Will Smith :ಕಪಾಳ ಮೋಕ್ಷ ಮಾಡಿದ ವಿಲ್​ಸ್ಮಿತ್​​ಗೆ 10 ವರ್ಷ ಆಸ್ಕರ್ ಸಮಾರಂಭದಿಂದ ನಿಷೇಧ

ಆಸ್ಕರ್​ ವೇದಿಕೆಯಲ್ಲಿ ಪತ್ನಿ ಬಗ್ಗೆ ತಮಾಷೆ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ವಿಲ್​ ಸ್ಮಿತ್ (Will Smith)​​ ಹಾಸ್ಯ ನಟ ಕ್ರಿಸ್​ ರಾಕ್​​ಗೆ ಕಪಾಕ್ಷ ಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಚಾರವಾಗಿ ಇದೀಗ ಆಸ್ಕರ್​ ಅಕಾಡೆಮಿ ವಿಲ್​ ಸ್ಮಿತ್​ರಿಗೆ ಬರೋಬ್ಬರಿ 10 ವರ್ಷಗಳ ಕಾಲ ಆಸ್ಕರ್ ಸಮಾರಂಭದಿಂದ ನಿಷೇಧ ಹೇರಿದೆ.

ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ & ಸೈನ್ಸಸ್​ ಈ ಬಗ್ಗೆ ಅಧಿಕೃತ ಹೇಳಿದೆ ನೀಡಿದೆ. ಈ ಆದೇಶವು 2022 ಏಪ್ರಿಲ್​ 8ರಿಂದ ಮುಂದಿನ 10 ವರ್ಷಗಳ ಕಾಲ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವಿಲ್​ ಸ್ಮಿತ್​ ಅಕಾಡೆಮಿಯ ಯಾವುದೇ ಸಮಾರಂಭಗಳಿಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ ಎಂದು ಅಕಾಡೆಮಿಯ ಅಧ್ಯಕ್ಷ ಡೇವಿಡ್​ ರೂಬಿನ್​ ಹಾಗೂ ಸಿಇಓ ಡಾನ್​ ಹಡ್ಸನ್​ ಹೇಳಿಕೆ ನೀಡಿದ್ದಾರೆ.


ಲಾಸ್​ ಏಂಜಲೀಸ್​ನಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ಈ ಮೊದಲು ಏಪ್ರಿಲ್​ 18ನೇ ತಾರೀಖಿನಂದು ನಿಗದಿ ಪಡಿಸಲಾಗಿತ್ತು. ಅಕಾಡೆಮಿಗೆ ಕಳೆದ ವಾರ ಸ್ಮಿತ್​ ರಾಜೀನಾಮೆ ನೀಡಿದ ಬಳಿಕ ಇದೀಗ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.


ದಶಕಗಳ ಕಾಲ ಆಸ್ಕರ್​ ಸಮಾರಂಭದಿಂದ ನಿಷೇಧವನ್ನು ಹೊಂದಿರುವುದರ ಬಗ್ಗೆ ಹೇಳಿಕೆ ನೀಡಿದ ವಿಲ್​ ಸ್ಮಿತ್​, ನಾನು ಅಕಾಡೆಮಿಯ ನಿರ್ಧಾರವನ್ನು ಸ್ವಾಗತಿಸುತ್ತಿದ್ದೇನೆ ಹಾಗೂ ಈ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ : Yogi Adityanath : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್

ಇದನ್ನೂ ಓದಿ : KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್

Actor Will Smith banned from attending Oscars for 10 years

Comments are closed.