡುವ ತಂದೆಗೆ ಅದಕ್ಕಿಂತ ದೊಡ್ಡ ಖುಷಿ ಮತ್ತೆಲ್ಲಿಯೂ ಸಿಗದು. ಮಧ್ಯಪ್ರದೇಶದಲ್ಲಿ ಟೀ ಮಾರುತ್ತಾ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಮಗಳಿಗೆ ಸ್ಮಾರ್ಟ್ಫೋನ್ ಕೊಡಿಸಿದ್ದನ್ನು ವಿಜೃಂಭಣೆಯಿಂದ ಸಂಭ್ರಮಿಸಿದ್ದಾರೆ. ವಾದ್ಯಗಳ ಸಮೇತ ಮೆರವಣಿಗೆ ಮಾಡುತ್ತಾ ಬಾಲಕಿಯನ್ನು ಅಲಂಕೃತ ಕುದುರೆ ಗಾಡಿಯ ಮೇಲೆ ಕೂರಿಸಿದ್ದಾರೆ. (celebrates purchase of smartphone)
ಅಂದಹಾಗೆ ಇದು ಇವರ ಕುಟುಂಬಕ್ಕೆ ಬಂದ ಮೊದಲ ಸ್ಮಾರ್ಟ್ಫೋನ್ ಅಂತೆ..! 12,500 ರೂಪಾಯಿ ಪಾವತಿಸಿ ಈ ಸ್ಮಾರ್ಟ್ ಫೋನ್ನ್ನು ಖರೀದಿ ಮಾಡಿದ್ದಾರೆ. ಸ್ಮಾರ್ಟ್ ಫೋನ್ ಹಾಗೂ ಮಕ್ಕಳ ಜೊತೆಯಲ್ಲಿ ತಂದೆಯು ಮೆರವಣಿಗೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕಿಯು ತನ್ನ ಸಹೋದರ ಸಹೋದರಿಯರ ಜೊತೆ ಕುಳಿತು ಬಣ್ಣದ ದೀಪಗಳಿಂದ ಅಲಂಕರಿಸಲಾದ ಕುದುರೆ ಗಾಡಿಯಲ್ಲಿ ಸಾಗಿದ್ದಾರೆ. ಮೆರವಣಿಗೆ ಉದ್ದಕ್ಕೂ ಧ್ವನಿವರ್ದಕಗಳ ಮೂಲಕ ಹಾಡನ್ನು ಪ್ಲೇ ಮಾಡಲಾಗಿದೆ.
ಚಹ ಮಾರಿ ಜೀವನ ಸಾಗಿಸುತ್ತಿರುವ ಮುರಳಿ ಕುಶ್ವಾಥಾ ಈ ವಿಚಾರವಾಗಿ ಮಾತನಾಡಿದ್ದು ಸ್ಮಾರ್ಟ್ ಫೋನ್ ಖರೀದಿ ಮಾಡಿದ ಬಳಿಕ ಮೊಬೈಲ್ ಅಂಗಡಿಯಿಂದಲೇ ಈ ಮೆರವಣಿಗೆ ಆರಂಭವಾಗಿದೆ. ಮೊಬೈಲ್ ಅಂಗಡಿಯಿಂದ ಶಿವಪುರಿಯಲ್ಲಿರುವ ಮನೆಯವರೆಗೂ ಮೆರವಣಿಗೆ ಮೂಲಕವೇ ಸಾಗಿದ್ದೇವೆ. ಮೆರವಣಿಯುದ್ದಕ್ಕು ಹಾಡು, ಕುಣಿತ ,ಡೋಲು ಹಾಗೂ ಪಟಾಕಿಯನ್ನು ಸಿಡಿಸಿದ್ದೇವೆ ಎಂದು ಹೇಳಿದರು. ಅಲ್ಲದೇ ನನ್ನ ಸ್ನೇಹಿತರಿಗೆ ಪಾರ್ಟಿ ನೀಡಿದ್ದೇನೆ ಎಂದೂ ಹೇಳಿದ್ದಾರೆ.
#WatchVideo: A tea seller in #MadhyaPradesh takes home a mobile phone worth Rs 12,500 with Band Baja Barat #News #ViralVideo #MadhyaPradeshNews #Viral #MobilePhone
— Free Press Journal (@fpjindia) December 21, 2021
Read More: https://t.co/z3KCIkJspa pic.twitter.com/y1NySu4laD
ಐದು ವರ್ಷದ ಮಗಳು ಬಹಳ ದಿನಗಳಿಂದ ತಂದೆಯ ಬಳಿ ಮೊಬೈಲ್ ಫೋನ್ಗೆ ಬೇಡಿಕೆ ಇಟ್ಟಿದ್ದಳಂತೆ.ಆ ವೇಳೆಯಲ್ಲಿ ತಂದೆಯು ನಾನು ನಿನಗೆ ಯಾವತ್ತು ಸ್ಮಾರ್ಟ್ ಫೋನ್ ಕೊಡಿಸುತ್ತೇನೆ ಅಂದು ಅದನ್ನು ಇಡೀ ಊರೇ ನೋಡುತ್ತದೆ ಎಂದು ಮಾತು ನೀಡಿದ್ದರಂತೆ. ಇದೇ ಕಾರಣಕ್ಕಾಗಿಯೇ ಮೊಬೈಲ್ ಅಂಗಡಿಯಿಂದ ಮನೆಯವರೆಗೂ ಮೆರವಣಿಗೆ ಮೂಲಕ ಸಾಗಿದ್ದಾಗಿ ಮುರುಳಿ ಹೇಳಿದ್ದಾರೆ.
WATCH | Tea seller in Madhya Pradesh celebrates purchase of smartphone for daughter by taking out procession
ಇದನ್ನೂ ಓದಿ : horse Price : ಅಬ್ಬಬ್ಬಾ..ಎರಡು ಬೆಂಜ್ ಕಾರಿನ ಮೌಲ್ಯಕ್ಕೆ ಸಮ ಈ ಕುದುರೆಯ ಬೆಲೆ..!