ಉಡುಪಿ : ಮದುವೆ ಅಂದಾಕ್ಷಣ ಮನೆ, ಮನದಲ್ಲಿ ಸಂತಸ, ಸಂಭ್ರಮ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಮದುವೆಯನ್ನು ವಿಶಿಷ್ಟವಾಗಿ ಆಚರಿಸೋದಕ್ಕೆ ಕಾತರರಾಗಿರು ತ್ತಾರೆ. ಅಂತೆಯೇ ಉಡುಪಿಯಲ್ಲಿ ನಡೆದ ತಂಗಿಯ ಮದುವೆಯಲ್ಲಿ ಅಣ್ಣಂದಿರ ಜೊತೆಗೆ ಮನೆ ಮಂದಿಯೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ( Wedding Dance) ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.

ಉಡುಪಿ ಜಿಲ್ಲೆಯ ಕಟಪಾಡಿಯ ರಾಮ ಕರ್ಕೇರ ಹಾಗೂ ಸುಮತಿ ಕರ್ಕೇರ ಅವರ ಪುತ್ರಿ ಶ್ರುತಿ ಹಾಗೂ ಅಶ್ಮಿತ್ ಅವರ ವಿವಾಹವು ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆಯಲ್ಲಿ ಮದುವೆ ಮಂಟಪಕ್ಕೆ ಮದುಮಗಳನ್ನು ಕರೆ ತರುವ ವೇಳೆಯಲ್ಲಿ ಶ್ರುತಿ ಅವರ ಸಹೋದರರಾದ ಜಿತೇಶ್ ಕುಮಾರ್ ಹಾಗೂ ರಾಕೇಶ್ ಕಟಪಾಡಿ ಅವರು ನನ್ನ ತಂಗಿಯ ಮದುವೆ ಹಾಡಿಗೆ ಹೆಜ್ಜೆ ಹಾಕೋದಕ್ಕೆ ಶುರು ಮಾಡಿದ್ರು.

ವಧುವನ್ನು ಡ್ಯಾನ್ಸ್ ಮೂಲಕವೇ ವೇದಿಕೆಗೆ ಕರೆತಂದ ಸಹೋದರ ಜೊತೆಗೆ ವೇದಿಕೆಯಲ್ಲಿ ಮನೆ ಮಂದಿಯೆಲ್ಲಾ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಮದುವೆ ಸಂಭ್ರಮವನ್ನು ಉಣಬಡಿಸಿದ್ರು. ಜಿತೇಶ್ ಕುಮಾರ್ ಪತ್ರಕರ್ತರಾಗಿ ಹೆಸರು ಮಾಡಿದ್ದಾರೆ. ಈ ಹಿಂದೆ ಜಿತೇಶ್ ಅವರ ಸಹೋದರ ರಾಕೇಶ್ ಕಟಪಾಡಿ ಅವರು ನಾಟಕ ಕಲಾವಿದರಾಗಿದ್ದು, ವ್ಯವಹಾರ ಮಾಡಿಕೊಂಡಿ ದ್ದಾರೆ. ರಾಕೇಶ್ ಕಟಪಾಡಿ ಅವರ ಮದುವೆಯಲ್ಲೂ ಮನೆ ಮಂದಿಯೆಲ್ಲಾ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ರು. ಇದೀಗ ತಂಗಿಯ ಮದುವೆಯಲ್ಲೂ ಅದೇ ಸಂಪ್ರದಾಯ ಮುಂದುವರಿದಿದೆ.
ಇನ್ನು ವರ ಅಶ್ಮಿತ್ ಅಕ್ಸೆಂಚರ್‌ನಲ್ಲಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ರೆ, ಶ್ರುತಿ ಭಾರತ್ ಬ್ಯಾಂಕ್ ನ ಸಿಬ್ಬಂದಿಯಾಗಿದ್ದಾರೆ. ಜಿತೇಶ್ ಅವರ ಮನೆಯಲ್ಲಿನ ಮದುವೆ ಅಂದ್ರೆ ವಿಭಿನ್ನ ಮತ್ತು ವಿಶಿಷ್ಟ. ಕರಾವಳಿ ಭಾಗದಲ್ಲಿ ಡಿಜೆ, ಡ್ರಿಂಕ್ಸ್ ಇರಲಿಲ್ಲ, ಬದಲಾಗಿ ಭಾರತೀಯ ಸಂಸ್ಕೃತಿಯಂತೆ ಮೆಹಂದಿ ಶಾಸ್ತ್ರವನ್ನು ನೆರವೇರಿಸಿದ್ದರು.
ಇದನ್ನೂ ಓದಿ : ಮಲ್ಪೆ ಬೀಚಿನಲ್ಲಿ ಮುಳುಗಿ ಕೇರಳದ ಮೂವರು ವಿದ್ಯಾರ್ಥಿಗಳು ಸಾವು
ಇದನ್ನೂ ಓದಿ : ಮಂಗಳೂರಲ್ಲಿ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಪೋಟ : ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ
Wedding Dance : sister marriage brothers dance video viral in Udupi