22 Crore Stolen Passwords : ಬರೋಬ್ಬರಿ 22 ಕೋಟಿ ಪಾಸ್​ವರ್ಡ್​ಗಳು ಸೋರಿಕೆ..! ನಿಮ್ಮ ಖಾತೆಯೂ ಆಗಿರಬಹುದು ಹ್ಯಾಕ್​​​

ಬ್ರಿಟನ್​​ನಲ್ಲಿ ರಾಷ್ಟ್ರೀಯ ಅಪರಾಧ ಸಂಸ್ಥೆ ಹಾಗೂ ರಾಷ್ಟ್ರೀಯ ಸೈಬರ್​ ಅಪರಾಧ ಘಟಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜಗತ್ತಿನಾದ್ಯಂತ ಹ್ಯಾಕರ್​ಗಳು ಕದ್ದಿದ್ದ 22.5 ಕೋಟಿ ಪಾಸ್​ವರ್ಡ್​ಗಳನ್ನು(22 Crore Stolen Passwords) ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಹ್ಯಾಕ್​ ಮಾಡಲಾದ ಈ ಪಾಸ್​ವರ್ಡ್​ಗಳನ್ನು ಕ್ಲೌಡ್​ ಸ್ಟೋರೇಜ್​​ನಿಂದ ವಶಕ್ಕೆ ಪಡೆಯಲಾಗಿದೆ. ವಿಶ್ವದ ಜನತೆಯ ರಕ್ಷಣೆಯ ದೃಷ್ಟಿಯಿಂದ ಈ ಪಾಸ್​ವರ್ಡ್​ಗಳನ್ನು ಹೆಚ್​ಐಬಿಪಿ ಡೇಟಾಬೇಸ್​ಗೆ ಪೊಲೀಸರು ದಾನ ಮಾಡಿದ್ದಾರೆ.


ಕ್ಲೌಡ್​ ಡೇಟಾಬೇಸ್​ನಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಕದಿಯಲಾದ ಇಮೇಲ್​ ಐಡಿಗಳು ಹಾಗೂ ಪಾಸ್​ವರ್ಡ್​ಗಳನ್ನು ಹಿಂಪಡೆದಿದ್ದೇವೆ ಎಂದು ಎನ್​ಸಿಎಸ್​ ಮಾಹಿತಿಯನ್ನು ನೀಡಿದೆ. ಸೋರಿಕೆಯಾಗಿರುವ ಪಾಸ್​ವರ್ಡ್​ಗಳನ್ನು ಸೈಬರ್​ ವಂಚಕರ ಪಾಲಿಗೆ ಬಂಪರ್​ ಲಾಟರಿ ಇದ್ದಂತೆ. ಬ್ಯಾಂಕಿಗ್​ ಸೇವೆ ಸೇರಿದಂತೆ ಯಾವುದೇ ಆನ್​ಲೈನ್​ ಸೇವೆಗಳಲ್ಲಿ ನಿಮ್ಮ ಪಾಸವರ್ಡ್​ ಏನಾಗಿರಬಹುದು ಎಂಬುದನ್ನು ಊಹಿಸುತ್ತಾರೆ. ಪೊಲೀಸರು ಈ ಪಾಸ್​ವರ್ಡ್​ಗಳನ್ನು Have I Been Pwned ಎಂಬ ವೆಬ್​ಸೈಟ್​ನಲ್ಲಿ ಹಂಚಿಕೊಳ್ಳುವ ಮೂಲಕ ನಿಮ್ಮ ಪಾಸ್​​ವರ್ಡ್​ ಈಗಾಗಲೇ ಸೈಬರ್​ ಕ್ರಿಮಿನಲ್​ಗಳ ಲಿಸ್ಟ್​ನಲ್ಲಿ ಇದೆಯೇ ಇಲ್ಲವೇ ಎಂಬುದನ್ನು ನೀವು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ಒಂದು ವೇಳೆ ಈ ಲಿಸ್ಟ್​ನಲ್ಲಿ ನಿಮ್ಮ ಪಾಸ್​ವರ್ಡ್ ಇದ್ದರೆ ನೀವು ಕೂಡಲೇ ನಿಮ್ಮೆಲ್ಲ ಪಾಸ್​ವರ್ಡ್​ಗಳನ್ನು ಬದಲಾಯಿಸಿಕೊಳ್ಳುವುದು ಉತ್ತಮ.

ಈಗಾಗಲೇ ಪೊಲೀಸರು 61.3 ಮಿಲಿಯನ್​ ಪಾಸ್​ವರ್ಡ್​ಗಳನ್ನು ಈ ವೆಬ್​ಸೈಟ್​ನಲ್ಲಿ ಹಾಕಿದ್ದರು. ಇದೀಗ ಈ ಪಟ್ಟಿಗೆ ಮತ್ತೆ 22 ಕೋಟಿ ಕದ್ದ ಪಾಸ್​​ವರ್ಡ್​ಗಳನ್ನು ಸೇರ್ಪಡೆ ಮಾಡಲಾಗಿದೆ. ಅಂದಹಾಗೆ ಒಂದೇ ಬಾರಿಗೆ ಇಷ್ಟು ದೊಡ್ಡ ಮೊತ್ತದ ಕದ್ದ ಪಾಸ್​ವರ್ಡ್​ಗಳು ಇದೇ ಮೊದಲ ಬಾರಿಗೆ ಸಿಕ್ಕಿವೆ ಎಂದು ಹೆಚ್​​ಐಬಿಪಿ ಮಾಹಿತಿ ನೀಡಿದೆ.

ನಿಮ್ಮ ಪಾಸ್​ವರ್ಡ್​ ಕದ್ದ ಪಾಸ್​ವರ್ಡ್​ಗಳ ಪಟ್ಟಿಯಲ್ಲಿ ಇದೆಯೇ ಎಂದು ನೋಡಿಕೊಳ್ಳಲು ನೀವು https://haveibeenpwned.com/. ವೆಬ್​ಸೈಟ್​ಗೆ ತೆರಳಿ. ನಂತರ ಇಮೇಲ್ ಐಡಿಯನ್ನು ನಮೂದಿಸಬೇಕು. ಬಳಿಕ pwned?’ ಎಂಬ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ. ಇಲ್ಲಿ ನಿಮಗೆ ನಿಮ್ಮ ಪಾಸ್​ವರ್ಡ್​ ಸೋರಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಗಲಿದೆ.

ಇದನ್ನು ಓದಿ: horse Price : ಅಬ್ಬಬ್ಬಾ..ಎರಡು ಬೆಂಜ್​​ ಕಾರಿನ ಮೌಲ್ಯಕ್ಕೆ ಸಮ ಈ ಕುದುರೆಯ ಬೆಲೆ..!

ಇದನ್ನೂ ಓದಿ : celebrates purchase of smartphone : ಮೊಬೈಲ್​ ಖರೀದಿಸಿದ ಖುಷಿಗೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..!

Police ‘Donates’ Over 22 Crore Stolen Passwords: Check Whether Your Password Is Hacked Or Not

Comments are closed.